ಸುದ್ದಿ 

ಅಕ್ರಮ ಹಣದ ದುರ್ಬಳಕೆ ವಿಚಾರದಲ್ಲಿ ಉಮೇಶ ಮುದ್ನಾಳ ಆಕ್ರೋಶ ಪಿಡಿಒ ಅಮಾನತಿಗೆ ಆಗ್ರಹ – ಸರ್ಕಾರಕ್ಕೆ ಹಣ ವಾಪಸ್ ನೀಡುವಂತೆ ಒತ್ತಾಯ

Taluknewsmedia.com

ಅಕ್ರಮ ಹಣದ ದುರ್ಬಳಕೆ ವಿಚಾರದಲ್ಲಿ ಉಮೇಶ ಮುದ್ನಾಳ ಆಕ್ರೋಶ ಪಿಡಿಒ ಅಮಾನತಿಗೆ ಆಗ್ರಹ – ಸರ್ಕಾರಕ್ಕೆ ಹಣ ವಾಪಸ್ ನೀಡುವಂತೆ ಒತ್ತಾಯ

ಯಾದಗಿರಿ: ಮುದ್ನಾಳ ಗ್ರಾಮ ಪಂಚಾಯಿತಿಯ ಪಿಡಿಒ ನೀಲಕಂಠ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಅವರ ಅಕ್ರಮ ಚಟುವಟಿಕೆಗೆ ಬೆಂಬಲ ನೀಡಿದ ಇಒ ಹಾಗೂ ಜಿಲ್ಲಾ ಪಂಚಾಯಿತಿ ಪಿಡಿ ವಿರುದ್ಧ ಕೂಡ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಬೇಡಿಕೆ ಸಲ್ಲಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “2021-22ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಮುದಾಯ ಗೋದಾಮಿನ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳದೆ ಇದ್ದರೂ, ₹18.64 ಲಕ್ಷ ಪಾವತಿಸಿ ಭಾರೀ ಅವ್ಯವಹಾರ ನಡೆದಿದೆ,” ಎಂದು ಆರೋಪಿಸಿದರು.

ಅವರು ಮುಂದುವರಿದು, “ಜಿಲ್ಲಾ ಪಂಚಾಯಿತಿ ಸಿಇಒ ಆಗಸ್ಟ್ ತಿಂಗಳಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರೂ ಇಒ ನಿರ್ಲಕ್ಷ್ಯ ತೋರಿದ್ದಾರೆ. ಈ ಮೂಲಕ ಅಧಿಕಾರಿಗಳೂ ಅಕ್ರಮಕ್ಕೆ ಬೆಂಬಲ ನೀಡುತ್ತಿದ್ದಾರೆ,” ಎಂದು ಗಂಭೀರ ಆಕ್ರೋಶ ವ್ಯಕ್ತಪಡಿಸಿದರು.

ಆರ್‌ಒ ಪ್ಲಾಂಟ್, ಗ್ರಂಥಾಲಯ ಸೇರಿದಂತೆ ಅನೇಕ ಯೋಜನೆಗಳಲ್ಲೂ ಅಕ್ರಮ ನಡೆದಿದ್ದು, ಲಕ್ಷಾಂತರ ರೂಪಾಯಿ ದುರ್ಬಳಕೆಯಾಗಿದೆ ಎಂದು ಅವರು ಆರೋಪಿಸಿದರು. “ತಕ್ಷಣ ಕ್ರಮ ಕೈಗೊಂಡು ದುರ್ಬಳಕೆಯಾದ ಹಣವನ್ನು ವಸೂಲಿ ಮಾಡಿ ಸರಕಾರಕ್ಕೆ ಜಮಾ ಮಾಡಬೇಕು,” ಎಂದು ಆಗ್ರಹಿಸಿದರು.

ಅದೇ ರೀತಿ ಪಿಡಿಒ ಸುಳ್ಳು ಕಾರಣ ನೀಡಿ ರಜೆ ಪಡೆದು ಹೋಗಲು ಹಿರಿಯ ಅಧಿಕಾರಿಗಳೇ ಸಹಕರಿಸಿರುವುದು ವಿಷಾದನೀಯ ಎಂದು ಹೇಳಿದರು. “ಅವರನ್ನು ಅರಕೇರಾ (ಕೆ) ಗ್ರಾಮ ಪಂಚಾಯಿತಿಗೆ ವರ್ಗಾವಣೆ ಮಾಡಲಾಗಿದೆ. ಆದರೂ ಕ್ರಮ ಕೈಗೊಳ್ಳದಿದ್ದರೆ ‘ಗೋ ಬ್ಯಾಕ್ ಪಿಡಿಒ’ ಹೋರಾಟ ಆರಂಭಿಸುತ್ತೇವೆ,” ಎಂದು ಎಚ್ಚರಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಸಾಬಯ್ಯ ಗುತ್ತೇದಾರ್ ಹಾಗೂ ಶರಣು ನಾರಾಯಣಪೇಟ ಉಪಸ್ಥಿತರಿದ್ದರು.

Related posts