ಚಿನ್ನ ಕಳ್ಳತನ ಆರೋಪದ ಹಿನ್ನಲೆಯಲ್ಲಿ ಸ್ನೇಹಿತನ ಹತ್ಯೆ!
ಚಿನ್ನ ಕಳ್ಳತನ ಆರೋಪದ ಹಿನ್ನಲೆಯಲ್ಲಿ ಸ್ನೇಹಿತನ ಹತ್ಯೆ!
ಬೆಂಗಳೂರು ನಗರದ ಕೋಣನಕುಂಟೆ ಪ್ರದೇಶದ ಕೃಷ್ಣಪ್ಪ ಲೇಔಟಿನಲ್ಲಿ ದುರ್ಘಟನೆ ಸಂಭವಿಸಿದೆ. ತಾಯಿಯ ಚಿನ್ನ ಕಳುವಾದ ಪ್ರಕರಣದ ಬಗ್ಗೆ ನಡೆದ ವಾಗ್ವಾದದಲ್ಲಿ ಪ್ರೀತಂ ಎನ್ನುವ ಯುವಕ ತನ್ನ ಆಪ್ತ ಸ್ನೇಹಿತ ರಾಹುಲ್ ಅವರನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ.
ಮಾಹಿತಿಯ ಪ್ರಕಾರ, ಪ್ರೀತಂ ಮತ್ತು ರಾಹುಲ್ ಇಬ್ಬರೂ ಹತ್ತಿರದ ಸ್ನೇಹಿತರು. ಸುಮಾರು 10 ದಿನಗಳ ಹಿಂದೆ ಪ್ರೀತಂನ ತಾಯಿಯ 3 ಗ್ರಾಂ ಚಿನ್ನ ಕಾಣೆಯಾಗಿತ್ತು. ಈ ವಿಚಾರದಲ್ಲಿ ಇಬ್ಬರ ಮಧ್ಯೆ ಪರಸ್ಪರ ಆರೋಪ-ಪ್ರತ್ಯಾರೋಪ ನಡೆಯುತ್ತಿದ್ದವು. ಪ್ರೀತಂ ರಾಹುಲ್‌ನ ಮೇಲೆ ಅನುಮಾನ ವ್ಯಕ್ತಪಡಿಸಿದ್ದರೆ, ರಾಹುಲ್ ಕೂಡ ಚಿನ್ನ ಕದ್ದಿದ್ದು ಪ್ರೀತಂ ಎಂದೇ ಹೇಳಿದ್ದ.
ಘಟನೆಯ ದಿನ ರಾಹುಲ್ ಪ್ರೀತಂನ ಬ್ಯಾಗಿನಲ್ಲಿ ಚಿನ್ನ ಕಂಡು, “ನಿನ್ನ ಮಗನೇ ಕಳ್ಳ” ಎಂದು ಪ್ರೀತಂನ ತಾಯಿಗೆ ಹೇಳಿದ್ದಾನೆ ಎನ್ನಲಾಗಿದೆ. ಈ ಮಾತಿನಿಂದ ಆಕ್ರೋಶಗೊಂಡ ಪ್ರೀತಂ ರೋಷದ ಅಲೆಯಲ್ಲಿ ರಾಹುಲ್‌ನ ಮೇಲೆ ಚಾಕುವಿನಿಂದ ದಾಳಿ ನಡೆಸಿ ಸ್ಥಳದಲ್ಲೇ ಹತ್ಯೆಗೈದಿದ್ದಾನೆ.
ಈ ಘಟನೆಗೆ ಸಂಬಂಧಿಸಿದಂತೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಪ್ರೀತಂನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

