ಶಿಗ್ಗಾಂವಿ ತಾಲೂಕ್ ಬಂಕಾಪುರದಲ್ಲಿ 18 ವರ್ಷದ ವಿದ್ಯಾರ್ಥಿನಿ ಕಾಣೆ
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರದ ಕೊಟ್ಟಿಗೇರಿ ಓಣಿಯಲ್ಲಿ 18 ವರ್ಷದ ಯುವತಿ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಪೊಲೀಸರ ಪ್ರಕಾರ, ಪ್ರತಿಕ್ಷಾ ಕಟ್ಟಿಮಣಿ ತಂದೆ ಜಗದೀಶ ಕಟ್ಟಿಮಣಿ, ವಯಸ್ಸು 18 ವರ್ಷ ಎಂಬ ವಿದ್ಯಾರ್ಥಿನಿ ಆಗಸ್ಟ್ 11 ರ ಮಧ್ಯಾಹ್ನ 12 ಗಂಟೆ ಸುಮಾರಿಗೆ ತನ್ನ ಮನೆಯಿಂದ “ಆಧಾರ್ ಕಾರ್ಡ್ ಮತ್ತು SSLC ಮಾರ್ಕ್ಸ್ ಕಾರ್ಡ್ ಝರಾಕ್ಸ ಮಾಡಿಸಿಕೊಂಡು ಬರುತ್ತೇನೆ” ಎಂದು ಹೇಳಿಕೊಂಡು ಮನೆಯಿಂದ ಹೊರಟಿದ್ದಾಳೆ. ಆದರೆ ಅವಳು ಮನೆಗೆ ಮರಳಿಲ್ಲ ಕುಟುಂಬಸ್ಥರು ತುಂಬಾ ಆತಂಕಕ್ಕೊಳಗಾಗಿದ್ದಾರೆ
ತಾಯಿ ವೀಣಾ ಕಟ್ಟಿಮಣಿ ಅವರು ತಮ್ಮ ಮಗಳು ಪತ್ತೆಯಾಗದೇ ಇರುವ ಹಿನ್ನೆಲೆಯಲ್ಲಿ 13 ಆಗಸ್ಟ್ ರಂದು ಬಂಕಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಹುಡುಕಾಟ ಮುಂದುವರೆಸಿದ್ದಾರೆ
: ವರದಿ
ಪ್ರಮೋದ್ ಜನಗೇರಿ
ಹಾನಗಲ್ ತಾಲೂಕ್ ಆಲದಕಟ್ಟಿ
ತಾಲೂಕ್ ನ್ಯೂಸ್ .ಹಾವೇರಿ
6360821691

