ಸುದ್ದಿ 

ಬೆಂಗಳೂರು ನಗರದಲ್ಲಿ ಪೀಕ್ ಅವರ್ಸ್ ವೇಳೆ ಲಾರಿ ಓಡಿಸಿದ ಚಾಲಕನ ವಿರುದ್ಧ ಕ್ರಮ

Taluknewsmedia.com

ಬೆಂಗಳೂರು: 21 ಆಗಸ್ಟ್ 2025
ನಗರದೊಳಗಿನ ಪೀಕ್ ಅವರ್ಸ್ ಸಮಯದಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧವನ್ನು ಉಲ್ಲಂಘಿಸಿ ಲಾರಿ ಓಡಿಸಿದ ಪ್ರಕರಣದಲ್ಲಿಯಲಹಂಕ ಸಂಚಾರಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಮಾಹಿತಿಯ ಪ್ರಕಾರ, 19-08-2025 ಬೆಳಿಗ್ಗೆ ಸುಮಾರು 9 ಗಂಟೆಗೆ, ವಿದ್ಯಾಶಿಲ್ಪ ಕ್ರಾಸ್ ಜಂಕ್ಷನ್ ಬಳಿ ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರು, ನಿಷೇಧಿತ ಸಮಯದಲ್ಲಿ (ಬೆಳಿಗ್ಗೆ 4.00ರಿಂದ 9.00ರವರೆಗೆ) E-52-0-3816 ನಂಬರಿನ ಟಿಪ್ಪರ್ ಲಾರಿ ನಗರದಲ್ಲಿ ಸಂಚರಿಸುತ್ತಿದ್ದನ್ನು ಪತ್ತೆಹಚ್ಚಿದರು.

ಚಾಲಕನು ಮುನಿರಾಜು (25), ಶಾನುಭೋಗನಹಳ್ಳಿ ಗ್ರಾಮ, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ ಮೂಲದವನು ಎಂದು ಗುರುತಿಸಲಾಗಿದೆ. ಈತನನ್ನು ಲಾರಿಯೊಂದಿಗೆಯಲಹಂಕ ಸಂಚಾರಿ ಠಾಣೆಗೆ ಕರೆತರಲಾಗಿದ್ದು, ನಗರ ಪೊಲೀಸ್ ಆಯುಕ್ತರ ಅಧಿಸೂಚನೆ (119/()/2014, ದಿನಾಂಕ 16-12-2014) ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಪೀಕ್ ಅವರ್ಸ್ ಸಮಯದಲ್ಲಿ ಭಾರಿ ವಾಹನಗಳು ಸಂಚರಿಸುವುದರಿಂದ ಸಾರ್ವಜನಿಕರ ವಾಹನ ಸಂಚಾರಕ್ಕೆ ಗಂಭೀರ ಅಡಚಣೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ, ಇಂತಹ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Related posts