ಸುದ್ದಿ 

ಅಕ್ಟೋಬರ್ 9 ರಿಂದ ರಾಜ್ಯದ 60 ಕಡೆಗಳಲ್ಲಿ ಧರ್ಮಸ್ಥಳ ಸೌಜನ್ಯ ವಿರೋಧಿ ವೇದಿಕೆಯಿಂದ ನ್ಯಾಯಕ್ಕಾಗಿ ಜನಗ್ರಹ ಆಂದೋಲನ ಶುರುವಾಗುತ್ತದೆ.

Taluknewsmedia.com

ಅಕ್ಟೋಬರ್ 9 ರಿಂದ ರಾಜ್ಯದ 60 ಕಡೆಗಳಲ್ಲಿ ಧರ್ಮಸ್ಥಳ ಸೌಜನ್ಯ ವಿರೋಧಿ ವೇದಿಕೆಯಿಂದ ನ್ಯಾಯಕ್ಕಾಗಿ ಜನಗ್ರಹ ಆಂದೋಲನ ಶುರುವಾಗುತ್ತದೆ.

ಧರ್ಮಸ್ಥಳ ಇದ್ದ ಕ್ಷಣ ನಮಗೆ ನೆನಪಿಗೆ ಬರುತ್ತಿರುವ ವಿಷಯವೇ ಇತ್ತೀಚಿಗೆ ಕೆಲವೊಂದಿಷ್ಟು ನಡೆದ ಅಹಿತಕರ ಘಟನೆಗಳು ಹಾಗೂ ಎಂದಿಗೂ ಎಲ್ಲರ ಮನಸಲ್ಲಿ ಪ್ರಶ್ನೆಯಾಗಿ ಕಾಣುತ್ತಿರುವ ಸೌಜನ್ಯ ಕೇಸ್ ಧರ್ಮಸ್ಥಳ ತನ್ನ ಪಾವಿತ್ರತೆಯನ್ನು ಕಾಪಾಡಿಕೊಂಡು ಬರುತ್ತಿರುವ ಹಂತದಲ್ಲಿ ಈ ಘಟನೆ ನಡೆದು ಹೋಗಿದ್ದರಿಂದ ಪ್ರತಿಯೊಬ್ಬರಿಗೂ ಇದು ನೆನಪಿನಲ್ಲಿ ಇಟ್ಟುಕೊಳ್ಳುವಂತ ಸ್ಥಿತಿಯನ್ನು ತಂದು ಬಿಟ್ಟಿದೆ. ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಕೊಲೆಯಾಗಿ 13 ವರ್ಷ ಸಂದಿರುವ ಹಿನ್ನೆಲೆ ಧರ್ಮಸ್ಥಳ ಅತ್ಯಾಚಾರ. ಭೂಕಬಳಿಕೆ . ದಲಿತರ ಮೀಸಲು. ಮೈಕ್ರೋ ಫೈನಾನ್ಸ್ ಬಡ್ಡಿ ದಂಧೆ . ಧರ್ಮಸ್ಥಳ ಸೌಜನ್ಯ ವಿರೋಧಿ ವೇದಿಕೆ ಆಯೋಜಿಸಿರುವ ನ್ಯಾಯಕ್ಕಾಗಿ ಜನಗ್ರಹ 2025 ಅಕ್ಟೋಬರ್ 9ರಂದು ರಾಜ್ಯಾದ್ಯಂತ ಮೊದಲ ಬಾರಿಗೆ ಒಂದೇ ದಿನದಲ್ಲಿ ಗ್ರಾಮ ಗ್ರಾಮಗಳಲ್ಲಿ ದೌರ್ಜನ್ಯ ವಿರೋಧಿ ವೇದಿಕೆ ಜನಗ್ರಹ ಸಭೆ ಪ್ರತಿಭಟನೆ ಹಾಗೂ ಕ್ಯಾಂಡಲ್ ಲೈಟ್ ಪ್ರದರ್ಶನ ಒಳಗೊಂಡ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

Related posts