ಗಂಗರಾಜು ಕಾಣೆಯಾದ ಪ್ರಕರಣ –ರಾಜನಕುಂಟೆ ಪೊಲೀಸರು ತನಿಖೆ ಪ್ರಾರಂಭಿಸಿದರು
ಬೆಂಗಳೂರು ಗ್ರಾಮಾಂತರ:21 ಆಗಸ್ಟ್ 2025
ಚಾಲಕರಾಗಿ ಕೆಲಸ ಮಾಡುತ್ತಿದ್ದ ಗಂಗರಾಜು (33) ಎಂಬ ವ್ಯಕ್ತಿ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಗಂಗರಾಜು ಆಗಸ್ಟ್ 15, 2025 ರಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಮನೆಯಿಂದ ಹೊರಟು ಹೋದವರು. ನಂತರ ಅವರು ಮರಳಿ ಮನೆಗೆ ಬಾರದೇ ಕಾಣೆಯಾಗಿದ್ದಾರೆ. ಕುಟುಂಬಸ್ಥರು ಮತ್ತು ಬಂಧುಗಳು ಹಲವೆಡೆ ಹುಡುಕಿದರೂ ಪತ್ತೆಯಾಗದೆ, ಪತ್ನಿ ರಾಜನಕುಂಟೆ ಪೊಲೀಸ್ ಠಾಣೆಗೆ ಬಂದು ಅಧಿಕೃತವಾಗಿ ದೂರು ನೀಡಿದ್ದಾರೆ.
ಪತ್ನಿಯ ಹೇಳಿಕೆಯ ಪ್ರಕಾರ, ಗಂಗರಾಜು ಸಾದೇನಹಳ್ಳಿ ಗ್ರಾಮದ ಅನಿತಾ ಎಂಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡು ಮನೆಯಿಂದ ತೆರಳಿರುವ ಶಂಕೆ ವ್ಯಕ್ತವಾಗಿದೆ.
ಕಾಣೆಯಾದ ಗಂಗರಾಜು ಅವರ ಗುರುತು ವಿವರಗಳು:
ವಯಸ್ಸು: 33 ವರ್ಷ
ಎತ್ತರ: 5.9 ಅಡಿ
ಬಣ್ಣ: ಎಣ್ಣೆಗೆಂಪು
ದೇಹದ ಬಗೆ: ದೃಢಕಾಯ
ಮುಖ: ಗುಂಡು ಮುಖ, ಗಡ್ಡ ಮತ್ತು ಮೀಸೆ
ಭಾಷೆಗಳು: ಕನ್ನಡ, ತೆಲುಗು, ತಮಿಳು ಮಾತನಾಡುವ ಸಾಮರ್ಥ್ಯ
ಹಚ್ಚು ಗುರುತುಗಳು: ಎದೆಯ ಮೇಲೆ “LG”, ಎಡಗೈಯಲ್ಲಿ “ಸೋಲರ್”
ಈ ಪ್ರಕರಣವನ್ನು ರಾಜನಕುಂಟೆ ಪೊಲೀಸ್ ಠಾಣಾ ಮೊ.ಸಂ. 239/2025 ಅಡಿಯಲ್ಲಿ ಗಂಗರಾಜು ಕಾಣೆಯಾದ ಪ್ರಕರಣವಾಗಿ ದಾಖಲಿಸಿ, ಪೊಲೀಸರು ತನಿಖೆ ಆರಂಭಿಸಿದ್ದಾರೆ.

