ಕಾಣೆಯಾದ ಯುವತಿ – ಪೊಲೀಸರು ತನಿಖೆ ಆರಂಭಿಸಿದರು
ಕಾಣೆಯಾದ ಯುವತಿ – ಪೊಲೀಸರು ತನಿಖೆ ಆರಂಭಿಸಿದರು
ಬೆಂಗಳೂರು: 30 ಆಗಸ್ಟ್ 2025
ರಾಜಾಜಿನಗರದ ಶ್ರೀಮತಿ ಭಾಗಮ್ಮ ಅವರ ಮಗಳಾದ ಕುಮಾರಿ ದುರ್ಗಾ (16 ವರ್ಷ) ಅವರು 27 ಆಗಸ್ಟ್ 2025, ಬುಧವಾರ ಸಂಜೆ 4.00 ಗಂಟೆಗೆ ಮನೆ ಕೆಲಸಕ್ಕೆಂದು ಹೊರಟು ಹೋದವರು ಇಂದಿಗೂ ಮನೆಗೆ ವಾಪಸ್ಸು ಬಂದಿಲ್ಲ ಎಂದು ಯಲಹಂಕ ಉಪನಗರ ಪೊಲೀಸರು ತಿಳಿಸಿದ್ದಾರೆ.
ಕುಮಾರಿ ದುರ್ಗಾ ಅವರು ಹೊರಡುವಾಗ ಪಿಂಕ್ ಬಣ್ಣದ ಚೂಡಿದಾರ ಧರಿಸಿದ್ದರು. ಅವರ ಮೈಕಟ್ಟು ಸಾದಾರಣವಾಗಿದ್ದು, ಮೈಬಣ್ಣ ಗೋದಿ ಬಣ್ಣವಾಗಿದೆ. ಕಾಣೆಯಾದ ಯುವತಿ ಸುಮಾರು ₹30,000 ನಗದು ಹಾಗೂ 2.50 ತೋಲೆ ಬಂಗಾರವನ್ನು ಕೂಡ ತೆಗೆದುಕೊಂಡು ಹೋಗಿರುವುದಾಗಿ ಕುಟುಂಬಸ್ಥರು ದೂರು ನೀಡಿದ್ದಾರೆ.
ಮಗಳಿಗಾಗಿ ಎಲ್ಲೆಡೆ ಹುಡುಕಿದರೂ ಪತ್ತೆಯಾಗದ ಕಾರಣದಿಂದ ತಾಯಿ ಭಾಗಮ್ಮ ಅವರು ಯಲಹಂಕ ಉಪನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕಾಣೆಯಾದ ಯುವತಿಯನ್ನು ಪತ್ತೆಹಚ್ಚಲು ತನಿಖೆ ಪ್ರಾರಂಭಿಸಿದ್ದಾರೆ.

