ಸುದ್ದಿ 
Taluknewsmedia.com

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದಿಂದ ಸರ್ಕಾರಕ್ಕೆ ಭಾರಿ ಲಾಭಾಂಶ

2024-25ನೇ ಸಾಲಿನಲ್ಲಿ ದಾಖಲೆ ಮಟ್ಟದ ಲಾಭ ಗಳಿಸಿದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್) ಸಂಸ್ಥೆಯು, ಸರ್ಕಾರಕ್ಕೆ ರೂ.135 ಕೋಟಿಗಳ ಲಾಭಾಂಶ ಚೆಕ್‌ನ್ನು ಹಸ್ತಾಂತರಿಸಿದೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷ ಅಪ್ಪಾಜಿ ನಾಡಗೌಡ ಅವರು ಸಂಸ್ಥೆಯ ಪರವಾಗಿ ಈ ಚೆಕ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಚಿವರಾದ ಕೆ.ಜೆ. ಜಾರ್ಜ್, ಪ್ರಿಯಾಂಕ್ ಖರ್ಗೆ, ಡಾ. ಎಂ.ಸಿ. ಸುಧಾಕರ್, ಸಂತೋಷ್ ಲಾಡ್ ಹಾಗೂ ಇತರ ಗಣ್ಯರು ಹಾಜರಿದ್ದರು.

ಹಿಂದಿನ ಹಣಕಾಸು ವರ್ಷದಲ್ಲಿ ಕೆಎಸ್‌ಡಿಎಲ್ ಸಂಸ್ಥೆಯು ಸುಮಾರು ರೂ.1,700 ಕೋಟಿಯ ವಹಿವಾಟು ನಡೆಸಿ, ರೂ.451 ಕೋಟಿಗಳ ಲಾಭ ಗಳಿಸಿದೆ. ಅದರಲ್ಲಿ ನಿಯಮಾನುಸಾರ ಶೇಕಡಾ 30ರಷ್ಟು ಭಾಗವಾದ ರೂ.135 ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರಕ್ಕೆ ಹಂಚಲಾಗಿದೆ. ವಹಿವಾಟು, ಲಾಭ ಮತ್ತು ಲಾಭಾಂಶ — ಈ ಮೂರು ವಿಭಾಗಗಳಲ್ಲೂ ಸಂಸ್ಥೆಯು ತನ್ನ ಇತಿಹಾಸದಲ್ಲೇ ಹೊಸ ದಾಖಲೆ ಸ್ಥಾಪಿಸಿದೆ.

Related posts