ಸುದ್ದಿ 

ಕೊಪ್ಪಳದಲ್ಲಿ ತಾಯಿಯ ಹೃದಯ ವಿದ್ರಾವಕ ಹೆಜ್ಜೆ!

Taluknewsmedia.com

ಕೊಪ್ಪಳದಲ್ಲಿ ತಾಯಿಯ ಹೃದಯ ವಿದ್ರಾವಕ ಹೆಜ್ಜೆ!

ಕೊಪ್ಪಳ ಜಿಲ್ಲೆಯಲ್ಲಿ ನಡೆದ ದಾರುಣ ಘಟನೆ ಜನರನ್ನು ಕಂಗಾಲು ಮಾಡಿದೆ. ಕುಕನೂರ ತಾಲೂಕಿನ ಬೆಣಕಲ್ ಗ್ರಾಮದಲ್ಲಿ ತಾಯಿ ಇಬ್ಬರು ಮಕ್ಕಳನ್ನು ಕೊಂದು ತಾನೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೃತರನ್ನು ಲಕ್ಷ್ಮವ್ವ ಎಂದು ಗುರುತಿಸಲಾಗಿದೆ. ಕುಟುಂಬದಲ್ಲಿ ನಡೆಯುತ್ತಿದ್ದ ನಿರಂತರ ಕಲಹದಿಂದ ಬೇಸತ್ತ ಲಕ್ಷ್ಮವ್ವ ನಾಲ್ಕು ವರ್ಷದ ಮಗ ರಮೇಶ್ ಹಾಗೂ ಎರಡು ವರ್ಷದ ಮಗಳು ಜಾನು ಅವರನ್ನು ಕೊಂದು, ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಪ್ರಾಥಮಿಕ ಮಾಹಿತಿ ಲಭಿಸಿದೆ.

ಘಟನೆಯಿಂದ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

Related posts