ಯಮಹಾ ಬೈಕ್ ಕಳ್ಳತನ: ಕೇರಳಕ್ಕೆ ಹೋದ ಮಾಲೀಕ ವಾಪಸ್ಸು ಬಂದಾಗ ವಾಹನ ಕಾಣೆಯಾದ ಪ್ರಕರಣ
ಬೆಂಗಳೂರು:22 ಆಗಸ್ಟ್ 2025
ಯಲಹಂಕ ಕಟ್ಟಿಗೆನಹಳ್ಳಿ ಎಲ್ಲಿ ಮತ್ತೊಂದು ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ವರದಿಯಾಗಿದೆ. ಅರುಣ್ ಸಿ ಅವರು ನೀಡಿದ ಮಾಹಿತಿಯ ಪ್ರಕಾರ, ಅವರು ತಮ್ಮ Yamaha FZS ಬೈಕ್ (ನಂಬರ KA51-C-89295) ಅನ್ನು ಮನೆಯ ಬಳಿ ನಿಲ್ಲಿಸಿ, 01/07/2025 ರಂದು ತಮ್ಮ ಸ್ವಂತ ಊರಾದ ಕೇರಳಕ್ಕೆ ತೆರಳಿದ್ದರು.
21/08/2025 ಬೆಳಿಗ್ಗೆ 9.00 ಗಂಟೆಗೆ ವಾಪಸ್ಸು ಬಂದಾಗ ಬೈಕ್ ಸ್ಥಳದಲ್ಲಿಲ್ಲವೆಂದು ಗಮನಿಸಿದ ಅವರು ತಕ್ಷಣ ಎಲ್ಲಾ ಕಡೆ ಹುಡುಕಾಟ ನಡೆಸಿದರು. ಆದರೆ ವಾಹನ ಪತ್ತೆಯಾಗದ ಕಾರಣ ಅವರು ಯಲಹಂಕ ಪೊಲೀಸ್ ಠಾಣೆಗೆ ದೂರು ದಾಖಲಿಸಿದರು.
ಮಾಲೀಕರು ಸುಮಾರು ₹20,000 ನಷ್ಟ ಅನುಭವಿಸಿದ್ದಾರೆಂದು ತಿಳಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬೈಕ್ ಕಳ್ಳತನಕ್ಕೆ ಸಂಬಂಧಿಸಿದವರನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ವಾಹನದ ಸುಳಿವು ತಿಳಿದವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.

