ಸುದ್ದಿ 

3 ಕೋಟಿಗೂ ಅಧಿಕ ವಂಚನೆ..! ನಡು ರಸ್ತೆಯಲ್ಲಿ ಮಹಿಳೆಗೆ ಮಂಗಳಾರತಿ..!

Taluknewsmedia.com

3 ಕೋಟಿಗೂ ಅಧಿಕ ವಂಚನೆ..! ನಡು ರಸ್ತೆಯಲ್ಲಿ ಮಹಿಳೆಗೆ ಮಂಗಳಾರತಿ..!

ಹಾಸನ: ಹಣ ಡಬಲ್ ಮಾಡ್ತೇವೆ ಅಂತ ಹೇಳಿ ಲಕ್ಷಾಂತರ ಮಹಿಳೆಯರನ್ನು ಮೋಸ ಮಾಡಿದ್ದೆಂಬ ಆರೋಪದ ಮೇಲೆ ಹಾಸನದ ಅರಳಿಪೇಟೆಯ ಮಹಿಳೆಯೊಬ್ಬಳು ಇದೀಗ ಎಲ್ಲೆಡೆ ಚರ್ಚೆಯ ವಿಷಯವಾಗಿದ್ದಾಳೆ. ಬಣ್ಣ ಬಣ್ಣದ ಮಾತುಗಳಿಂದ ವಿಶ್ವಾಸ ಗೆದ್ದು, ಚೀಟಿ ವ್ಯವಹಾರ ಹೆಸರಿನಲ್ಲಿ ಹಣ ಕಲೆ ಹಾಕಿದ್ದಾಳೆ ಎನ್ನಲಾಗಿದೆ.

ಜ್ಯೋತಿ ಡ್ರೆಸ್‌ಮೇಕರ್ಸ್‌ ಎಂಬ ಟೈಲರಿಂಗ್ ಶಾಪ್ ನಡೆಸುತ್ತಿದ್ದ ಹೇಮಾವತಿ ಎಂಬ ಮಹಿಳೆ, “ಕೊಡಚಾದ್ರಿ ಚಿಟ್ಸ್‌ನಲ್ಲಿ ನಾನು 1 ಕೋಟಿ ಹೂಡಿಕೆ ಮಾಡಿದ್ದೇನೆ” ಎಂದು ಸುಳ್ಳು ಹೇಳಿ ನೂರಾರು ಜನರಿಂದ ಹಣ ಸಂಗ್ರಹಿಸಿದ್ದಾಳೆ. ಮಹಿಳೆಯರಿಂದ ಲಕ್ಷಾಂತರ ರೂಪಾಯಿ ಪಡೆದು, ಪಂಗನಾಮ ಕೊಡ್ತೇನೆ, ಲಾಭ ಸಿಗ್ತೆ ಅಂತಾ ನಂಬಿಸಿ ಕೊನೆಗೆ ಕೈ ಕಟ್ಟಿ ನಿಂತಿದ್ದಾಳೆ.

ಮೋಸ ಹೋಗಿರುವವರ ಪ್ರಕಾರ, ಕೆಲವರಿಂದ 45 ಲಕ್ಷಕ್ಕೂ ಹೆಚ್ಚು ಹಣ ಪಡೆದಿದ್ದಾಳೆ ಎನ್ನಲಾಗಿದೆ. ವಿದೇಶದಲ್ಲಿ ಮಗಳ ಓದು ಮತ್ತು ಐಶಾರಾಮಿ ಜೀವನಕ್ಕಾಗಿ ಈ ಎಲ್ಲ ಹಣವನ್ನು ಬಳಸಿಕೊಂಡಿದ್ದಾಳೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ಸಂಪೂರ್ಣ ವಂಚನೆಗೆ ಹೇಮಾವತಿಯ ಪತಿ ವಿರೂಪಾಕ್ಷಪ್ಪ ಸಹ ಸಹಾಯ ಮಾಡಿದ್ದಾನೆ ಎಂಬ ಆರೋಪ ಕೂಡ ಕೇಳಿಬಂದಿದೆ.

ಘಟನೆಯ ಕುರಿತು ಬಾಧಿತರು ನಗರ ಪೊಲೀಸ್ ಠಾಣೆ ಹಾಗೂ ಪೆನ್ಷನ್ ಮೊಹಲ್ಲಾ ಠಾಣೆಗಳಲ್ಲಿ ದೂರು ದಾಖಲಿಸಿದ್ದಾರೆ. ಈ ಮಧ್ಯೆ ಹೇಮಾವತಿಯನ್ನು ನಡುರಸ್ತೆಯಲ್ಲೇ ಕೆಲವು ಮಹಿಳೆಯರು ಹಿಡಿದು, ಜಡೆ ಎಳೆದು ಹಲ್ಲೆ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೋಸ ಹೋದ ಮಹಿಳೆಯರು, “ಇವಳ ಮಾತು ನಂಬಿ ಹಣ ಕೊಡಬೇಡಿ, ನಾವು ಅನುಭವಿಸಿದ ನೋವು ಯಾರಿಗೂ ಆಗಬಾರದು” ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

Related posts