ಸುದ್ದಿ 

ಆನ್‌ಲೈನ್ ಹಣಕಾಸು ಮೋಸ ಪ್ರಕರಣ

Taluknewsmedia.com

ಬೆಂಗಳೂರು, ಆಗಸ್ಟ್ 30:2025
ನಗರದ ದೊಡ್ಡಬೊಮ್ಮಸಂದ್ರ ದಲ್ಲಿ ಮತ್ತೊಂದು ಆನ್‌ಲೈನ್ ಹಣಕಾಸು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಗಿರೀಶ್ ಎಸ್ ಅವರ ಹೇಳಿಕೆಯ ಪ್ರಕಾರ, ಅಪರಿಚಿತ ವ್ಯಕ್ತಿಗಳು ಹೂಡಿಕೆ ಮಾಡುವ ನೆಪದಲ್ಲಿ ಅವರಿಂದ ಹಲವು ಹಂತಗಳಲ್ಲಿ ಹಣ ಪಡೆದುಕೊಂಡಿದ್ದಾರೆ.

ಅಸ್ಲಾಂ, ಸಲ್ಮಾನ್, ಹೊಸೈನ್ ಹಾಗೂ ನಯಾ ಲೆವಿಶಾಲ್ ಎಂಬವರ ಖಾತೆಗಳ ಮೂಲಕ ₹17,800, ₹49,800, ₹3,99,800, ₹2,00,000 ಮತ್ತು ₹3,00,000 ಸೇರಿ ಒಟ್ಟು ₹6,67,400 ಹಣವನ್ನು ದೂರುದಾರರಿಂದ ವಂಚನೆ ಮಾಡಿ ಕಸಿದುಕೊಂಡಿದ್ದಾರೆ.

ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂಬ ನಂಬಿಕೆ ಮೂಡಿಸಿ, ಯಾವುದೇ ಲಾಭವನ್ನು ನೀಡದೇ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡಿರುವುದಾಗಿ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

ಈ ಬಗ್ಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಸೈಬರ್ ಅಪರಾಧಗಳ ಬಗ್ಗೆ ಸಾರ್ವಜನಿಕರು ಜಾಗರೂಕರಾಗಿರಬೇಕೆಂದು ಎಚ್ಚರಿಕೆ ನೀಡಿದ್ದಾರೆ.

Related posts