ಪುತ್ತೂರಿನಲ್ಲಿ ‘ಅಶೋಕ ಜನಮನ’ ಕಾರ್ಯಕ್ರಮದಲ್ಲಿ ಅವ್ಯವಸ್ಥೆ – ಜನರ ಜೀವಕ್ಕೆ ಆಟ!
ಪುತ್ತೂರಿನಲ್ಲಿ ‘ಅಶೋಕ ಜನಮನ’ ಕಾರ್ಯಕ್ರಮದಲ್ಲಿ ಅವ್ಯವಸ್ಥೆ – ಜನರ ಜೀವಕ್ಕೆ ಆಟ!
ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ನಡೆದ ‘ಅಶೋಕ ಜನಮನ’ ಕಾರ್ಯಕ್ರಮವು ಇಂದು ಸಂಪೂರ್ಣ ಅವ್ಯವಸ್ಥೆಯ ಚಿತ್ರಣ ಕಂಡುಬಂದಿದೆ. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ ವೇಳೆ ನೂಕುನುಗ್ಗಲು ಉಂಟಾಗಿ ಮಹಿಳೆಯರು, ಮಕ್ಕಳಿಗೆ ಸೇರಿದಂತೆ 11ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.
ಕಾರ್ಯಕ್ರಮ ಪುತ್ತೂರು ತಾಲೂಕು ಕ್ರೀಡಾಂಗಣದಲ್ಲಿ ನಡೆದಿದ್ದು, ಸ್ಥಳದ ಸಾಮರ್ಥ್ಯಕ್ಕಿಂತ ಹಲವರೆಷ್ಟು ಹೆಚ್ಚು ಜನರನ್ನು ಒಳಗೆ ಬಿಡಲಾಗಿತ್ತು. ಜನಸಂದಣಿ, ಕೆಸರು ತುಂಬಿದ ಮೈದಾನ ಮತ್ತು ಕುಡಿಯುವ ನೀರಿನ ಕೊರತೆಯಿಂದಾಗಿ ಜನತೆ ಪರದಾಡಿದರು. ಆಮ್ಲಜನಕದ ಕೊರತೆಯಿಂದ ಯೋಗೀತ, ಆಮೀನಾ ಪಾಟ್ರಕೋಡಿ, ನೇತ್ರಾವತಿ ಇರ್ದೆ, ಲೀಲಾವತಿ ಕಡಬ, ವಸಂತಿ ಬಲ್ನಾಡ್, ಕುಸುಮ, ರತ್ನವತಿ ಪೆರಿಗೇರಿ, ಅಫೀಲಾ ಪಾಟ್ರಕೋಡಿ, ಸ್ನೇಹಪ್ರಭಾ, ಜಸೀಲಾ ಸೇರಿ ಅನೇಕರು ಅಸ್ವಸ್ಥರಾಗಿದ್ದಾರೆ. ಎಲ್ಲರಿಗೂ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಜನಮನ ಎನ್ನಿಸಿಕೊಂಡಿದ್ದ ಈ ಕಾರ್ಯಕ್ರಮ ಜನರ ಜೀವದ ಹಂಗುಮಂಗು ಸೃಷ್ಟಿಸಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಸೂಕ್ತ ವ್ಯವಸ್ಥೆ ಮಾಡದೇ ಸಾವಿರಾರು ಜನರನ್ನು ಆಹ್ವಾನಿಸಿದ ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ.
ಕಾರ್ಯಕ್ರಮದ ಸುರಕ್ಷತೆ ಮತ್ತು ನಿರ್ವಹಣೆಯ ಬಗ್ಗೆ ಪ್ರಶ್ನೆ ಎದ್ದಿದ್ದು, ಪೊಲೀಸರು ಹಾಗೂ ಜಿಲ್ಲಾಡಳಿತದ ಪಾತ್ರಕ್ಕೂ ಚುಚ್ಚುಮಾತುಗಳು ಕೇಳಿಬರುತ್ತಿವೆ.
ಜನರ ಸೇವೆಯ ಹೆಸರಿನಲ್ಲಿ ನಡೆದ ಈ ರಾಜಕೀಯ ಶೋ ಜನರ ಜೀವಕ್ಕೆ ಅಪಾಯ ಉಂಟುಮಾಡಿದ ಘಟನೆ ಎಂದೇ ಹೇಳಬಹುದು.

