ಸಾವಿನಲ್ಲೂ ಒಂದಾದ ಜೀವಸಂಗಾತಿಗಳು — ಬೀದರ್‌ನಲ್ಲಿ ಮನಕಲಕುವ ಘಟನೆ
ಸಾವಿನಲ್ಲೂ ಒಂದಾದ ಜೀವಸಂಗಾತಿಗಳು — ಬೀದರ್‌ನಲ್ಲಿ ಮನಕಲಕುವ ಘಟನೆ
ಬೀದರ್: ಜೀವಮಾನವಿಡೀ ಒಟ್ಟಾಗಿ ನಡೆದು, ಬದುಕಿನ ಎಲ್ಲ ನೋವು-ಸುಖ ಹಂಚಿಕೊಂಡ ವೃದ್ದ ದಂಪತಿಗಳು ಸಾವಿನಲ್ಲೂ ಒಂದಾಗಿದ್ದಾರೆ. ಈ ಮನಕಲಕುವ ಘಟನೆ ಕಮಲನಗರ ತಾಲೂಕಿನ ಮುಧೋಳ(ಬಿ) ಗ್ರಾಮದಲ್ಲಿ ನಡೆದಿದೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಗುಂಡಪ್ಪ ಹೋಡಗೆ (85) ಹಾಗೂ ಅವರ ಪತ್ನಿ ಲಕ್ಷ್ಮಿಬಾಯಿ ಹೋಡಗೆ (83) ಕಳೆದ ಹಲವು ವರ್ಷಗಳಿಂದ ಪರಸ್ಪರ ಆಶ್ರಯವಾಗಿ ಬದುಕುತಿದ್ದರು. ಸೋಮವಾರ ಬೆಳಿಗ್ಗೆ ಲಕ್ಷ್ಮಿಬಾಯಿ ಹೋಡಗೆ ನಿಧನರಾದರು. ಪತ್ನಿಯ ಸಾವಿನ ಸುದ್ದಿ ತಿಳಿದ ಕೆಲವೇ ಕ್ಷಣಗಳಲ್ಲಿ ಪತಿ ಗುಂಡಪ್ಪ ಕೂಡಾ ಕೊನೆಯುಸಿರೆಳೆದರು.
ಗ್ರಾಮಸ್ಥರ ಪ್ರಕಾರ, ಇಬ್ಬರೂ ಪರಸ್ಪರದ ಪ್ರೀತಿಗೆ ಜೀವಂತ ಸಾಕ್ಷಿಯಾಗಿದ್ದರು. ಅಳಿಯದ ಬಾಂಧವ್ಯ ಮತ್ತು ಜೀವನಪರ್ಯಂತದ ನಂಟಿನ ಈ ಕತೆಯು ಗ್ರಾಮದಲ್ಲೆಲ್ಲಾ ದುಃಖದ ವಾತಾವರಣ ನಿರ್ಮಿಸಿದೆ.
ಸ್ಥಳೀಯರು ಹೇಳುವಂತೆ, “ಇಬ್ಬರ ಪ್ರೀತಿಯ ಬಾಂಧವ್ಯ ಸ್ವರ್ಗದಲ್ಲೂ ಮುಂದುವರಿಯಲಿ” ಎಂಬ ಶ್ರದ್ಧಾಂಜಲಿ ಮಾತುಗಳು ಎಲ್ಲರ ತುಟಿಗಳಲ್ಲಿ ಕೇಳಿಬರುತ್ತಿವೆ.
ಸಾವಿನಲ್ಲೂ ಒಂದಾದ ಈ ದಂಪತಿಗಳ ಕಥೆ ನಿಜಕ್ಕೂ ಮಾನವೀಯ ಸಂಬಂಧದ ಅತಿ ಉನ್ನತ ರೂಪಕ್ಕೆ ನಿದರ್ಶನವಾಗಿದೆ.

