ಸುದ್ದಿ 

ನೆಲಮಂಗಲ: ರಸ್ತೆ ದುರಸ್ತಿ ವಿಚಾರದಲ್ಲಿ ಘರ್ಷಣೆ – ಮೂವರ ಮೇಲೆ ದಾಳಿ ಆರೋಪ

Taluknewsmedia.com

ನೆಲಮಂಗಲ: ರಸ್ತೆ ದುರಸ್ತಿ ವಿಚಾರದಲ್ಲಿ ಘರ್ಷಣೆ – ಮೂವರ ಮೇಲೆ ದಾಳಿ ಆರೋಪ

ನೆಲಮಂಗಲ ತಾಲೂಕಿನ ಕೆಂಗಲ್ ಕೆಂಪೋಹಳ್ಳಿ ಗ್ರಾಮದಲ್ಲಿ ರಸ್ತೆ ದುರಸ್ತಿ ಕಾರ್ಯದ ವೇಳೆ ವಾಗ್ವಾದ ಉಂಟಾಗಿ, ಅದು ನಂತರ ಹಲ್ಲೆಗೆ ತಿರುಗಿದ ಘಟನೆ ನಡೆದಿದೆ.

ಮಳೆ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಹಳ್ಳಗಳು ಹಾಗೂ ಗುಂಡಿಗಳು ಉಂಟಾಗಿದ್ದರಿಂದ, ಸ್ಥಳೀಯರು ಸ್ವಯಂ ಪ್ರೇರಿತರಾಗಿ ಮಣ್ಣು ಹಾಕಿ ರಸ್ತೆ ಸರಿಪಡಿಸಲು ಮುಂದಾಗಿದ್ದರು. ಆದರೆ ಇದೇ ವಿಚಾರದಲ್ಲಿ ಅನುಮತಿ ರಸ್ತೆ ಸಂಬಂಧ ಘರ್ಷಣೆ ಉಂಟಾಗಿ, ನಾಗರತ್ನಮ್ಮ ಎಂಬುವವರ ಮೇಲೆ ಪ್ರೇಮ್ ಕುಮಾರ್, ಜಯಮ್ಮ ಹಾಗೂ ಮಹಿಮೆಗೌಡ ಎಂಬ ಮೂವರು ದೊಣ್ಣೆ ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ.

ಸ್ಥಳದಲ್ಲಿ ಇದ್ದ ಮತ್ತೊಬ್ಬ ಮಹಿಳೆ ಘಟನೆಗೆ ಸಂಬಂಧಿಸಿದ ವಿಡಿಯೋ ಚಿತ್ರೀಕರಿಸುತ್ತಿದ್ದಾಗ, ಆರೋಪಿಗಳು ಆಕೆಯ ಮೇಲೂ ಹಲ್ಲೆ ಮಾಡಲು ಮುಂದಾಗಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

ಗ್ರಾಮಸ್ಥರ ಪ್ರಕಾರ, ಈ ರಸ್ತೆ ಊರಿನ ಎಲ್ಲರೂ ಬಳಸುವ ಸಾರ್ವಜನಿಕ ದಾರಿ ಆಗಿದ್ದು, ಕೆಲವರಿಂದ ಉದ್ದೇಶಪೂರ್ವಕವಾಗಿ ಕೆಲಸಕ್ಕೆ ಅಡ್ಡಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಘಟನೆಯ ಕುರಿತು ಡಾಬಸ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

Related posts