ಯಶವಂತಪುರದಲ್ಲಿ ಸ್ಕೂಟರ್ ಕಳ್ಳತನ ಪ್ರಕರಣ
ಯಶವಂತಪುರದಲ್ಲಿ ಸ್ಕೂಟರ್ ಕಳ್ಳತನ ಪ್ರಕರಣ
ಬೆಂಗಳೂರು 22 ಆಗಸ್ಟ್ 2025
ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ಕೂಟರ್ ಕಳ್ಳತನ ಪ್ರಕರಣ ವರದಿಯಾಗಿದೆ. 27 ವರ್ಷದ ಅಹಾರ್.ಟಿ ಬಿನ್ ಥಹಾ ವಿ ಅವರು ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಅವರು ಯಶವಂತಪುರದಲ್ಲಿರುವ ಬೆಲೆಕ್ ಇಂಡಿಯಾ ಲಿಮಿಟೆಡ್‌ನಲ್ಲಿ ಹೆಚ್.ಆರ್ ಆಗಿ ಕೆಲಸ ಮಾಡುತ್ತಿದ್ದು, ದಿನಾಂಕ 19.08.2025ರ ಮಧ್ಯರಾತ್ರಿ ಸುಮಾರು 2.20ಕ್ಕೆ ತಮ್ಮ ಹೊಂಡಾ ದ್ವಿಚಕ್ರ ವಾಹನ (ನಂಬರು: KL-23-P-6201) ಅನ್ನು ತಮ್ಮ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದರು.
ಬೆಳಿಗ್ಗೆ ಸುಮಾರು 7.30ಕ್ಕೆ ನೋಡಿದಾಗ ವಾಹನ ಕಾಣಿಸದೆ ಹೋದ ಕಾರಣ, ಅನಾಮಿಕರು ಸುಮಾರು ₹40,000 ಮೌಲ್ಯದ ಸ್ಕೂಟರ್‌ನ್ನು ಕಳವು ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಪಿರ್ಯಾದುದಾರರು ತಮ್ಮ ಕೆಲಸದ ನಿರತೆಯಿಂದ ತಡವಾಗಿ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

