ಸುದ್ದಿ 

ನಟಿ ಆಶಿಕಾ ರಂಗನಾಥ್ ಅವರ ಸಂಬಂಧಿ ಅಚಲಾ ಆತ್ಮಹತ್ಯೆ ಪ್ರಕರಣ : ತನಿಖೆಗೆ ವೇಗ, ಪ್ರಮುಖ ಸಾಕ್ಷ್ಯಗಳು ಪೊಲೀಸರ ಕೈಗೆ

Taluknewsmedia.com

ನಟಿ ಆಶಿಕಾ ರಂಗನಾಥ್ ಅವರ ಸಂಬಂಧಿ ಅಚಲಾ ಆತ್ಮಹತ್ಯೆ ಪ್ರಕರಣ : ತನಿಖೆಗೆ ವೇಗ, ಪ್ರಮುಖ ಸಾಕ್ಷ್ಯಗಳು ಪೊಲೀಸರ ಕೈಗೆ

ಹಾಸನ ಜಿಲ್ಲೆಯಲ್ಲಿ ನಟಿ ಆಶಿಕಾ ರಂಗನಾಥ್ ಅವರ ಸಂಬಂಧಿ ಅಚಲಾ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಹೊಸ ತಿರುವು ದೊರಕಿದೆ. ಪ್ರಕರಣದ ಹಿನ್ನಲೆಯಲ್ಲಿ ಪೊಲೀಸರು ನಡೆಸುತ್ತಿರುವ ತನಿಖೆಗೆ ಈಗ ಸಿಡಿಆರ್ (Call Detail Record) ರಿಪೋರ್ಟ್ ಸಿಕ್ಕಿರುವುದು ಮಹತ್ವದ ಸುಳಿವು ಒದಗಿಸಿದೆ.

ಸಿಡಿಆರ್ ರಿಪೋರ್ಟ್‌ನಲ್ಲಿ ಪತ್ತೆಯಾದ ಅಚ್ಚರಿ ಮಾಹಿತಿ ಮೃತ ಅಚಲಾ ಮತ್ತು ಆರೋಪಿ ಮಯಾಂಕ್ ಗೌಡ ನಡುವೆ ಹಲವಾರು ಬಾರಿ ಫೋನ್ ಸಂಭಾಷಣೆ ನಡೆದಿರುವುದು ಸಿಡಿಆರ್ ರಿಪೋರ್ಟ್ ಮೂಲಕ ಹೊರಬಿದ್ದಿದೆ. ರಿಪೋರ್ಟ್ ಕೈಗೆ ಸಿಕ್ಕ ತಕ್ಷಣ ಆರೋಪಿ ಮಯಾಂಕ್ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ.

ವಿಚಾರಣೆಗೆ ನೋಟಿಸ್ ನೀಡಬಹುದು ಎಂಬ ಭಯದಿಂದಲೆ ಮಯಾಂಕ್ ಓಡಿಹೋಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಸದ್ಯ ಹಾಸನ ಹಾಗೂ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದು, ತಲಾಶಿ ಕಾರ್ಯಾಚರಣೆ ಮುಂದುವರಿದಿದೆ.

ವಾಟ್ಸಾಪ್ ಡೇಟಾ ಪ್ರಕರಣಕ್ಕೆ ಕುರುಹು ಕೊಡುವ ಸಾಧ್ಯತೆ ಅಚಲಾ ಬಳಕೆ ಮಾಡುತ್ತಿದ್ದ ಐಫೋನ್ ಮೊಬೈಲ್ ಅನ್ನು ಪೊಲೀಸರು ಎಫ್‌ಎಸ್‌ಎಲ್‌ಗೆ (FSL) ರವಾನಿಸಿದ್ದಾರೆ. ವಾಟ್ಸಾಪ್ ಮತ್ತು ಇತರ ಡೇಟಾಗಳನ್ನು ರಿಟ್ರೀವ್ ಮಾಡುವ ಕಾರ್ಯ ನಡೆಯುತ್ತಿದೆ.

ವಾಟ್ಸಾಪ್ ಚಾಟ್‌ಗಳು ಹೊರಬಂದರೆ ಈ ಪ್ರಕರಣಕ್ಕೆ ಮತ್ತಷ್ಟು ದೃಢವಾದ ಸಾಬೀತುಗಳು ದೊರಕುವ ಸಂಭವವಿದೆ.

ಏನಿದು ಪ್ರಕರಣ? – ಪ್ರಕರಣದ ಹಿನ್ನಲೆ…

ನವೆಂಬರ್ 21 ರಂದು ಹಾಸನ ಮೂಲದ 23 ವರ್ಷದ ಅಚಲಾ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಘಟನೆ ಬಳಿಕ ಅಚಲಾಳ ತಂದೆ ಹರ್ಷ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ತನಿಖೆ ಪ್ರಾರಂಭವಾಗಿತ್ತು.

ಅಚಲಾ ಕುಟುಂಬದ ಗಂಭೀರ ಆರೋಪಗಳು

ದೂರಿನಲ್ಲಿ ಮಯಾಂಕ್ ಗೌಡ ವಿರುದ್ಧ ತೀವ್ರ ಆರೋಪಗಳಿವೆ : ಅಚಲಾಳಿಗೆ ಪ್ರೀತಿಸುತ್ತೇನೆ ಎಂದು ನಂಬಿಕೆ ಮೂಡಿಸಿ ಆಕೆಯನ್ನು ತಮ್ಮತ್ತ ಸೆಳೆದಿದ್ದ.

ಲೈಂಗಿಕವಾಗಿ ಸಹಕರಿಸಲು ಒತ್ತಾಯ ಮಾಡುತ್ತಿದ್ದನು.

ಅಚಲಾ ಒಪ್ಪಿಕೊಳ್ಳದಾಗ ಆಕೆಗೆ ಹಲವು ಬಾರಿ ಹಲ್ಲೆ ಮಾಡಿದ್ದಾನೆ.

ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಕುಟುಂಬದವರ ಪ್ರಕಾರ, ಈ ನಿರಂತರ ಒತ್ತಡ ಮತ್ತು ಮಾನಸಿಕ ಹಿಂಸಾಚಾರವೇ ಅಚಲಾಳ ಆತ್ಮಹತ್ಯೆಗೆ ಕಾರಣ. ದೂರು ದಾಖಲಿಸಿಕೊಂಡ ಪುಟ್ಟೇನಹಳ್ಳಿ ಪೊಲೀಸರು ಮಯಾಂಕ್ ಗೌಡ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆಗೆ ವೇಗ ನೀಡಿದ್ದಾರೆ.

ಸಿಡಿಆರ್ ರಿಪೋರ್ಟ್, ಎಫ್‌ಎಸ್‌ಎಲ್ ವಿಶ್ಲೇಷಣೆ ಮತ್ತು ಸಾಕ್ಷಿದಾರರ ಹೇಳಿಕೆಗಳ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಮಹತ್ವದ ಬೆಳವಣಿಗೆಗಳು ಸಂಭವಿಸುವ ಸಾಧ್ಯತೆ ಇದೆ.

Related posts