ಹೊಂಡಾ ಡಿಯೋ ದ್ವಿಚಕ್ರ ವಾಹನ ಕಳ್ಳತನ: ಯುವಕನಿಂದ ಪೊಲೀಸರಿಗೆ ದೂರು
ನಗರದ ನಿವಾಸಿಯಾದ 23 ವರ್ಷದ ಎಲೆಕ್ಟ್ರಿಷಿಯನ್ ವರುಣ್ ಕುಮಾರ್ ಅವರು ತಮ್ಮ ತಾಯಿ ಹೆಸರಿನಲ್ಲಿ ನೋಂದಾಯಿತ ಹೊಂಡಾ ಡಿಯೋ (ನಂ: KA-41-EP-9216) ದ್ವಿಚಕ್ರ ವಾಹನ ಕಳ್ಳತನವಾಗಿದ್ದು, ಈ ಕುರಿತು ಕೆಂಗೇರಿ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನ ಪ್ರಕಾರ, ವರುಣ್ ಕುಮಾರ್ ಅವರು ದಿನಾಂಕ 10 ಜೂನ್ 2025 ರಂದು ರಾತ್ರಿ 8:30ರ ಸುಮಾರಿಗೆ ತಮ್ಮ ಮನೆ ಮುಂಭಾಗದಲ್ಲಿ ವಾಹನವನ್ನು ನಿಲ್ಲಿಸಿದ್ದರು. ಆದರೆ, ಮರುದಿನ ಬೆಳಗ್ಗೆ ಸುಮಾರು 6:30ರ ವೇಳೆಗೆ ಅವರು ವಾಹನವನ್ನು ನೋಡಲು ಬಂದಾಗ ಅದು ನಿಲ್ಲಿಸಿದ್ದ ಸ್ಥಳದಲ್ಲಿ ಕಾಣೆಯಾಗಿತ್ತು.
ತಕ್ಷಣವೇ ಕುಟುಂಬಸ್ಥರು ಮತ್ತು ಸ್ನೇಹಿತರು ಸೇರಿದಂತೆ ಎಲ್ಲಾ ಕಡೆ ಹುಡುಕಾಟ ನಡೆಸಿದರೂ ವಾಹನ ಪತ್ತೆಯಾಗದೆ ಹೋದ ಹಿನ್ನೆಲೆಯಲ್ಲಿ, ಯಾರೋ ಅಪರಿಚಿತರು ವಾಹನವನ್ನು ಕಳ್ಳತನ ಮಾಡಿರಬಹುದು ಎಂಬ ಅನುಮಾನದಿಂದ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಳ್ಳತನವಾದ ಹೊಂಡಾ ಡಿಯೋ
2019ರ ಮಾದರಿಯದುವಾಗಿದ್ದು,
ಆರೆಂಜ್-ಗ್ರೇ ಬಣ್ಣದಲ್ಲಿ ಇತ್ತು.
ಚ್ಯಾಸಿಸ್ ನಂಬರ್ ME4JF39HDKG003253 ಮತ್ತು ಎಂಜಿನ್ ನಂಬರ್ JF39EG0006615 ಹೊಂದಿದ
ಈ ವಾಹನದ ಮೌಲ್ಯವನ್ನು ಸುಮಾರು ₹30,000 ಎಂದು ಅಂದಾಜಿಸಲಾಗಿದೆ.
ಕೆಂಗೇರಿಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಾರ್ವಜನಿಕರಿಗೆ ಈ ವಾಹನದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ ಹತ್ತಿರದ ಪೊಲೀಸರಿಗೆ ತಿಳಿಸಲು ಮನವಿ ಮಾಡಲಾಗಿದೆ.

