ಕಲಘಟಗಿ ಪೊಲೀಸ್ರ ಚುರುಕು ಕಾರ್ಯ: ವಾಹನ ಬ್ಯಾಟರಿ ಕಳ್ಳರು ಸಿಕ್ಕು ಬಿದ್ದರು
ಕಲಘಟಗಿ ಪೊಲೀಸ್ರ ಚುರುಕು ಕಾರ್ಯ: ವಾಹನ ಬ್ಯಾಟರಿ ಕಳ್ಳರು ಸಿಕ್ಕು ಬಿದ್ದರು.
ಕಲಘಟಗಿ ಪೊಲೀಸ್ ವಾಹನ ಬ್ಯಾಟರಿ ಕಳ್ಳರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಗಸ್ಟ್ 30ರಿಂದ 31ರ ಮಧ್ಯರಾತ್ರಿ ವೇಳೆ ಹಾಗೂ ಅಕ್ಟೋಬರ್ 25ರಿಂದ 26ರ ಮಧ್ಯೆ ಪಿರ್ಯಾದಿದಾರರ ಮನೆಯಿಂದ ಹತ್ತಿರ ಪಾರ್ಕ್ ಮಾಡಲಾಗಿದ್ದ ಲಾರಿಗಳಿಂದ ಒಟ್ಟು ಏಳು ಬ್ಯಾಟರಿಗಳನ್ನು ಕಳವು ಮಾಡಲಾಗಿತ್ತು. ಪ್ರತಿಯೊಂದು ಬ್ಯಾಟರಿಯ ಮೌಲ್ಯ ರೂ.10,000 ಆಗಿದ್ದು, ಒಟ್ಟಾರೆ ರೂ.70,000 ಕಿಮ್ಮತ್ತಿನ ವಸ್ತುಗಳನ್ನು ಕಳ್ಳರು ಕದ್ದೊಯ್ದಿದ್ದರು.
ಈ ಸಂಬಂಧ ಕಲಘಟಗಿ ಪೊಲೀಸ್ರ ಠಾಣೆಯಲ್ಲಿ 249/2025, ಕಲಂ 303(2) ಬಿ.ಎನ್.ಎಸ್.ಎಸ್ 2023 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯ ವೇಳೆ ಪಿ.ಐ ಶ್ರೀಶೈಲ ಕೌಜಲಗಿ, ಸಿ.ಎನ್.ಕರ ವಿರಪ್ಪನವರ, ಪಿ.ಎಸ್.ಐ (ಅಪರಾಧ ವಿಭಾಗ) ಹಾಗೂ ಠಾಣಾ ಸಿಬ್ಬಂದಿಗಳ ತಂಡ ತ್ವರಿತ ಕ್ರಮ ಕೈಗೊಂಡು ಮೂವರು ಆರೋಪಿತರನ್ನು ಪತ್ತೆ ಮಾಡಿ ಬಂಧಿಸಿದೆ.
ಬಂಧಿತರಿಂದ ಒಟ್ಟು 25 ವಾಹನ ಬ್ಯಾಟರಿಗಳು (ಅಂದಾಜು ಮೌಲ್ಯ ರೂ.2,35,000) ಹಾಗೂ 2 ಮೊಟಾರ್‌ಸೈಕಲ್‌ಗಳು (ರೂ.1,95,000 ಕಿಮ್ಮತ್ತು) ಸೇರಿ ಸುಮಾರು ರೂ.4,35,000 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಯಶಸ್ವಿ ಪತ್ತೆ ಕಾರ್ಯವನ್ನು ಪೊಲೀಸ್ ಅಧೀಕ್ಷಕ ಗುಂಜನ್ ಆರ್ಯ, ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಪ್ರಭಾರ) ಶಿವಾನಂದ ಕಟಗಿ, ಧಾರವಾಡ ಗ್ರಾಮೀಣ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ವಿನೋದ ಎಂ. ಮುಕ್ತಿದಾರ ಅವರ ಮಾರ್ಗದರ್ಶನದಲ್ಲಿ ನಡೆಸಲಾಗಿದೆ. ಹಿರಿಯ ಅಧಿಕಾರಿಗಳು ಈ ಕಾರ್ಯವನ್ನು ಶ್ಲಾಘಿಸಿದ್ದಾರೆ.

