ಅಕ್ರಮ ಮಾದಕ ವಸ್ತು ಸಾಗಾಟ ಬಯಲು: ಬೀದರ್ ನಿಲ್ದಾಣದಲ್ಲಿ ರೈಲ್ವೆ ಪೊಲೀಸರ ಸ್ಫೋಟಕ ಪತ್ತೆ!
ಬೀದರ್: ಹೈದರಾಬಾದ್ – ಪೂರ್ಣ ಎಕ್ಸ್ ಪ್ರೆಸ್ ರೈಲಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1.5 ಲಕ್ಷ ರೂ. ಮೌಲ್ಯದ 15 ಕೆ.ಜಿ ಗಾಂಜಾವನ್ನು ರೈಲ್ವೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರೈಲು ಬೀದರ್ ರೈಲ್ವೆ ನಿಲ್ದಾಣಕ್ಕೆ ಬಂದಾಗ, ಪೊಲೀಸರು ರೂಟೀನ್ ತಪಾಸಣೆ ವೇಳೆ ರೈಲಿನ ಹಿಂದಿನ ಜನರಲ್ ಬೋಗಿಗಳಲ್ಲಿ ಶಂಕಾಸ್ಪದ ಬ್ಯಾಗ್‌ಗಳನ್ನು ಪತ್ತೆ ಹಚ್ಚಿದರು. ಪರಿಶೀಲಿಸಿದಾಗ ಅದರಲ್ಲಿ ಗಾಂಜಾ ಪ್ಯಾಕೆಟ್‌ಗಳು ದೊರಕಿದ್ದು, ಪ್ರಕರಣ ದಾಖಲಾಗಿದೆಯೆಂದು ಮೂಲಗಳು ತಿಳಿಸಿವೆ.
ಈ ಕುರಿತು ರೈಲ್ವೆ ಪೊಲೀಸರು ತನಿಖೆ ಆರಂಭಿಸಿದ್ದು, ಗಾಂಜಾ ಸಾಗಾಟದ ಹಿಂದೆ ಯಾರ ಕೈವಾಡವಿದೆ ಎಂಬುದು ಪತ್ತೆ ಹಚ್ಚಲು ಕಾರ್ಯಚರಣೆ ಮುಂದುವರಿಸಿದ್ದಾರೆ.
ಸಿಪಿಐ ಬಸವರಾಜ್ ತೇಲಿ, ಪಿಎಸ್‌ಐ ಮಹಮ್ಮದ್ ಪಾಷಾ ಅವರ ನೇತೃತ್ವದಲ್ಲಿ ಸಿಬ್ಬಂದಿಗಳು ಈ ಯಶಸ್ವಿ ದಾಳಿ ನಡೆಸಿದ್ದಾರೆ.
ಅಕ್ರಮ ಮಾದಕ ವಸ್ತು ಸಾಗಾಟದ ವಿರುದ್ಧ ರೈಲ್ವೆ ಪೊಲೀಸರು ಕೈಗೊಂಡ ಈ ಕ್ರಮ ಶ್ಲಾಘನೀಯವಾಗಿದೆ ಎಂದು ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 🚆

