ಸುದ್ದಿ 

ವಿವಾಹಿತ ಮಹಿಳೆಯ ಮೇಲೆ ಪಾಗಲ್ ಪ್ರೇಮಿಯ ಕಾಟ — ಹಲ್ಲೆ, ಬೆದರಿಕೆ ಪ್ರಕರಣ ದಾಖಲೆ!

Taluknewsmedia.com

ವಿವಾಹಿತ ಮಹಿಳೆಯ ಮೇಲೆ ಪಾಗಲ್ ಪ್ರೇಮಿಯ ಕಾಟ — ಹಲ್ಲೆ, ಬೆದರಿಕೆ ಪ್ರಕರಣ ದಾಖಲೆ!

ಬೆಂಗಳೂರು ನಗರದಲ್ಲಿ ವಿವಾಹಿತ ಮಹಿಳೆಯೊಬ್ಬರ ಮೇಲೆ ಪಾಗಲ್ ಪ್ರೇಮಿಯ ಕಿರುಕುಳದ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯು ನೀಡಿದ ದೂರು ಆಧರಿಸಿ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಸಂತೋಷ್ ರೆಡ್ಡಿ ವಿರುದ್ಧ ಪ್ರಕರಣ ದಾಖಲಾಗಿದೆ.

ಮಾಹಿತಿಯ ಪ್ರಕಾರ, ಸಂತೋಷ್ ರೆಡ್ಡಿ ಎಂಬಾತನು ಫ್ಯಾಷನ್ ಡಿಸೈನರ್ ಆಗಿರುವ ಗೃಹಿಣಿಯನ್ನು ತನ್ನ ಸಂಬಂಧಿಯ ಮದುವೆಗೆ ಕುರ್ತಾ ಡಿಸೈನ್ ಮಾಡಿಕೊಡಿ ಎಂದು ಸಂಪರ್ಕಿಸಿದ್ದ. ಆರಂಭದಲ್ಲಿ ವೃತ್ತಿಪರವಾಗಿ ಆರಂಭವಾದ ಈ ಪರಿಚಯ, ನಂತರ ಸ್ನೇಹಕ್ಕೆ ತಿರುಗಿದ್ದು, ಬಳಿಕ ಮಹಿಳೆಯ ಕುಟುಂಬದವರಿಗೂ ಆತ ಪರಿಚಿತರಾದ. “ನಿಮ್ಮ ಬಿಸಿನೆಸ್‌ಗೆ ನಾನು ಹೂಡಿಕೆ ಮಾಡ್ತೀನಿ” ಎಂದು ಹೇಳಿ ಮಹಿಳೆಯ ವಿಶ್ವಾಸವನ್ನು ಗೆದ್ದಿದ್ದ ಸಂತೋಷ್, ನಂತರ ಮಹಿಳೆಯ ಮೇಲೆ ಪ್ರೀತಿಗೆ ಒತ್ತಡ ಹೇರುತ್ತಾ ಬಂದಿದ್ದಾನೆ.

ಮಹಿಳೆ ಪ್ರೇಮ ಪ್ರಸ್ತಾವವನ್ನು ತಿರಸ್ಕರಿಸಿದಾಗ, ಆತ ಕೋಪಗೊಂಡು ನಿಜಬಣ್ಣ ತೋರಿಸಿದ್ದಾನೆ. “ನನ್ನ ಪ್ರೀತಿಗೆ ಒಪ್ಪಿಕೊಳ್ಳು, ಇಲ್ಲವಾದರೆ ನಿನ್ನಿಬ್ಬರು ಮಕ್ಕಳ ಜೀವಕ್ಕೆ ಅಪಾಯ” ಎಂದು ಬೆದರಿಕೆ ಹಾಕಿದ್ದಾನೆ. ಅಲ್ಲದೆ ಮಹಿಳೆಯ ಮೇಲೆ ಹಲ್ಲೆಗೂ ಮುಂದಾಗಿದ್ದಾನೆ ಎಂದು ದೂರು ಹೇಳುತ್ತದೆ.

ಅಂಕಲ್ ವಯಸ್ಸಿನವನಾಗಿದ್ದರೂ, ಈ ರೀತಿ ಪಾಗಲ್ ಪ್ರೇಮಿಯಂತೆ ವರ್ತಿಸಿ ಮಹಿಳೆಗೆ ಕಾಟ ನೀಡಿದ್ದಾನೆ. ನಿರಂತರ ಕಿರುಕುಳದಿಂದ ಬೇಸತ್ತ ಗೃಹಿಣಿ ಅಂತಿಮವಾಗಿ ಪೊಲೀಸರ ಶರಣಾಗಿದ್ದು, ಸಂತೋಷ್ ರೆಡ್ಡಿ ವಿರುದ್ಧ ಕಿರುಕುಳ, ಬೆದರಿಕೆ ಹಾಗೂ ಹಲ್ಲೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

Related posts