ವಿದೇಶಿ ಆರೋಪಿಯ ಬಂಧನ – ಎನ್.ಬಿ.ಡಬ್ಲ್ಯೂ ವಾರೆಂಟ್ ಜಾರಿಯ ನಂತರ ಪೊಲೀಸರು ವಶಕ್ಕೆ
ಬೆಂಗಳೂರು:21 ಆಗಸ್ಟ್ 2025
ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೊ.ಸಂ.360/2023, ಕಲಂ 8(ಸಿ), 22(ಸಿ), 14 ಆಫ್ ಫಾರಿನರ‍್ಸ್ ಆಕ್ಟ್ ಪ್ರಕರಣದಲ್ಲಿ ಆರೋಪಿಯಾಗಿದ್ದ ಪೀಟರ್ ಐಕಿಡಿ ಬಿಲೋನ್ ಎಂಬ ವಿದೇಶಿ ಮೂಲದ ವ್ಯಕ್ತಿ ಹಲವು ಬಾರಿ ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
ಈ ಹಿನ್ನೆಲೆಯಲ್ಲಿ, ಮಾನ್ಯ ಸಿ.ಸಿ.ಎಚ್ 35 ನ್ಯಾಯಾಲಯವು ಆರೋಪಿಯ ವಿರುದ್ಧ ಎನ್.ಬಿ.ಡಬ್ಲ್ಯೂ (Non-Bailable Warrant) ಜಾರಿಗೊಳಿಸಿತ್ತು.
ಪೊಲೀಸರು ಈ ವಾರೆಂಟ್ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ, 2025ರ ಆಗಸ್ಟ್ 20 ರಂದು ರಾತ್ರಿ 11.00 ಗಂಟೆಗೆ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಹಾಜರುಪಡಿಸಿದ್ದಾರೆ.
ಅವರ ವಿರುದ್ಧ ಈಗ ಕಲಂ 269 ಬಿ.ಎನ್.ಎಸ್ ಅನ್ವಯ ಹೊಸ ಪ್ರಕರಣವೂ ದಾಖಲಾಗಿದ್ದು, ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ

