ಸುದ್ದಿ 

ವಾಟ್ಸಾಪ್ ನಂಬರ ಹ್ಯಾಕ್ ಮಾಡಿ ₹60,000 ವಂಚನೆ

Taluknewsmedia.com

ಬೆಂಗಳೂರು:21 ಆಗಸ್ಟ್ 2025
ನಗರದಲ್ಲಿ ದೊಡ್ಡ ಬೆಟ್ಟಳ್ಳಿ ಯಲ್ಲಿ ಮತ್ತೊಂದು ವಾಟ್ಸಾಪ್ ವಂಚನೆಯ ಪ್ರಕರಣ ಬೆಳಕಿಗೆ ಬಂದಿದೆ. 18-08-2025 ರಂದು, ಒಬ್ಬ ವ್ಯಕ್ತಿಯ ಸ್ನೇಹಿತನ ವಾಟ್ಸಾಪ್ ನಂಬರವನ್ನು ಅಪರಿಚಿತರು ಹ್ಯಾಕ್ ಮಾಡಿಕೊಂಡು “ಹಣದ ಅವಶ್ಯಕತೆ ಇದೆ” ಎಂದು ಸಂದೇಶ ಕಳುಹಿಸಿದ್ದಾರೆ.

ಕೃಷ್ಣಮೂರ್ತಿ ಅವರು ಅದನ್ನು ನಂಬಿ, ನೀಡಲಾದ ಖಾತೆ ಸಂಖ್ಯೆ 3862002101011780 (PUNB0004100) ಹಾಗೂ ಫೋನ್‌ಪೇ/ಜಿಪೇ ನಂಬರುಗಳಾದ 7763048771, 8409465877ಗಳಿಗೆ ಒಟ್ಟು ₹60,000 ರು. ಹಣ ವರ್ಗಾವಣೆ ಮಾಡಿದ್ದಾರೆ. ನಂತರ ಅನುಮಾನಗೊಂಡ ಅವರು ನೇರವಾಗಿ ತಮ್ಮ ಸ್ನೇಹಿತನಿಗೆ ಕರೆ ಮಾಡಿದಾಗ, ಅವರ ವಾಟ್ಸಾಪ್ ನಂಬರವನ್ನು ಹ್ಯಾಕ್ ಮಾಡಲಾಗಿದೆ ಎಂಬುದು ತಿಳಿದು ಬಂದಿದೆ.

ಈ ಕುರಿತು ತಕ್ಷಣವೇ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ವಂಚನೆ ಮಾಡಿದವರನ್ನು ಪತ್ತೆಹಚ್ಚಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೀಡಿತರು ಮನವಿ ಮಾಡಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಾಟ್ಸಾಪ್ ನಂಬರ ಹ್ಯಾಕ್ ಮಾಡಿ ಹಣ ವಂಚಿಸುವವರ ವಿರುದ್ಧ ತನಿಖೆ ಮುಂದುವರೆಸಿದ್ದಾರೆ.

Related posts