ಲವ್ ಮ್ಯಾರೇಜ್ ಹಿನ್ನೆಲೆ: ತಾಯಿಗೆ ಬೆಂಕಿ ಹಚ್ಚಿದ ಹುಡುಗಿಯ ತಂದೆ – ಚಿಕ್ಕಬಳ್ಳಾಪುರದಲ್ಲಿ ಘಟನೆ
ಲವ್ ಮ್ಯಾರೇಜ್ ಹಿನ್ನೆಲೆ: ತಾಯಿಗೆ ಬೆಂಕಿ ಹಚ್ಚಿದ ಹುಡುಗಿಯ ತಂದೆ – ಚಿಕ್ಕಬಳ್ಳಾಪುರದಲ್ಲಿ ಘಟನೆ
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಸಂಗಟಪಲ್ಲಿ ಗ್ರಾಮದಲ್ಲಿ ನಡೆದ ಕ್ರೂರ ಘಟನೆ ಎಲ್ಲರನ್ನು ಬೆಚ್ಚಿಬೀಳಿಸಿದೆ.
ಲವ್ ಮ್ಯಾರೇಜ್ ಮಾಡಿಕೊಂಡಿದ್ದ ಮಗನ ತಾಯಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ ಪಾತಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.
ಘಟನೆ ವಿವರ:
ಬಯ್ಯಮ್ಮ (48) ಎಂಬ ಮಹಿಳೆಯು ತನ್ನ ಮಗ ಅಂಬರೀಶ್ ಮತ್ತು ಪ್ರತಿಭಾ ಅವರ ಮದುವೆ ಹಿನ್ನೆಲೆ ಬಲಿ ಆಗಿದ್ದಾಳೆ. ಕಳೆದ ಸೋಮವಾರ ಕಡದಲಮರಿ ದೇವಸ್ಥಾನದಲ್ಲಿ ಅಂಬರೀಶ್ ಮತ್ತು ಪ್ರತಿಭಾ ಪರಸ್ಪರ ಪ್ರೀತಿ ವಿವಾಹ ಮಾಡಿಕೊಂಡಿದ್ದರು. ಕುಟುಂಬದವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಜೋಡಿ ದೇವಸ್ಥಾನದಲ್ಲೇ ಮದುವೆ ಮಾಡಿಕೊಂಡಿದ್ದರು.
ಇದರಿಂದ ಕೋಪಗೊಂಡ ಪ್ರತಿಭಾ ತಂದೆ ಬೈರೆಡ್ಡಿ ಹಾಗೂ ಕುಟುಂಬಸ್ಥರು ಬಯ್ಯಮ್ಮನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಯತ್ನ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಗಂಭೀರವಾಗಿ ಸುಟ್ಟ ಬಯ್ಯಮ್ಮ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ನಡೆದಿದ್ದುಕ್ಕೆ ಹತ್ತು ದಿನಗಳಾದರೂ ಪಾತಪಾಳ್ಯ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕುಟುಂಬಸ್ಥರು ಮಾಡಿದ್ದಾರೆ.
ಗ್ರಾಮಸ್ಥರು ಈ ಘಟನೆಗೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

