ನೋ ಪಾರ್ಕಿಂಗ್ ನಿಯಮ ಉಲ್ಲಂಘನೆ – ವಾಹನ ಚಾಲಕ ವಿರುದ್ಧ ಕ್ರಮ
ಬೆಂಗಳೂರು, 21 ಆಗಸ್ಟ್ 2025
ನಗರದ ಮೇಜರ್ ಸಂದಿಹ ಉನ್ನಿಕೃಷ್ಣನ್ ಮುಖ್ಯರಸ್ತೆಯ ಮ್ಯಾಕ್‌ಡೊನಾಲ್ಡ್ ಸ್ಟೋರ್ ಮುಂಭಾಗದಲ್ಲಿ “ನೋ ಪಾರ್ಕಿಂಗ್” ಬೋರ್ಡ್ ಕೆಳಗೆ ಸರಕು ವಾಹನವನ್ನು ನಿಲ್ಲಿಸಿದ್ದ ಘಟನೆ ಬೆಳಕಿಗೆ ಬಂದಿದೆ.
ಸಂಜೆ ಸುಮಾರು 5.58ರ ಹೊತ್ತಿಗೆ ಕೋಬ್ರಾ ಗಸ್ತು ಕರ್ತವ್ಯದಲ್ಲಿದ್ದಯಲಹಂಕ ಸಂಚಾರಿ ಪೊಲೀಸರು ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದುದನ್ನು ಗಮನಿಸಿ, ಟಾಟಾ ಇಂಟ್ರಾ ಗುಡ್ ವಾಹನ (ಕೆಎ-53-ವೈ-9734) ಅನ್ನು ಸ್ಥಳದಲ್ಲಿಯೇ ಪರಿಶೀಲಿಸಿದರು.
ವಾಹನ ಚಾಲಕನನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸಿದಾಗ, ಆತನು ನಾಗರಾಜು ಎಂ (29), ಮಗ ಮುನಿಸ್ವಾಮಿ, ನಿವಾಸಿ – 560049 ಎಂದು ಪತ್ತೆಯಾಯಿತು.
ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡಚಣೆ ಉಂಟುಮಾಡಿದ ಕಾರಣ, ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

