ಯಮಕನಮರಡಿಯಲ್ಲಿ 5.50 ಕೋಟಿ ರೂ. ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ.
ಯಮಕನಮರಡಿಯಲ್ಲಿ 5.50 ಕೋಟಿ ರೂ. ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ.
ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಲೋಕೋಪಯೋಗಿ ಇಲಾಖೆಯ ವತಿಯಿಂದ ಅಂದಾಜು ರೂ. 5.50 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನೆರವೇರಿಸಲಾಯಿತು.
ಗ್ರಾಮೀಣ ಪ್ರದೇಶದ ಸಂಚಾರ ಸುಗಮಗೊಳಿಸುವ ಉದ್ದೇಶದಿಂದ ಕೈಗೊಳ್ಳಲಾದ ಈ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಸ್ಥಳೀಯರ ದೈನಂದಿನ ಪ್ರಯಾಣ, ವ್ಯಾಪಾರ, ಹಾಗೂ ಗ್ರಾಮೀಣ ಸಂಪರ್ಕ ವ್ಯವಸ್ಥೆಗೆ ಹೊಸ ಚೈತನ್ಯ ನೀಡಲಿವೆ.
ಕಾಮಗಾರಿಗಳ ವಿವರಗಳು:
ರಾಹೆ-4 ಇಂದಿರಾನಗರದಿಂದ ರಾಹೆ-78 ನಾಗನೂರ ಕೆ.ಎಂ. ವರೆಗೆ
ರಸ್ತೆ ಉದ್ದ: 4.00 ಕಿ.ಮೀ
ಕಾಮಗಾರಿಯ ಪ್ರಕಾರ: ಗ್ರಾಮೀಣ ರಸ್ತೆ ಸುಧಾರಣೆ, ಡಾಂಬರೀಕರಣ ಹಾಗೂ 1 ಸಿ.ಡಿ. ನಿರ್ಮಾಣ
ಅಂದಾಜು ಮೊತ್ತ: ₹400.00 ಲಕ್ಷ
ಹಳೆವಂಟಮೂರಿ – ಯಮಕನಮರಡಿ – ದಾದಬಾನಟ್ಟಿ – ಇಂದಿರಾನಗರದಿಂದ ತೇರಣಿ (ಮಹಾರಾಷ್ಟ್ರ ಗಡಿ) ವರೆಗೆ
ರಸ್ತೆ ಉದ್ದ: 1.42 ಕಿ.ಮೀ
ಕಾಮಗಾರಿಯ ಪ್ರಕಾರ: ಅಗಲೀಕರಣ ಮತ್ತು ಡಾಂಬರೀಕರಣ
ಅಂದಾಜು ಮೊತ್ತ: ₹150.00 ಲಕ್ಷ
ಈ ಯೋಜನೆಗಳು ಪೂರ್ಣಗೊಂಡ ಬಳಿಕ ಸ್ಥಳೀಯ ಜನತೆಗೆ ಸುರಕ್ಷಿತ ಹಾಗೂ ವೇಗದ ಸಂಚಾರ ವ್ಯವಸ್ಥೆ ದೊರೆಯಲಿದ್ದು, ಗ್ರಾಮೀಣ ಅಭಿವೃದ್ಧಿ ಮತ್ತು ವ್ಯಾಪಾರ ಚಟುವಟಿಕೆಗಳಿಗೆ ಸಹಕಾರಿಯಾಗಲಿದೆ.

