ಸಂಪಿಗೆಹಳ ಪೊಲೀಸ್ ಠಾಣೆ – ಎಂ.ಡಿ.ಎಂ.ಎ ವಶಪಡಿಕೆ ಪ್ರಕರಣ
ಬೆಂಗಳೂರು 22 ಆಗಸ್ಟ್ 2022
ದಿನಾಂಕ 21-08-2025 ಮಧ್ಯರಾತ್ರಿ, ಸಂಪಿಗೆಹಳ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ರವರ ನೇತೃತ್ವದಲ್ಲಿ, ಥಣಿಸಂದ್ರದ ಅಲಿ ಮಸೀದಿ ಹತ್ತಿರದ ಕಾರ್ ಗ್ಯಾರೇಜ್‌ನಲ್ಲಿ ದಾಳಿ ನಡೆಸಲಾಯಿತು. ಮಾಹಿತಿ ಆಧಾರವಾಗಿ, ಗ್ಯಾರೇಜ್‌ನಲ್ಲಿ ಒಬ್ಬ ವ್ಯಕ್ತಿ ಎಂ.ಡಿ.ಎಂ.ಎ ಮಾದಕ ವಸ್ತು ಸಂಗ್ರಹಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲು ಕಾಯುತ್ತಿದ್ದನೆಂಬ ಸುಳಿವು ಪೊಲೀಸರಿಗೆ ದೊರಕಿತ್ತು.
ಪಂಚರು ಮತ್ತು ಸಿಬ್ಬಂದಿಗಳೊಂದಿಗೆ ದಾಳಿ ಮಾಡಿದ ವೇಳೆ, ಆರೋಪಿ ಸೈಯ್ಯದ್ ಜಾವೀದ್ ಅಲಿಯಾಸ್ ಬೆಂಡ್ ಜಾವೀದ್ (34 ವರ್ಷ) ಬಂಧಿತನಾಗಿದ್ದು, ಅವನಿಂದ ಸುಮಾರು 13 ಗ್ರಾಂ ಎಂ.ಡಿ.ಎಂ.ಎ, ಒಂದು ತೂಕದ ಯಂತ್ರ ಹಾಗೂ ಚಾಕು ವಶಪಡಿಸಿಕೊಳ್ಳಲಾಗಿದೆ. ಸೋಕೊ ತಂಡದಿಂದ ವಶಪಡಿಸಿದ ವಸ್ತು ಎಂ.ಡಿ.ಎಂ.ಎ ಆಗಿರುವುದು ಖಚಿತಪಡಿಸಲಾಯಿತು.
ಆರೋಪಿಯ ವಿರುದ್ಧ ಸಂಬಂಧಿತ ಕಾನೂನು ಪ್ರಕಾರ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

