ಸುದ್ದಿ 

ಸಾಲ ವಸೂಲಿಗೆ ಬಂದ ಧರ್ಮಸ್ಥಳ ಸಂಘದ ಏಜೆಂಟ್ಗಳ ಮೇಲೆ ಕ್ರೂರ ಹಲ್ಲೆ – ಹಾವೇರಿಯಲ್ಲಿ ಪ್ರಕರಣ ದಾಖಲು!

Taluknewsmedia.com

ಸಾಲ ವಸೂಲಿಗೆ ಬಂದ ಧರ್ಮಸ್ಥಳ ಸಂಘದ ಏಜೆಂಟ್ಗಳ ಮೇಲೆ ಕ್ರೂರ ಹಲ್ಲೆ – ಹಾವೇರಿಯಲ್ಲಿ ಪ್ರಕರಣ ದಾಖಲು!

ಹಾವೇರಿ: ಸಾಲ ವಸೂಲಿಗೆ ಬಂದ ಧರ್ಮಸ್ಥಳ ಸಂಘದ ಇಬ್ಬರು ರಿಕವರಿ ಏಜೆಂಟ್ಗಳ ಮೇಲೆ ಕ್ರೂರ ಹಲ್ಲೆ ನಡೆಸಿದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರು ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.

ಮಹಿಳಾ ಏಜೆಂಟ್ ಗೌರಮ್ಮ ಹಾಗೂ ಸಹಏಜೆಂಟ್ ಗಣೇಶ್ ಅವರ ಮೇಲೆ ಆರೋಪಿ ಸುಲೇಮಾನ ಮತ್ತು ನೂರಜಾನ್ ಸೇರಿ ಐವರು ಗ್ಯಾಂಗ್‌ ರೀತಿಯಲ್ಲಿ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಘದ ದಾಖಲೆಗಳ ಪ್ರಕಾರ, A2 ಆರೋಪಿ ನೂರಜಾನ್ ಧರ್ಮಸ್ಥಳ ಸಂಘದಿಂದ ₹3 ಲಕ್ಷ ಸಾಲ ಪಡೆದಿದ್ದನು. ಮೊದಲಿಗೆ ₹1.06 ಲಕ್ಷ ಕಂತು ಪಾವತಿಸಿದ ಬಳಿಕ ಉಳಿದ ₹1.94 ಲಕ್ಷ ಹಣವನ್ನು ಪಾವತಿಸದೆ ವಂಚನೆ ಮಾಡಿದ್ದಾನೆ.

ಏಜೆಂಟ್‌ಗಳೊಂದಿಗೆ ಮಾತನಾಡಿ “ಸಾಲ ಕಟ್ಟುತ್ತೇನೆ, ಬನ್ನಿ ಮನೆಗೆ” ಎಂದು ಕರೆಸಿಕೊಂಡು, ಬಳಿಕ ಮನೆಯಲ್ಲಿ ಒಳಗೆ ಕರೆದ ಬಳಿಕ ಬಾಗಿಲು ಮುಚ್ಚಿ ಕುರ್ಚಿಯಿಂದ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ.

ಗಾಯಗೊಂಡ ಇಬ್ಬರು ಏಜೆಂಟ್ಗಳಿಗೆ ಹಾನಗಲ್ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಅವರ ಹೇಳಿಕೆಯ ಆಧಾರದ ಮೇಲೆ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರು ಆರೋಪಿಗಳ ಪತ್ತೆಹಚ್ಚುವ ಕಾರ್ಯ ಕೈಗೊಂಡಿದ್ದು, ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

Related posts