ಹಿರಿಯೂರಿನಲ್ಲಿ 19 ವರ್ಷದ ಯುವತಿ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಹಿರಿಯೂರು: 19 ವರ್ಷದ ವಧು ಕಾಣೆಯಾಗಿರುವ ಪ್ರಕರಣ
ಮೂರ್ತಿ ಅವರ ಪ್ರಕಾರ, ಅವರು ಡ್ರೈವರ್ ಕೆಲಸ ಮಾಡಿಕೊಂಡಿದ್ದು, ದಿನಾಂಕ 25-02-2025 ರಂದು ಹಿರಿಯರ ಸಮ್ಮುಖದಲ್ಲಿ ರಂಗಲಕ್ಷ್ಮಿ (ರಮಾ) (19) ಅವರನ್ನು ವಿವಾಹವಾಗಿದ್ದರು. ಮದುವೆಯ ನಂತರ ದಂಪತಿ ಸಾಮಾನ್ಯವಾಗಿ ಸಂತೋಷಕರ ಜೀವನ ನಡೆಸುತ್ತಿದ್ದರು.
ಆದರೆ ದಿನಾಂಕ 25-08-2025 ರಂದು ಬೆಳಿಗ್ಗೆ 11.00 ಗಂಟೆಗೆ ಪತ್ನಿ ರಂಗಲಕ್ಷ್ಮಿ ಮನೆಯಿಂದ ಹೊರಟು ಮತ್ತೆ ವಾಪಸ್ಸಾಗಿಲ್ಲ. ಮನೆಯಲ್ಲಿ ಒಂದು ಕಾಗದ ಬರೆದು ಬಿಚ್ಚಿಟ್ಟು ಹೋಗಿರುವುದಾಗಿ ಕುಟುಂಬದವರು ತಿಳಿಸಿದ್ದಾರೆ. ಮನೆಯವರು ಎಲ್ಲೆಡೆ ಹುಡುಕಿದರೂ ಯಾವುದೇ ಸುಳಿವು ಸಿಗದ ಕಾರಣ ಮೂರ್ತಿ ಅವರು ಕೊಡುಗೆಹಳ್ಳಿ ಪೊಲೀಸ್ ಠಾಣೆಗೆ ಬಂದು ಕಾಣೆಯಾದ ಪತ್ನಿಯನ್ನು ಪತ್ತೆಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.
ಕಾಣೆಯಾದ ಯುವತಿ ವಿವರಗಳು:
ಹೆಸರು: ರಂಗಲಕ್ಷ್ಮಿ (ರಮಾ)
ವಯಸ್ಸು: 19 ವರ್ಷ
ಎತ್ತರ: ಸುಮಾರು 5 ಅಡಿ
ಮುಖ: ಕೋಲು ಮುಖ
ಕೂದಲು: ಕಪ್ಪು
ಮಾತನಾಡುವ ಭಾಷೆ: ಕನ್ನಡ ಮತ್ತು ತೆಲುಗು
ತೊಟ್ಟ ಉಡುಗೆ: ಬಿಳಿ ಬಣ್ಣದ ಜಾಕೆಟ್, ಕಪ್ಪು ಬಣ್ಣದ ಟಾಪ್ ಹಾಗೂ ಬಿಳಿ ಬಣ್ಣದ ಪ್ಯಾಂಟ್
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಯುವತಿಯನ್ನು ಪತ್ತೆ ಮಾಡಲು ತನಿಖೆ ಆರಂಭಿಸಿದ್ದಾರೆ.

