ಅಕ್ರಮ ಮಾರಾಟಕ್ಕಾಗಿ ಗೋವು ಸಾಗಣೆ ಮಾಡುತ್ತಿದ್ದ ವೆಹಿಕಲ್, ದೂರು ದಾಖಲು
ಅಕ್ರಮ ಮಾರಾಟಕ್ಕಾಗಿ ಗೋವು ಸಾಗಣೆ ಮಾಡುತ್ತಿದ್ದ ವೆಹಿಕಲ್, ದೂರು ದಾಖಲುಹಾವೇರಿ ಜಿಲ್ಲೆ ಹಾನಗಲ್ ತಾಲುಕು ಆಡುರು ಪೊಲೀಸ ಠಾಣಾ ವ್ಯಾಪ್ತಿಯ ನರೇಗಲ್ ನಿಂದಾ ಸವಣೂರಿನ ಕಡೆ ಅಕ್ರಮ ಗೋವುಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದದ್ದು ಕಂಡುಬಂದಿದೆ.ದಿನಾಂಕ:-09-09-2025 ರಂದು ಮದ್ಯಾಹ್ನ 02-00 ಘಂಟೆಯ ಸುಮಾರಿಗೆ ಒಬ್ಬ ಅಶೋಕ ಲೇಲ್ಯಾಂಡ್ ಮಿನಿ ಗೂಡ್ಸ್ ಗಾಡಿಯ ಚಾಲಕ ತನ್ನ ಗೂಡ್ಸ್ ಗಾಡಿಯಲ್ಲಿ ಮಿತಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರುಗಳನ್ನು ತುಂಬಿಕೊಂಡಿದ್ದು ಅವುಗಳಿಗೆ ಹಿಂಸೆ ಆಗುವ ರೀತಿಯಲ್ಲಿ ಗಾಡಿಯಲ್ಲಿ ತಿನ್ನಲು ಅವುಗಳಿಗೆ ಮೇವನ್ನು ಹಾಕದೆ ಒಂದರ ಮೇಲೆ ಒಂದರಂತೆ ಹೇರಿ ಅವುಗಳ ಉಸಿರಾಟಕ್ಕೂ ಸಹ ತೊಂದರೆಯಾಗುವಂತೆ ಹಿಂಸಾತ್ಮಕವಾಗಿ ಹೇರಿಕೊಂಡು ಅವುಗಳನ್ನು ಕಡಿದು ಮಾಂಸದ ವ್ಯಾಪಾರ ಮಾಡುವದಕ್ಕಾಗಿ ಅನಧೀಕೃತವಾಗಿ ನರೇಗಲ್ಲ ಮುಖಾಂತರ ಸವಣೂರ ಕಡೆಗೆ ಸಾಗಣೆ ಮಾಡುತ್ತಿದ್ದರು ಇದನ್ನು ನೋಡಿದ ಕೆಲವು ಗ್ರಾಮಸ್ಥರು ಈ ವಾಹನದ ಮೇಲೆ ದಾಳಿ ಮಾಡಿ ಜಾನುವಾರು ಗಳನ್ನು ಸಾಗಾಟ ಮಾಡುತ್ತಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಹರೀಶ ಹಾನಗಲ್ ಎನ್ನುವವರು ಹಾನಗಲ್ ತಾಲೂಕಿನ ಆಡೂರು ಪೊಲೀಸ ಠಾಣೆಯಲ್ಲಿ ವಾಹನ ಡ್ರೈವರ್, ಮಾಲೀಕರ ಮೇಲೆ ದೂರು ನೀಡಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಎಫ್ಐಆರ್ ಕೇಸ್ ಮಾಡಿದ್ದಾರೆ.: ವರದಿಪ್ರಮೋದ್ ಜನಗೇರಿಹಾನಗಲ್ ತಾಲೂಕ್ ಆಲದಕಟ್ಟಿತಾಲೂಕ್ ನ್ಯೂಸ್ .ಹಾವೇರಿ6360821691https://taluknewsmedia.com/PRAMODJANAGERI.html

