ಕ್ರೈಂ ಸುದ್ದಿ ಸುದ್ದಿ 

ಮಂಗಳೂರಿನ ಕುಖ್ಯಾತ ರೌಡಿ ಟೊಪ್ಪಿ ನೌಫಾಲ್ ಹತ್ಯೆ!

Taluknewsmedia.com

ಮಂಗಳೂರಿನ ಕುಖ್ಯಾತ ರೌಡಿ ಟೊಪ್ಪಿ ನೌಫಾಲ್ ಹತ್ಯೆ!

ಕೇರಳದ ಉಪ್ಪಳದಲ್ಲಿ ಮಾರಕಾಸ್ತ್ರಗಳಿಂದ ಬರ್ಬರ ದಾಳಿ

ಮಂಗಳೂರು: ಮಂಗಳೂರಿನ ಕಖ್ಯಾತ ಗ್ಯಾಂಗ್‌ಸ್ಟರ್ ಟೊಪ್ಪಿ ನೌಫಾಲ್ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ನಿರ್ದಯವಾಗಿ ಹತ್ಯೆ ಮಾಡಿದ್ದಾರೆ. ಈ ಘಟನೆ ಕೇರಳದ ಉಪ್ಪಳ ಪ್ರದೇಶದಲ್ಲಿ ನಡೆದಿದೆ. ವರದಿಗಳ ಪ್ರಕಾರ, ನೌಫಾಲ್ ಮೇಲೆ ಹಲವರು ಸೇರಿಕೊಂಡು ಯೋಜಿತವಾಗಿ ದಾಳಿ ನಡೆಸಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ನೌಫಾಲ್ 2017ರಲ್ಲಿ ಮಂಗಳೂರಿನ ಫರಂಗಿಪೇಟೆಯಲ್ಲಿ ನಡೆದ ಅಡ್ಯಾರ್ ಜಿಯಾ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದನು. ಅವನ ವಿರುದ್ಧ ಮಂಗಳೂರು ನಗರದಲ್ಲಿ ಹತ್ತಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಪೊಲೀಸ್ ವಲಯದಲ್ಲಿ ನೌಫಾಲ್ ಒಬ್ಬ ಅಪಾಯಕಾರಿ ರೌಡಿ ಅಂಶ ಎಂದು ಪರಿಗಣಿಸಲ್ಪಟ್ಟಿದ್ದನು.

ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಗ್ಯಾಂಗ್ ವೈಷಮ್ಯ ಅಥವಾ ಹಳೆಯ ವೈರಿ ಕೊಲೆ ಹಿನ್ನಲೆಯಲ್ಲಿ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಉಪ್ಪಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Related posts