ಶಿವರಾಜ ತಂಗಡಗಿ ಪ್ರಸ್ತುತ ರಾಜಕೀಯ ವಾತಾವರಣದ ಅಭಿಪ್ರಾಯ ಹೇಳಿದ್ದು ಈ ರೀತಿ..
ಶಿವರಾಜ ತಂಗಡಗಿ ಪ್ರಸ್ತುತ ರಾಜಕೀಯ ವಾತಾವರಣದ ಅಭಿಪ್ರಾಯ ಹೇಳಿದ್ದು ಈ ರೀತಿ..
ಸ್ವಾಮಿ, 45 ಟಿಎಂಸಿ ನೀರು ಇದ್ದಾಗ ನಾನು ಬಿಟ್ಟಿದ್ದೆ. ಅದು ಸುಗ್ಗಿ ಬೆಳೆಗಾಗಿ ಅಲ್ಲ; ಸುಗ್ಗಿಬೆಳೆಗೆ ನೀರು ಬಿಡುವುದೇ ಬೇರೆ. ಸುಗ್ಗಿ ಬೆಳೆ ಎಂದರೆ ಮಳೆಗೆ ಅವಲಂಬಿತವಾದ ಬೆಳೆಯಂತೆ—ಮಳೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿರುತ್ತೇವೆ. ಅದು ಫೇಲ್ ಆದರೆ, ಬೇರೆ ಕ್ರಮ ತೆಗೆದುಕೊಳ್ಳಬೇಕು.
ನಾವು ಈಗ ಸಮಯಕ್ಕಾಗಿಯೇ ಕೆಲಸ ಮಾಡುತ್ತಿದ್ದೇವೆ. ಡಿಸೆಂಬರ್ ಎರಡನೇ ವಾರದೊಳಗೆ ನೀರು ಬಿಡುವ ಕಾರ್ಯ ಪ್ರಾರಂಭವಾಗುತ್ತದೆ. ನಾನು 5 ಅಥವಾ 6ರಂದು ಬೆಟ್ಟಿಗೆ ಬರುತ್ತೇನೆ. ಎರಡನೇ ವಾರದೊಳಗೆ ಗೇಟ್‌ಗಳನ್ನು ಸ್ಟಾರ್ಟ್ ಮಾಡುತ್ತೇವೆ. ಯಾಕೆಂದರೆ ನೀರಿನ ಮಟ್ಟ ಕೆಳಗೆ ಇಳಿಯಬೇಕು—ಅದೇ ವಾಸ್ತವ ಸತ್ಯ. ಸುಮ್ಮನೆ ‘ಕ್ರಸ್ಟ್ ಲೆವೆಲ್ ಕೆಳಗೆ’ ಅಂತ ಹೇಳಿದ್ರೆ ಆಗುವುದಿಲ್ಲ; ಕಾರ್ಯಪ್ರವೃತ್ತಿಯಾಗಬೇಕು.
ಈಗ ಎಲ್ಲ ಕಡೆ ಗೇಟ್‌ಗಳನ್ನು ರೆಡಿ ಮಾಡಿಕೊಂಡಿದ್ದೇವೆ. 16 ಟಿಎಂಸಿ ಅಂತಿಲ್ಲ, 14 ಟಿಎಂಸಿ ಆಗುತ್ತದೆ. ವಿರೋಧ ಪಕ್ಷದವರಿಗೆ ತುಂಗಭದ್ರಾ ನದಿ ಬಗ್ಗೆ ಏನು ಗೊತ್ತು? ಅವರಿಗೆ ಅದನ್ನು ಹೇಳಿ ಕಲಿಸಬೇಕಾದ ಪರಿಸ್ಥಿತಿ.
ತುಂಗಭದ್ರೆಯ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಇದೆ. ನಮ್ಮ ಭಾಗದ ರೈತರ ಬಗ್ಗೆ ಕಳಕಳಿ ಇದೆ. ಕಾಂಗ್ರೆಸ್ ಯಾರನ್ನೂ ದಿಕ್ಕು ತಪ್ಪಿಸೋದಿಲ್ಲ; ನಾವು ಕೆಲಸ ಮಾಡಿ ತೋರಿಸುವವರು. ವಿರೋಧ ಪಕ್ಷದವರ ವಿಚಾರವೇ ಬೇರೆ. ಕೇಂದ್ರ ಸರ್ಕಾರವೇ ಜೊತೆಗಿದೆ ಅಂತ ಹೇಳಿಕೊಳ್ಳುತ್ತಾರೆ, ಆದರೆ ಕೆಲಸದಲ್ಲಿ ತಾಕತ್ತಿರಬೇಕು.
‘ಟಿಎಂಸಿ ನೀರು ಬಿಡಿ’ ಅಂತ ಯಾರು ಹೇಳಿದ್ರೋ, ಅವರು ಸಿಡಬ್ಸ ಹೇಳಿದ್ದನ್ನೇ ಪುನರಾವರ್ತಿಸುತ್ತಿದ್ದಾರೆ. ಅದು ಅವರಿಗೆ ‘ಬೆಲ್ಲ ಇಟ್ಟಂತೆ’ ಸಿಹಿ ಹೇಳುತ್ತಾ ಇತ್ತು—ಈಗ ಮತ್ತೆ ನಾಟಕ ಕಂಪನಿ! ಇಂತಹ ನಾಟಕಗಳ ಬಗ್ಗೆ ಮಾತನಾಡುವ ಅಗತ್ಯವೇ ಇಲ್ಲ. ಜನರಿಗೆ ಸತ್ಯ ಗೊತ್ತಿದೆ.
ಈಗ ಅವಿಶ್ವಾಸದ ಬಗ್ಗೆ ಮಾತಾಡುತ್ತಿದ್ದಾರೆ—ಮಾಡಲಿ, ಅವರಿಗೆ ಹಕ್ಕಿದೆ. ಅಧಿವೇಶನದಲ್ಲಿ ಸ್ಪೀಕರ್ ಏನು ಒಪ್ಪಿಕೊಳ್ತಾರೋ, ಅದಕ್ಕೆ ತಕ್ಕ ಉತ್ತರ ಕೊಡುತ್ತೇವೆ. ‘ಫೇಲ್’ ಎಂದು ಹೇಳುವುದು ನಗುವಿನ ವಿಷಯ. ನಾವು 140 ಮಂದಿ ಇದ್ದೇವೆ. ಇಲ್ಲಿ ಫೇಲ್ ಎನ್ನುವ ಪ್ರಶ್ನೆಯೇ ಇಲ್ಲ.
ಇಷ್ಟು ದೊಡ್ಡ ವಿಷಯವನ್ನು ಪತ್ರಕರ್ತರಿಗೆ ಕೇಳದೆ ನಮ್ಮನ್ನೇ ಕೇಳುತ್ತಿದ್ದೀರಿ—ಒಮ್ಮೆ ಅವರು ಬಿಜೆಪಿ ನಾಯಕರನ್ನು ಕೇಳಿ. ಇಂದು ಉಪಮುಖ್ಯಮಂತ್ರಿಗಳೂ, ಮುಖ್ಯಮಂತ್ರಿಗಳೂ, ಎಲ್ಲ ಮಂತ್ರಿಗಳೂ, ಶಾಸಕರೂ ನಗುಮುಖದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಳುವವರು ಯಾರಂದ್ರೆ—ಅದು ಬಿಜೆಪಿ. ಬಿಜೆಪಿ ಅವರೇ ಕಣ್ಣೀರು ಹಾಕ್ತಿದ್ದಾರೆ.

