ಇನ್ನು ಸಿಮ್ ಇದ್ದರೆಷ್ಟೋ ಮೆಸೇಜಿಂಗ್ ಆ್ಯಪ್ ಬಳಕೆಗೂ ಅಡ್ಡಿ: ಕೇಂದ್ರ ಸರ್ಕಾರ ನಿರ್ಧೇಶನ
ಇನ್ನು ಸಿಮ್ ಇದ್ದರೆಷ್ಟೋ ಮೆಸೇಜಿಂಗ್ ಆ್ಯಪ್ ಬಳಕೆಗೂ ಅಡ್ಡಿ: ಕೇಂದ್ರ ಸರ್ಕಾರ ನಿರ್ಧೇಶನ
ಆ್ಯಪ್‌ಗಳ ದುರ್ಭಳಕೆ, ಸೈಬರ್ ಅಪರಾಧ ತಡೆಯಲು ಹೊಸ ಕ್ರಮ – 6 ತಿಂಗಳ ಒಳಗೆ ವಾಟ್ಸ್ಆ್ಯಪ್ ಮೆಸೇಜಿಂಗ್‌ಗೂ ಲಾಗಿನ್ ಅಗತ್ಯ
ಬೆಂಗಳೂರು: ಆನ್‌ಲೈನ್ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಇದೀಗ ಪ್ರಮುಖ ಕ್ರಮ ಕೈಗೆತ್ತಿಕೊಳ್ಳಲು ಮುಂದಾಗಿದೆ. ಇದೀಗ ಮೊಬೈಲ್ ಸಿಮ್ ಇದ್ದರೆ ಸಾಕು, ಅನೇಕ ಮೆಸೇಜಿಂಗ್ ಆ್ಯಪ್‌ಗಳನ್ನು ಸುಲಭವಾಗಿ ಬಳಸಬಹುದಾದ ವ್ಯವಸ್ಥೆಗೆ ಅಡ್ಡಿ ಬರುವ ಸಾಧ್ಯತೆ ಇದೆ.
ಸೈಬರ್ ಅಪರಾಧ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ಕಾನೂನು ರೂಪಿಸುವ ಕೆಲಸವನ್ನು ಆರಂಭಿಸಿದ್ದು, ಎಲ್ಲಾ ಮೆಸೇಜಿಂಗ್ ಆ್ಯಪ್‌ಗಳಲ್ಲಿ ಲಾಗಿನ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲು ತಯಾರಿ ನಡೆಸುತ್ತಿದೆ.
ವಾಟ್ಸ್ಆ್ಯಪ್, ಟೆಲಿಗ್ರಾಂ, ಫೇಸ್ಬುಕ್ ಮೆಸೆಂಜರ್, ಇನ್ಸ್ಟಾಗ್ರಾಂ, ಎಕ್ಸ್ (ಟ್ವಿಟ್ಟರ್) ಸೇರಿದಂತೆ ಎಲ್ಲಾ ಆ್ಯಪ್‌ಗಳಲ್ಲಿ ಲಾಗಿನ್ ಇಲ್ಲದೆ ಸೇವೆ ಸಿಗಬಾರದೆನ್ನುವುದು ಸರ್ಕಾರದ ಉದ್ದೇಶ.
ಸುಮಾರು 90 ದಿನಗಳ ಒಳಗೆ ಶಿಫಾರಸುಗಳ ಮಸೂದೆ ಸಿದ್ಧಗೊಳ್ಳುವ ಸಾಧ್ಯತೆ ಇದ್ದು, 2025ರ ಆರಂಭದಲ್ಲಿ ಈ ಕಾನೂನು ಜಾರಿಗೆ ಬರುವ ಸಾಧ್ಯತೆ ಇದೆ ಎಂದು ವರದಿಗಳು ಸೂಚಿಸುತ್ತವೆ.
ಪ್ರಸ್ತುತ, ಯಾವುದೇ ಸಿಮ್ ಇದ್ದರೆ ತಕ್ಷಣ ವಾಟ್ಸ್ಆ್ಯಪ್ ಮತ್ತು ಇತರೆ ಆ್ಯಪ್‌ಗಳನ್ನು ಬಳಸಬಹುದಾದ ವ್ಯವಸ್ಥೆಯಿದೆ. ಆದರೆ ದುರುಪಯೋಗದ ಘಟನೆಗಳು ಹೆಚ್ಚುತ್ತಿರುವ ಕಾರಣ ಲಾಗಿನ್ ವ್ಯವಸ್ಥೆ ಕಡ್ಡಾಯ ಮಾಡುವ ಚಿಂತನೆ ನಡೆದಿದೆ.
ಉದ್ದೇಶವೇನು? ಸೈಬರ್ ಅಪರಾಧಗಳನ್ನು ತಡೆಯುವುದು. ನಕಲಿ ಖಾತೆಗಳನ್ನು ನಿಯಂತ್ರಿಸುವುದು.ಕಾನೂನು ಪಾಲನೆಗೆ ಅನುಕೂಲ ಮಾಡುವುದು ಆ್ಯಪ್ ದುರ್ನಡೆಯ ಬಲೆಗೆ ಸಿಲುಕುವವರನ್ನು ರಕ್ಷಿಸುವುದು
6 ತಿಂಗಳ ನಂತರ (ಕಾನೂನು ಜಾರಿಗೆ ಬಂದ ಬಳಿಕ) ಲಾಗಿನ್ ಇಲ್ಲದೆ ಯಾವುದೇ ಮೆಸೇಜಿಂಗ್ ಆ್ಯಪ್ ಬಳಸಲು ಆಗದಂತೆ ವ್ಯವಸ್ಥೆ ರೂಪಿಸಲಾಗುವುದು.

