ಸುದ್ದಿ 

ಮಾರುತಿ ನಗರದಲ್ಲಿ ದಾರುಣ ಅಪಘಾತ – 10 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ

Taluknewsmedia.com


ಬೆಂಗಳೂರು 22 ಆಗಸ್ಟ್ 2025
ಬೆಂಗಳೂರು: 21.08.2025 ರಂದು ಬೆಳಿಗ್ಗೆ ಸುಮಾರು 8:20 ಗಂಟೆಗೆ ಮಾರುತಿ ನಗರ, ಕೋಗಿಲು ಮುಖ್ಯ ರಸ್ತೆಯ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಹತ್ತಿರ ದಾರುಣ ರಸ್ತೆ ಅಪಘಾತ ಸಂಭವಿಸಿದೆ.

ಯಲಹಂಕ ಸಂಚಾರಿ ಪೊಲೀಸರ ಪ್ರಕಾರ, ತನ್ನಿ ಕೃಷ್ಣ (10) ಹಾಗೂ ಕೃತಿ ಕೃಪಾ (5) ಎಂಬ ಇಬ್ಬರು ಮಕ್ಕಳನ್ನು ಸ್ಕೂಟರ್‌ನಲ್ಲಿ ಕೂರಿಸಿಕೊಂಡು ಪೋಷಕರು ರಸ್ತೆ ಮೇಲೆ ಸಾಗುತ್ತಿದ್ದರು. ಈ ವೇಳೆ ಕೋಗಿಲು ಕ್ರಾಸ್ ದಿಕ್ಕಿನಿಂದ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದ ಬಿ.ಎಂ.ಟಿ.ಸಿ ಬಸ್ (ನಂಬರ್ KA-57-F-5375) ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ನಂತರ ಬಸ್ ಚಕ್ರವು ತನ್ನಿ ಕೃಷ್ಣ ಅವರ ತಲೆಯ ಮೇಲೆ ಹಾದಿದ್ದು, ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಘಟನೆಯ ನಂತರ ಸ್ಥಳೀಯರು ಮತ್ತು ಯಲಹಂಕ ಸಂಚಾರಿ ಪೊಲೀಸರು ತಕ್ಷಣ ನೆರವಿಗೆ ಧಾವಿಸಿದರೂ ಮಗುವಿನ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಈ ಅಪಘಾತಕ್ಕೆ ಕಾರಣನಾದ ಬಸ್ ಚಾಲಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೋಷಕರು ದೂರು ನೀಡಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

Related posts