ಬೆಂಗಳೂರು ಗ್ರಾಮಾಂತರ: DDLR ಕಚೇರಿಯಲ್ಲಿ ಭ್ರಷ್ಟಾಚಾರದ ಬೃಹತ್ ಬಯಲು — ಉಪ ನಿರ್ದೇಶಕಿ ಕುಸುಮಲತಾ ವಿರುದ್ಧ ಗಂಭೀರ ಲಂಚದ ಆರೋಪ!
ಬೆಂಗಳೂರು ಗ್ರಾಮಾಂತರ: DDLR ಕಚೇರಿಯಲ್ಲಿ ಭ್ರಷ್ಟಾಚಾರದ ಬೃಹತ್ ಬಯಲು — ಉಪ ನಿರ್ದೇಶಕಿ ಕುಸುಮಲತಾ ವಿರುದ್ಧ ಗಂಭೀರ ಲಂಚದ ಆರೋಪ!
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಭ್ರಷ್ಟಾಚಾರದ ಪ್ರಮಾಣ ತಾರಕಕ್ಕೇರಿದ್ದು, ಸರ್ಕಾರಿ ಕಚೇರಿಗಳಲ್ಲಿ ಲಂಚವೇ ನಿಯಮವಾದಂತಾಗಿದೆ. ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಭವನದಲ್ಲಿರುವ ಭೂ ದಾಖಲೆಗಳ ಉಪ ನಿರ್ದೇಶಕರ (DDLR) ಕಚೇರಿಯಿಂದಲೇ ಭ್ರಷ್ಟಾಚಾರದ ದುರ್ಗಂಧ ಹೊರಬಿದ್ದಿದೆ. ಬಡ ರೈತರ ಹಕ್ಕಿನ ದಾಖಲೆಗಳನ್ನು ನೀಡುವ ಹೆಸರಿನಲ್ಲಿ ಲಂಚದ ಅಬ್ಬರ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಮೂಲಗಳ ಪ್ರಕಾರ, ಉಪ ನಿರ್ದೇಶಕಿ ಕುಸುಮಲತಾ ಅವರು ಯಾವುದೇ ಕೆಲಸಕ್ಕಾಗಿ ಲಂಚವಿಲ್ಲದೆ ಚಲಿಸುವುದೇ ಇಲ್ಲ ಎಂಬ ಮಾತು ಕಚೇರಿಯಲ್ಲೇ ಸಾಮಾನ್ಯವಾಗಿದೆ. ರೈತರಿಗೆ ದಾಖಲೆ ಪ್ರತಿಯನ್ನು ನೀಡಲು ಅಥವಾ ಅಂತಿಮ ಆದೇಶ ನೀಡಲು ₹50,000ರಿಂದ ₹1 ಲಕ್ಷದವರೆಗೆ ಲಂಚ ಬೇಡಿಕೆ ಇಡಲಾಗುತ್ತಿದೆ ಎಂಬ ಮಾಹಿತಿ ದೊರೆತಿದೆ.
ಇನ್ನಷ್ಟು ಅಘಾತಕಾರಿ ಸಂಗತಿ ಏನೆಂದರೆ — ಫೋನ್ ಪೇ, ಗೂಗಲ್ ಪೇ ಸೇರಿದಂತೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕವೇ ಹಣ ಸ್ವೀಕರಿಸಿದ್ದಾರೆಯೆಂಬ ಆರೋಪವೂ ಕೇಳಿಬಂದಿದೆ! ಸರ್ಕಾರಿ ಕಚೇರಿಯು “ಪಾವತಿ ಕಚೇರಿ”ಯಾಗಿ ಮಾರ್ಪಟ್ಟಂತಾಗಿದೆ ಎಂಬ ಮಾತು ಸಾರ್ವಜನಿಕರ ಮಧ್ಯೆ ಹರಿದಾಡುತ್ತಿದೆ.
ರೈತರ ಪರ ಹೋರಾಟಗಾರ ವಕೀಲ ನಿಖಿಲ್ ಎಂ ಅವರು ಈ ವಿಷಯವನ್ನು ತೀವ್ರವಾಗಿ ಪ್ರಶ್ನಿಸಿ, ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಅವರ ಪ್ರಕಾರ, “ಸರ್ಕಾರಿ ಕಚೇರಿಯು ಜನಸೇವೆಗಾಗಿ ಇರುವಂತದ್ದು; ಆದರೆ ಇಂದು ರೈತರಿಂದ ಹಣ ಸುಲಿಗೆ ಮಾಡುವ ಕೇಂದ್ರವಾಗಿ ಮಾರ್ಪಟ್ಟಿದೆ. ಇಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಅವಶ್ಯ” ಎಂದಿದ್ದಾರೆ.
ಜನತೆ ಮತ್ತು ರೈತರ ಹಣವನ್ನು ದೋಚಿ ಸೊಕ್ಕು ಜೀವನ ನಡೆಸುವ ಲಂಚಕೋರ ಅಧಿಕಾರಿಗಳ ವಿರುದ್ಧ ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ಎಲ್ಲೆಡೆ ಕೇಳಿಬರುತ್ತಿದೆ. ಸರ್ಕಾರ ಈ ಆರೋಪಗಳ ತನಿಖೆ ನಡೆಸಿ ನಿಜಾಸತ್ಯವನ್ನು ಬಹಿರಂಗಪಡಿಸುವ ಸಮಯ ಬಂದಿದೆ.
