ಸುದ್ದಿ 

ರಾಜಕೀಯ ನಾಯಕರ ವರ್ತನೆಗೆ ಕಿಡಿಕಾರಿರುವ ಜಿ. ಜನಾರ್ಧನ ರೆಡ್ಡಿ, “ಜನರ ಕಷ್ಟ ಯಾರಿಗೂ ಕಾಣುತ್ತಿಲ್ಲ,

Taluknewsmedia.com

ರಾಜಕೀಯ ನಾಯಕರ ವರ್ತನೆಗೆ ಕಿಡಿಕಾರಿರುವ ಜಿ. ಜನಾರ್ಧನ ರೆಡ್ಡಿ, “ಜನರ ಕಷ್ಟ ಯಾರಿಗೂ ಕಾಣುತ್ತಿಲ್ಲ, ಮಂತ್ರಿಗಳಿಗೆ ತಮ್ಮ ಸ್ಥಾನ ಮಾತ್ರ ಮುಖ್ಯ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅವರು ಮಾತನಾಡಿ, “ರೈತರು ಇಂದು ಪ್ರವಾಹ, ಅತಿವೃಷ್ಠಿ, ಬೆಳೆ ನಾಶ — ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ರಾಜ್ಯದ ಹಲವಾರು ಭಾಗಗಳಲ್ಲಿ ಇದೇ ರೀತಿ ಪರಿಸ್ಥಿತಿ ಇದೆ. ಆದರೆ ಮಂತ್ರಿಗಳು ಟಿಫನ್‌ ಮೇಜಿನಲ್ಲೇ ಕುಳಿತು ತಮ್ಮ ‘ಸೀಟಿಂಗ್’ ರಾಜಕಾರಣ ಮಾಡ್ತಾ ಇದ್ದಾರೆ. ಸಿಎಂ–ಡಿಸಿಎಂ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿದ್ದರೂ, ಕನಿಷ್ಠ ಈ ಜಿಲ್ಲೆಗೆ ಸಂಬಂಧಪಟ್ಟ ಮಂತ್ರಿಗಳು ಇದ್ದಾರೆ ಅಲ್ವಾ? ಯಾರಾದರೂ ಒಂದು ದಿನ ಮುಂಚೆಯೇ ಬಂದು ರೈತರ ಜೊತೆ ಮಾತಾಡಬಹುದಿತ್ತು,” ಎಂದು ಆರೋಪಿಸಿದರು.

ಅವರು ಮುಂದುವರಿಸಿದರು:
“ರೈತರು ಹೋರಾಟಕ್ಕೆ ಬರ್ತಿದ್ದಾರೆ ಅಂತ ದಿನಾಂಕ ನಿಗದಿ ಪಡಿಸಿದ್ದೇವೆ ಅಂತ ಹೇಳಿದಾಗಲೇ ಸರ್ಕಾರ ಜಾಗೃತಿಯಾಗಬೇಕಾಗಿತ್ತು. ಒಂದು ದಿನ ಮುಂಚೆ ಬಂದಿದ್ದರೆ, ‘ಬೆಂಬಲ ಬೆಲೆ ಕೊಡ್ತೀವಿ, ಖರೀದಿ ಕೇಂದ್ರಗಳನ್ನು ಓಪನ್ ಮಾಡ್ತೀವಿ’ ಅನ್ನೋ ಭರವಸೆ ನೀಡಬಹುದಿತ್ತು. ಹೋರಾಟಕ್ಕೆ ಬರೋ ಅಗತ್ಯವೇ ಇರಲಿಲ್ಲ. ಆದರೆ ಅವರು ಬರಲಿಲ್ಲ… ಯಾಕೆಂದರೆ ಮಂತ್ರಿ ಸ್ಥಾನ ತಲಣ ಆಗೋ ಭಯ. ಇಂದು ಮುಖ್ಯಮಂತ್ರಿ ಬದಲಾಯಿಸೋದ್ರಲ್ಲಿ ನಮ್ಮ ಸ್ಥಾನ ಕಡಿಮೆಯಾಗುತ್ತದಾ, ಹೆಚ್ಚಾಗುತ್ತದಾ — ಇದೇ ಲೆಕ್ಕ. ರೈತರು ಹಾಳಾದ್ರೂ, ಜನ ಹಳಗೆ ಹೋದ್ರೂ ಪರವಾಗಿಲ್ಲ. ಸೀಟ್ ಮಾತ್ರ ಉಳಿಯಬೇಕು ಎಂಬ ಮನೋಭಾವನೆ,” ಎಂದು ಟೀಕಿಸಿದರು.

ಸಿಎಂ ಸಿದ್ಧರಾಮಯ್ಯರ ಇತ್ತೀಚಿನ “ರಾಜಕೀಯ ಶಾಶ್ವತ ಅಲ್ಲ” ಎಂಬ ಹೇಳಿಕೆಯನ್ನು ಉಲ್ಲೇಖಿಸಿದ ಅವರು, “ಇಂತಹ ದೊಡ್ಡ ವೈರಾಗ್ಯದ ಮಾತುಗಳ ಕಾಲ ಇದು ಅಲ್ಲ. ರೈತರು ಸಂಕಷ್ಟದಲ್ಲಿದ್ದಾರೆ. ಅವರ ಕಣ್ಣೀರು ಒರೆಸೋ ಜವಾಬ್ದಾರಿ ನಿಮ್ಮದು. ಒಂದು ಗಂಟೆ ಸಮಯ ತೆಗೆದುಕೊಂಡು ಅವರ ಬಗ್ಗೆ ಮಾತನಾಡಿದ್ದರೆ ಬಹಳ ಸಮಸ್ಯೆಗಳು ಪರಿಹಾರವಾಗುತ್ತಿತ್ತು,” ಎಂದು ಮನವಿ ಮಾಡಿದರು.

Related posts