ಸುದ್ದಿ 

ವಿಜಯಪುರದಲ್ಲಿ ಸಾಮಾಜಿಕ ವೈಮನಸ್ಯ ಹುಟ್ಟುಹಾಕುವ ವಿಡಿಯೋ ಕುರಿತು ಎಫ್‌.ಐ.ಆರ್

Taluknewsmedia.com

ಬೆಂಗಳೂರು 21 ಆಗಸ್ಟ್ 2025
ಡಾ. ಬಿ.ಆರ್. ಅಂಬೇಡ್ಕರ್ ದಲಿತ ಧ್ವನಿ ವೇದಿಕೆ (ರಿ) ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಮಂಜುನಾಥ್ ಅವರು, ಕೆ.ಎನ್. ಜಗದೀಶ್ ಕುಮಾರ್ ವಿರುದ್ಧ ಎಫ್‌.ಐ.ಆರ್ ದಾಖಲಿಸಿದ್ದಾರೆ.

ಮಂಜುನಾಥ್ ಅವರ ಪ್ರಕಾರ, ಜಗದೀಶ್ ಕುಮಾರ್ ಅವರು 11-08-2025 ರಂದು ತಮ್ಮ ಇನ್‌ಸ್ಟಾಗ್ರಾಂ ಖಾತೆ ಮೂಲಕ ಒಂದು ವಿಡಿಯೋವನ್ನು ಶೇರ್ ಮಾಡಿದ್ದು, ಅದರಲ್ಲಿ ವಿಜಯಪುರ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಉದ್ದೇಶಿಸಿ ಮಾತನಾಡುತ್ತಾ, ಜಾತಿ-ಧರ್ಮ ಆಧಾರಿತ ಉಸ್ಕರಿಸುವ ಹೇಳಿಕೆಗಳನ್ನು ನೀಡಿದ್ದಾರೆ.

ವಿಡಿಯೋದಲ್ಲಿ ಅವರು
“ನಿನ್ನ ಇಬ್ಬರು ಗಂಡು ಮಕ್ಕಳಿಗೆ ಒಬ್ಬರಿಗೆ SC/ST ಸಮುದಾಯದ ಹೆಣ್ಣು ಹಾಗೂ ಮತ್ತೊಬ್ಬರಿಗೆ ಮುಸ್ಲಿಂ ಸಮುದಾಯದ ಹೆಣ್ಣು ಮದುವೆ ಮಾಡಿಸೋಣ. ಅದಕ್ಕೆ ನನಗೆ ₹5 ಕೋಟಿ ಫಂಡಿಂಗ್ ಸಿಗಲಿದೆ” ಎಂದು ಹೇಳಿದ್ದಾರೆ.

ಅಲ್ಲದೆ SC/ST ಸಮುದಾಯದ ಹೆಣ್ಣುಮಕ್ಕಳ ಕುರಿತು ಹಲವು ಬಾರಿ ತುಚ್ಛ ರೀತಿಯಲ್ಲಿ ಮಾತನಾಡಿದ್ದಾರೆ.
ದೂರುದಾರರ ಪ್ರಕಾರ, ಈ ಹೇಳಿಕೆಗಳು –
SC/ST ಸಮುದಾಯದ ಗೌರವಕ್ಕೆ ಧಕ್ಕೆ ಉಂಟುಮಾಡುವಂತಿವೆ.
ಹಿಂದೂ–ಮುಸ್ಲಿಂ ಸಮುದಾಯಗಳ ನಡುವಿನ ಸಾಮರಸ್ಯಕ್ಕೆ ಭಂಗ ತರುವಂತಿವೆ.
ಸಮಾಜದಲ್ಲಿ ಜಾತಿ-ಧರ್ಮದ ಆಧಾರದ ಮೇಲೆ ದ್ವೇಷ, ವೈಮನಸ್ಸು, ವಿಭಜನೆ ಹುಟ್ಟುಹಾಕುವಂತಿವೆ.
ಈ ಹಿನ್ನೆಲೆಯಲ್ಲಿ, ಮಂಜುನಾಥ್ ತಮ್ಮ ಸಂಘಟನೆಯ ಪರವಾಗಿ ಕೊಡಿಗೆಹಳ್ಳಿ ಪೊಲೀಸರ ಬಳಿ ದೂರು ಸಲ್ಲಿಸಿದ್ದು, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ

Related posts