ತಿಳವಳ್ಳಿಯಲ್ಲಿ ಮಹಿಳೆಯ ಮೇಲೆ ಲೈಂಗಿಕ ಹಲ್ಲೆ ಅಕ್ರಮ ಸಂಬಂಧ ಹೊಂದುವಂತೆ ಒತ್ತಾಯ
ತಿಳವಳ್ಳಿಯಲ್ಲಿ ಮಹಿಳೆಯ ಮೇಲೆ ಲೈಂಗಿಕ ಹಲ್ಲೆ ಅಕ್ರಮ ಸಂಬಂಧ ಹೊಂದುವಂತೆ ಒತ್ತಾಯಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ತಿಳವಳ್ಳಿ ಗ್ರಾಮದಲ್ಲಿ ಜೂಲೈ 31ನೆ ತಾರಿಕಿನಂದು ಮುಂಜಾನೆ 11 ಗಂಟೆಯ ಸುಮಾರಿಗೆ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆದೂರುದಾರ ಮಹಿಳೆ ಮಂಗಳಾ ಮಾದರ ಇವರು ಅವಿವಾಹಿತರಾಗಿದ್ದು ಇವರು ಸುಮಾರು 1 ವರ್ಷ 6ತಿಂಗಳುಗಳಿಂದ ತಿಳವಲ್ಲಿ ಗ್ರಾಮದ ಕೃಷ್ಣಮೂರ್ತಿ ಲಕ್ಷ್ಮಪ್ಪ ಉಡುಗಣಿ ಇವರ ವಿಜಯ ಟೆಕ್ಸಸ್ಟೈಲ್ ಹೆಸರಿನ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಹೋಗುತ್ತಿರುತ್ತಾರೆ ಹೀಗಿದ್ದಾಗ ಈ ಬಟ್ಟೆ ಅಂಗಡಿಯ ಮಾಲೀಕರ ಸ್ವಂತ ಅಣ್ಣನಾದ ಮಹಾಬಲೇಶ್ವರ ಲಕ್ಷ್ಮಪ್ಪ ಉಡುಗಣಿ ಎಂಬಾತನು ಹಿಂದಿನಿಂದಲೂ ಅವರ ಅಣ್ಣನ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಂಗಳಾ ಮಾದರ ಅನ್ನುವ ಮಹಿಳೆಗೆ ಪದೇ ಪದೇ ನೀನು ನನ್ನ ಜೊತೆ ಅಕ್ರಮ ಸಂಬಂಧ ಇಟ್ಟುಕೋ ಎಂದು ಪೀಡಿಸುತ್ತ ಬಂದಿರುತ್ತಾನೆ ಅವಳು ಅದಕ್ಕೆ ಒಪ್ಪದೇ ಇದ್ದಾಗ ನಿನ್ನನ್ನಾ ರೇಪ್ ಮಾಡಿ ನಿನ್ನ ಕಥೆ ಮುಗಿಸುತ್ತೇನೆ ಎಂದು ಬೆದರಿಕೆ ಹಾಕುತ್ತಾ ಬಂದಿರುತ್ತಾನೆ ಹೀಗಿದ್ದಾಗ ಮೊನ್ನೆ ಜೂಲೈ 31 ನೆ ತಾರಿಕಿನಂದು ದಿಢೀರ್ ಅಂತ ಬಟ್ಟೆ ಅಂಗಡಿಗೆ ನುಗ್ಗಿ ಮಂಗಳಾ ಮಾದರ ಮುಂಜಾನೆ ಸುಮಾರು 10:30 ಗಂಟೆಗೆ ಅಂಗಡಿಯಲ್ಲಿ ಕೆಲಸಮಾಡುತ್ತಿರುವಾಗಲೇ ಅವರ ಮೇಲೆ 2 ಜನ ಅಂದರೆ ಕೃಷ್ಣಮೂರ್ತಿ ಅವರ ಅಣ್ಣಂದಿರು ಆದ ಆರೋಪಿ1 ಮಹಾಬಲೇಶ್ವರ ಮತ್ತು ಆರೋಪಿ2 ಸೂರ್ಯನಾರಾಯಣ ಅವರು ಆಕೆಯ ಮೇಲೆ ಲೈಂಗಿಕ ಹಲ್ಲೆಗೆ ಯತ್ನಿಸಿದ್ದಾರೆ ಆ ಆರೋಪಿಗಳಲ್ಲಿ ಪ್ರಮುಖರು ಮಹಾಬಲೇಶ್ವರ ಲಕ್ಷ್ಮಪ್ಪ ಉಡುಗಣಿ,ಸೂರ್ಯನಾರಾಯಣ ಲಕ್ಷ್ಮಪ್ಪ ಉಡುಗಣಿ, ಜೊತೆಗೆ ಅವರ ಹೆಂಡತಿಯರಾದಸುಜಾತಾ ಸೂರ್ಯನಾರಾಯಣ ಉಡುಗಣಿ,ತಾರಕೇಶ್ವರಿ ಮಹಾಬಲೇಶ್ವರ ಉಡುಗಣಿ,ಪ್ರತಿಭಾ ಮಹಾಬಲೇಶ್ವರ ಉಡುಗಣಿ. ಈ ಮೇಲಿನ ಆರೋಪಿಗಳು ಆ ಮಹಿಳೆಗೆ ಕಾಲಿನಿಂದ ಒದ್ದಿದ್ದಾರೆ ಅವಳಮೇಲೆ ಚಪ್ಪಲಿ ಎಸೆದಿದ್ದಾರೆ ಎದೆಗೆ ಒದ್ದಿದ್ದಾರೆ ದೊಣ್ಣೆ ತಗೆದುಕೊಂಡು ಹೊಡೆದಿದ್ದಾರೆ ಇದು ಇನ್ನೂ ಕಡಿಮೆ ನಿನ್ನ ಜಾತಿ ಬೇರೆ ನೀನು ಕೀಳು ಜಾತಿಯವಳು ಎಂದು ಜಾತಿ ಹೆಸರಲ್ಲಿ ನಿಂದನೆ ಮಾಡಿ ನೀನು ಇಲ್ಲಿಂದ ಕೆಲಸ ಬಿಡು ಮೊದಲು ಇಲ್ಲವಾದಲ್ಲಿ ನಿನ್ನನ್ನ ರೇಪ್ ಮಾಡಿ ಕೊಲೆ ಮಾಡುತ್ತೇನೆ ಅಂತ ಬೆದರಿಕೆ ಹಾಕಿದ್ದಾರೆ ಇದರಿಂದ ನೊಂದುಕೊಂಡ ಮಂಗಳಾ ಮಾದರ ಅನ್ನೋ ಮಹಿಳೆ ತಕ್ಷಣ ಹಾನಗಲ್ ತಾಲೂಕಿನ ಆಡುರ ಪೊಲೀಸರಿಗೆ ಮಾಹಿತಿ ತಿಳಿಸಿ ದೂರು ನೀಡಿದ್ದಾರೆ ಪೊಲೀಸರು ಈ ವಿಷಯವನ್ನು ತುಂಬಾ ಗಂಭೀರವಾಗಿ ತಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.
: ವರದಿ ಪ್ರಮೋದ್ ಜನಗೇರಿ ಹಾನಗಲ್ ತಾಲೂಕ್ ಆಲದಕಟ್ಟಿ ತಾಲೂಕ್ ನ್ಯೂಸ್ .ಹಾವೇರಿ6360821691https://taluknewsmedia.com/PRAMODJANAGERI.html

