ಚಿತ್ರದುರ್ಗದಲ್ಲಿ ಮಧ್ಯರಾತ್ರಿ ಗ್ಯಾಂಗ್ ಅಟ್ಯಾಕ್ – ಯುವಕನ ಮೇಲೆ ದುಷ್ಕರ್ಮಿಗಳ ಅಮಾನುಷ ಹಲ್ಲೆ
ಚಿತ್ರದುರ್ಗದಲ್ಲಿ ಮಧ್ಯರಾತ್ರಿ ಗ್ಯಾಂಗ್ ಅಟ್ಯಾಕ್ – ಯುವಕನ ಮೇಲೆ ದುಷ್ಕರ್ಮಿಗಳ ಅಮಾನುಷ ಹಲ್ಲೆ
ನಗರದ ನಡು ರಸ್ತೆಯಲ್ಲೇ ಪುಂಡರ ಗುಂಪೊಂದು ಯುವಕನ ಮೇಲೆ ಅಟ್ಟಹಾಸ ನಡೆಸಿದ ಘಟನೆ ಚಿತ್ರದುರ್ಗದ ಜೋಗಿಮಟ್ಟಿ ರಸ್ತೆಯ 5ನೇ ಕ್ರಾಸ್ನಲ್ಲಿ ನಡೆದಿದೆ. ಗಾಂಧೀನಗರದ ನಿವಾಸಿ ಯಶವಂತ್ ಎಂಬ ಯುವಕನ ಮೇಲೆ ಗುರುವಾರ ಮಧ್ಯರಾತ್ರಿ ಸುಮಾರು 8ಕ್ಕೂ ಹೆಚ್ಚು ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ ನಡೆದಿದ್ದು, ಘಟನೆಯ ದೃಶ್ಯಗಳು ಸಮೀಪದ CCTV ಕ್ಯಾಮೆರಾದಲ್ಲಿ ಸೆರೆ ಆಗಿವೆ.
ಸ್ನೇಹಿತನ ಮನೆಗೆ ತೆರಳಿ ಮನೆಗೆ ಹಿಂದಿರುಗುತ್ತಿದ್ದ ಯಶವಂತನನ್ನು, ಆಟೋ ಹಾಗೂ ಬೈಕ್ನಲ್ಲಿ ಬಂದ ದುಷ್ಕರ್ಮಿಗಳ ಗುಂಪು ಅಡ್ಡಗಟ್ಟಿ, ನಡುರಸ್ತೆಯಲ್ಲೇ ಏಲೆದಾಡಿ ಲಾಠಿ, ಕಡ್ಡಿಗಳಿಂದ ಹಲ್ಲೆ ನಡೆಸಿದೆ ಎಂದು ತಿಳಿದುಬಂದಿದೆ.
ಹಳೆಯ ವೈಷಮ್ಯ ಹಾಗೂ ಕ್ಷುಲ್ಲಕ ಕಾರಣವೇ ಹಲ್ಲೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ.
ಹಲ್ಲೆ ನಡೆಸಿದವರಾಗಿ ಕೃಷ್ಣ, ತರುಣ್ @ ತುಂಟ, ರಾಮ್ @ ಕಲ್ಕಿ, ರೇಣುಕಾ, ದಯಾ, ಬಾಲರಾಜ್ ಸೇರಿದಂತೆ ಇನ್ನೂ ಕೆಲವರ ಹೆಸರು ಹೊರಬಂದಿವೆ.
ಗಂಭೀರವಾಗಿ ಗಾಯಗೊಂಡ ಯಶವಂತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿ, ಆರೋಪಿಗಳ ವಿರುದ್ಧ IPC 352, 151(2), 118(1), 109, 351(2), 190 BNS ಕಾಯ್ದೆಗಳಡಿ ಪ್ರಕರಣ ದಾಖಲಾಗಿದೆ.
ಪೊಲೀಸರು ಘಟನೆಯ ಸಂಪೂರ್ಣ ದೃಶ್ಯಾವಳಿಯನ್ನು ಪರಿಶೀಲಿಸುತ್ತಿದ್ದು, ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಕೈಗೊಂಡಿದ್ದಾರೆ.

