ಸುದ್ದಿ 

ಹಾವೇರಿ ಜಿಲ್ಲೆಯಲ್ಲಿ ಲೋಕಾಯುಕ್ತದ ಭಾರಿ ದಾಳಿ – ಇಬ್ಬರು ಅಧಿಕಾರಿಗಳಿಂದ ಕೋಟ್ಯಂತರ ಮೌಲ್ಯದ ಆಸ್ತಿ ಪತ್ತೆ

Taluknewsmedia.com

ಹಾವೇರಿ ಜಿಲ್ಲೆಯಲ್ಲಿ ಲೋಕಾಯುಕ್ತದ ಭಾರಿ ದಾಳಿ – ಇಬ್ಬರು ಅಧಿಕಾರಿಗಳಿಂದ ಕೋಟ್ಯಂತರ ಮೌಲ್ಯದ ಆಸ್ತಿ ಪತ್ತೆ

ಹಾವೇರಿ : ಜಿಲ್ಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ಅಚ್ಚರಿಯ ದಾಳಿ ಕಾರ್ಯಾಚರಣೆ ಅಂತ್ಯಗೊಂಡಿದ್ದು, ಇಬ್ಬರು ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ನಡೆದ ಶೋಧದಲ್ಲಿ ಕೋಟಿಗೂ ಮೀರಿದ ಆಕ್ರಮ ಆಸ್ತಿ ಪತ್ತೆಯಾಗಿದೆ.

ವಿವರಗಳ ಪ್ರಕಾರ, ಸವಣೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ್ ಶೀಡೆನೂರು ಅವರ ಮನೆಯಲ್ಲಿ ನಡೆದ ಶೋಧದಲ್ಲಿ ₹1.67 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಮತ್ತು ನಗದು ಪತ್ತೆಯಾಗಿದೆ.

ಇದೇ ವೇಳೆ, ರಾಣೇಬೆನ್ನೂರು ತಾಲೂಕಿನ ಕಂದಾಯ ನಿರೀಕ್ಷಕ ಅಶೋಕ್ ಅವರ ಮನೆಯಲ್ಲಿ ನಡೆದ ದಾಳಿಯಲ್ಲಿ ₹1.35 ಕೋಟಿಗೂ ಅಧಿಕ ಮೌಲ್ಯದ ಆಸ್ತಿ, ಬಂಗಾರದ ಆಭರಣಗಳು ಹಾಗೂ ಬೆಳ್ಳಿ ವಸ್ತುಗಳು ಪತ್ತೆಯಾಗಿವೆ.

ಲೋಕಾಯುಕ್ತ ಅಧಿಕಾರಿಗಳು ರಾಣೇಬೆನ್ನೂರು ಪಟ್ಟಣದ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಹಾಗೂ ಒಟ್ಟು ಐದು ಸ್ಥಳಗಳಲ್ಲಿ ಸಮಗ್ರ ಶೋಧ ನಡೆಸಿದ್ದಾರೆ. ಈ ವೇಳೆ ನಗದು ಹಣ, ಬಂಗಾರದ ಆಭರಣಗಳು, ಬೆಳ್ಳಿ ಪಾತ್ರೆಗಳು, ದಾಖಲೆಗಳು ಸೇರಿದಂತೆ ಹಲವು ಆಸ್ತಿ ವಿವರಗಳು ಬೆಳಕಿಗೆ ಬಂದಿವೆ.

ಸಂಬಂಧಿತ ಅಧಿಕಾರಿಗಳ ಆಸ್ತಿಯ ಪ್ರಮಾಣ ಹಾಗೂ ಆದಾಯ ಮೂಲದ ದಾಖಲೆಗಳನ್ನು ಲೋಕಾಯುಕ್ತ ತನಿಖಾ ಅಧಿಕಾರಿಗಳು ಪರಿಶೀಲನೆಗೆ ತೆಗೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಅಕ್ರಮ ಆಸ್ತಿ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ.

ಜನರ ಸೇವೆಗೆ ನೇಮಕಗೊಂಡ ಅಧಿಕಾರಿಗಳ ವಿರುದ್ಧ ಇಂತಹ ಆಸ್ತಿ ಪತ್ತೆ ಪ್ರಕರಣಗಳು ಬೆಳಕಿಗೆ ಬರುತ್ತಿರುವುದು ಜಿಲ್ಲೆಯ ಜನರಲ್ಲಿ ಆಕ್ರೋಶ ಹಾಗೂ ಅಚ್ಚರಿ ಮೂಡಿಸಿದೆ. ಲೋಕಾಯುಕ್ತದ ಈ ಕ್ರಮವು ಬಾಕಿ ಅಧಿಕಾರಿಗಳಿಗೆ ಎಚ್ಚರದ ಘಂಟೆ ಎಂಬಂತೆ ಪರಿಣಿತರ ಅಭಿಪ್ರಾಯ ವ್ಯಕ್ತವಾಗಿದೆ.

Related posts