ಶಾಂತಿನಿಕೇತನ ಶಾಲಾ ವಿದ್ಯಾರ್ಥಿ ಕಾಣೆ –ಕೊಡುಗೆಹಳ್ಳಿ ಪೊಲೀಸರಲ್ಲಿ ದೂರು
ಬೆಂಗಳೂರು 23 ಆಗಸ್ಟ್ 2025
ಕಾಳೀಗ ಜಾಜರಾಗಿ ನಿವಾಸಿ ಮಲ್ಲಯ್ಯ ಅವರ 13 ವರ್ಷದ ಮಗ ಯುವರಾಜ ಕಾಣೆಯಾಗಿರುವ ಘಟನೆ ನಡೆದಿದೆ. ಯುವರಾಜನು ಭದ್ರಪ್ಪ ಲೇಔಟ್‌ನ ಶಾಂತಿನಿಕೇತನ ಶಾಲೆಯ 8ನೇ ತರಗತಿಯಲ್ಲಿ ಓದುತ್ತಿದ್ದು, 21-08-2025 ರಂದು ಬೆಳಿಗ್ಗೆ 7.45ಕ್ಕೆ ಸೈಕಲ್‌ನಲ್ಲಿ ಶಾಲೆಗೆ ತೆರಳಿದ್ದ. ಆದರೆ ಸಂಜೆ ಮನೆಗೆ ಮರಳದೆ, ಪೋಷಕರು ಹುಡುಕಾಟ ನಡೆಸಿದಾಗ ಮನೆಯ ಪಕ್ಕದ ರಸ್ತೆಯಲ್ಲಿ ಅವನ ಸೈಕಲ್ ಮತ್ತು ಶಾಲಾ ಬ್ಯಾಗ್ ಸಿಕ್ಕಿವೆ.
ಸ್ನೇಹಿತರು, ಆಟದ ಮೈದಾನ ಹಾಗೂ ಸಂಬಂಧಿಕರ ಬಳಿ ವಿಚಾರಿಸಿದರೂ ಬಾಲಕನ ಪತ್ತೆಯಾಗಿಲ್ಲ. ಕಾಣೆಯಾಗುವ ಸಮಯದಲ್ಲಿ ಅವನು ನೀಲಿ ಬಣ್ಣದ ಪ್ಯಾಂಟ್ ಮತ್ತು ಬಿಳಿ-ನೀಲಿ ಮಿಶ್ರಿತ ಶಾಲಾ ಸಮವಸ್ತ್ರ ಧರಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಕೊಡುಗೆಹಳ್ಳಿ ಪೊಲೀಸರು ಯುವರಾಜನ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ

