ಸುದ್ದಿ 

ರಾಜ್ಯದಲ್ಲಿ ಮತ್ತೊಂದು ದೊಡ್ಡ ಭ್ರಷ್ಟಾಚಾರ ಬಯಲು: ‘ಹೆಸ್ಕಾಂ’ನಲ್ಲಿ 90 ಕೋಟಿ ರೂ. ಅಕ್ರಮ ಪತ್ತೆ – ಸಿಐಡಿ ವರದಿ

Taluknewsmedia.com

ರಾಜ್ಯದಲ್ಲಿ ಮತ್ತೊಂದು ದೊಡ್ಡ ಭ್ರಷ್ಟಾಚಾರ ಬಯಲು: ‘ಹೆಸ್ಕಾಂ’ನಲ್ಲಿ 90 ಕೋಟಿ ರೂ. ಅಕ್ರಮ ಪತ್ತೆ – ಸಿಐಡಿ ವರದಿ

ರಾಜ್ಯದ ಇಂಧನ ಇಲಾಖೆಯನ್ನು ನಡುಗಿಸುವಂತ ದೊಡ್ಡ ಹೊಳೆದುಹೋಗಿರುವ ಅಕ್ರಮ ಮತ್ತೊಂದು ಬೆಳಕಿಗೆ ಬಂದಿದೆ. ಟ್ರಾನ್ಸ್‌ಫಾರ್ಮರ್ ವಿತರಣಾ ಪ್ರಕ್ರಿಯೆಯಲ್ಲಿ ಸುಮಾರು 80 ರಿಂದ 90 ಕೋಟಿ ರೂಪಾಯಿ ಮೌಲ್ಯದ ಭ್ರಷ್ಟಾಚಾರ ನಡೆದಿರುವುದನ್ನು ಸಿಐಡಿ ಪ್ರಾಥಮಿಕ ತನಿಖೆ ಬಹಿರಂಗಪಡಿಸಿದೆ.

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ವ್ಯಾಪ್ತಿಯಲ್ಲೇ ಈ ಗಂಭೀರ ಹಗರಣ ನಡೆದಿದೆ ಎನ್ನಲಾಗಿದ್ದು, ಟ್ರಾನ್ಸ್‌ಫಾರ್ಮರ್‌ಗಳನ್ನು ಹಂಚಿಕೆಯಾಗುವಲ್ಲಿ ಕೆಲವು ಅಧಿಕಾರಿಗಳು ದೊಡ್ಡ ಮಟ್ಟದ ಲೆಕ್ಕಪತ್ರ ತಿರುವಾಟ ನಡೆಸಿರುವುದು ಪತ್ತೆಯಾಗಿದೆ.

ಗ್ರಾಮೀಣ ಪ್ರದೇಶಗಳಿಗೆ ನೀಡಲಾಗಿದೆ ಎಂದು ತೋರಿಸಿದ ಟ್ರಾನ್ಸ್‌ಫಾರ್ಮರ್‌ಗಳ ವಿವರಗಳನ್ನು ಕೇಳಿದಾಗ, ನಗರ ಪ್ರದೇಶದ ಲೆಕ್ಕಪತ್ರಗಳನ್ನು ನೀಡುವ ಮೂಲಕ ಇಲಾಖೆ ಮುಂದೆ ತಪ್ಪು ಮಾಹಿತಿ ಒದಗಿಸಿರುವುದು ತನಿಖೆಯಲ್ಲಿ ಸ್ಪಷ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.

9ಕ್ಕೂ ಹೆಚ್ಚು ಖಾಸಗಿ ಕಂಪನಿಗಳು ಮತ್ತು ಹೆಸ್ಕಾಂನ ದಾಸ್ತಾನು ವಿಭಾಗದ ಮೇಲ್ವಿಚಾರಕ ಸೇರಿ ಹಲವು ಹಿರಿಯ ಅಧಿಕಾರಿಗಳು ಈ ದಂಧೆಯಲ್ಲಿ ಭಾಗಿಯಾಗಿರುವ ಶಂಕೆ ಇದೆ. ಇದರಿಂದಾಗಿ, ಸಂಭಂದಿತ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿಯಲ್ಲಿ ಕ್ರಮ ಕೈಗೊಳ್ಳಲು ಸಿಐಡಿ ಸಿದ್ಧತೆ ಆರಂಭಿಸಿದೆ.

ಸಿಐಡಿ ಈಗಾಗಲೇ ಹೆಸ್ಕಾಂ ಅಧಿಕಾರಿಗಳಿಗೆ ಹೆಚ್ಚಿನ ದಾಖಲೆಗಳನ್ನು ಸಲ್ಲಿಸುವಂತೆ ಸೂಚನೆ ನೀಡಿದೆ. ಕೆಲವು ದಾಖಲೆಗಳು ಬಂದಿದ್ದರೂ, ಹಗರಣದ ವ್ಯಾಪ್ತಿ ತುಂಬಾ ದೊಡ್ಡದಾಗಿರುವುದರಿಂದ ಇನ್ನಷ್ಟು ವಿವರಗಳನ್ನು ಕೇಳಲಾಗಿದೆ. ದಾಖಲೆಗಳ ಪರಿಶೀಲನೆ ಪೂರ್ಣವಾದ ನಂತರ, ಸಂಬಂಧಿತ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು ಮತ್ತು ವಿಚಾರಣೆ ಹಂತ ಆರಂಭವಾಗಲಿದೆ ಎಂದು ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ.

ಟ್ರಾನ್ಸ್‌ಫಾರ್ಮರ್ ವಿತರಣೆಯ ದಾಖಲೆಗಳನ್ನು ಪರಿಶೀಲಿಸಿದಾಗ ದಾಸ್ತಾನು ವಿಭಾಗದ ಮೇಲ್ವಿಚಾರಕ ಸೇರಿ ಕೆಲ ಅಧಿಕಾರಿಗಳು ನಕಲಿ ಲೆಕ್ಕಪತ್ರಗಳನ್ನು ಸೃಷ್ಟಿಸಿರುವುದು ಸ್ಪಷ್ಟವಾಗಿದೆ. ಒಟ್ಟು 1500 ಟ್ರಾನ್ಸ್‌ಫಾರ್ಮರ್‌ಗಳ ವಿತರಣೆಯಲ್ಲಿ ನಡೆದಿರುವ ಈ ಅಕ್ರಮದ ಮೊತ್ತ ಈಗಾಗಲೇ 80-90 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಆದರೆ ತನಿಖೆ ಮುಂದುವರೆದಿರುವುದರಿಂದ ಅಕ್ರಮದ ನಿಜವಾದ ಮೊತ್ತ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸಿಐಡಿ ಮೂಲಗಳು ಹೇಳಿವೆ.

Related posts