ಶಿಗ್ಗಾವಿಯಲ್ಲಿ ಮಟಕಾ ಜೂಜಾಟ ಪ್ರಕರಣ
ಶಿಗ್ಗಾವಿ ತಾಲೂಕಿನ ಕಾಮನಹಳ್ಳಿ ಗ್ರಾಮದ ಬಸವಣ್ಯನ ಸರ್ಕಲ್ ಬಳಿ ಸಾರ್ವಜನಿಕ ರಸ್ತೆಯಲ್ಲಿ ಮಟಕಾ ಜೂಜಾಟ ನಡೆಸುತ್ತಿದ್ದ ವ್ಯಕ್ತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಗಸ್ಟ್ 22, 2025ರಂದು ಮುಂಜಾನೆ ಸುಮಾರು 10.30 ಗಂಟೆಯ ಸುಮಾರಿಗೆ ಪ್ರಕಾಶ್ ಪೀರಪ್ಪಾ ಪಡುವಳ್ಳಿ ಎಂಬ ವ್ಯಕ್ತಿ ಸಾರ್ವಜನಿಕ ರಸ್ತೆಯಲ್ಲಿ ನಿಂತುಕೊಂಡು ಜನರಿಂದ ಹಣ ಪಡೆದು “₹1ಕ್ಕೆ ₹80 ಕೊಡುವುದಾಗಿ” ಹೇಳುತ್ತಾ ಒ.ಸಿ. ಚೀಟಿಗಳನ್ನು ಬರೆದು ಕೊಡುವ ಮೂಲಕ ಓ.ಸಿ. ಮಟಕಾ ಜೂಜಾಟ ನಡೆಸುತ್ತಿದ್ದನೆಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಯಿತು.
ಈ ಹಿನ್ನೆಲೆಯಲ್ಲಿ ಶಿಗ್ಗಾವಿ ಪೊಲೀಸ್ ಠಾಣೆಯ ಪಿಎಸ್ಐ–2 ಅವರು ಸರ್ಕಾರಿ ಪರವಾಗಿ ಸ್ವತಃ ತಾವೇ ದೂರನ್ನು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ
ಪ್ರಕರಣವು ಸಾರ್ವಜನಿಕ ವಿರೋಧಿ ಸ್ವರೂಪದ್ದಾಗಿದ್ದರಿಂದ ಘನ ನ್ಯಾಯಾಲಯದ ಅನುಮತಿ ಪಡೆದುಕೊಂಡು ತನಿಖೆ ಮುಂದುವರಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
: ವರದಿ
ಪ್ರಮೋದ್ ಜನಗೇರಿ
ಹಾನಗಲ್ ತಾಲೂಕ್ ಆಲದಕಟ್ಟಿ
ತಾಲೂಕ್ ನ್ಯೂಸ್ .ಹಾವೇರಿ
6360821691

