ಅಂಕಣ ವಿಶೇಷ 

ನಮ್ಮ ದೇಶದಲ್ಲಿ ಒಂದೇ ಒಂದು ಚೀತಾ ಇಲ್ಲ ಅಂದ್ರೆ ನೀವು ನಂಬುತ್ತೀರಾ .!?

Taluknewsmedia.com

Taluknewsmedia.comಪ್ರಾಣಿಗಳಿಲ್ಲದ ಪರಿಸರವು ಸ್ಮಶಾನಕ್ಕಿಂತ ಭೀಕರವಾಗಿ ಕಾಣುತ್ತೆ-ಪೂರ್ಣಚಂದ್ರ ತೇಜಸ್ವಿ ಅಘನಾಶಿನಿಯ ಸಿಂಗಳೀಕ ಮೊನ್ನೆ ಹಾಗೆ ಮಧ್ಯಾಹ್ನ ಸುದ್ದಿಗಳನ್ನು ಓದುತ್ತ ಇದ್ದವನಿಗೆ ಕಣ್ಣು ಚುಚ್ಚಿ ಓದುವಂತೆ ಮಾಡಿತ್ತು ಆ ಸುದ್ದಿ. ಬಾಗಲಕೋಟೆಯ ತೇರದಾಳ ಪಟ್ಟಣದಲ್ಲಿ ಒಂದು ಕರಿ ಕೋತಿ ಕೋಪಗೊಂಡು ದಾಳಿ ಮಾಡಿ ಸುಮಾರು ಮೂವರಿಗೆ ಕಚ್ಚಿ ಗಾಯಗೊಳಿಸಿತ್ತು. ಸ್ವಲ್ಪ ವಿಚಿತ್ರ ಅಂದುಕೊಂಡು ಈ ಕರಿಕೋತಿ ಹಿಂದೆ ಬಿದ್ದವನಿಗೆ ಒಂದು ಅಳುವಿನ ಅಂಚಿನಲ್ಲಿರುವ ಪ್ರಾಣಿಯ ಬಗ್ಗೆ ಓದುವಂತೆ ಮಾಡಿತ್ತು. ನಮ್ಮ ದೇಶದಲ್ಲಿ ಒಂದೇ ಒಂದು ಚೀತಾ ಇಲ್ಲ ಅಂದ್ರೆ ನೀವು ನಂಬುತ್ತೀರಾ .!? ನೀವು ನಂಬಲೇ ಬೇಕು. ಹೌದು 1948ರಲ್ಲಿ ಕಂಡ ಕೊನೆಯ ಚೀತಾ ಛತ್ತೀಸ್ಗಢ ದಲ್ಲಿ ಸಾವನ್ನಪ್ಪಿತ್ತು..ಇದಾಗ ಬಳಿಕ ಭಾರತದಲ್ಲಿ ಚೀತಾ ಸಂತತಿ ನಶಿಸಿಹೋಗಿದೆ. ನಮಿಬಿಯಾದಿಂದ ಮತ್ತೆ ಚೀತಾಗಳನ್ನು ಕರೆತರೆಯುವ ಪ್ರಯತ್ನ ಮಾಡುತ್ತಿದ್ದು ಅವುಗಳು ಎಷ್ಟರಮಟ್ಟಿಗೆ ಭಾರತದಲ್ಲಿ ನೆಲೆಕೊಳ್ಳಲಿವೆ ಎಂದು ಕಾಡುನೋಡಬೇಕಿದೆ. ಸದ್ಯ ಇದೆ ಸಾಲಿಗೆ ಮತ್ತೊಂದು ಅಳಿವಿನಂಚಿನಲ್ಲಿರುವ…

ಮುಂದೆ ಓದಿ..
ವಿಶೇಷ ಸುದ್ದಿ 

ಅಜಾದ್ ಸ್ವಯಂ ಸೇವಾ ಫೌಂಡೇಶನ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

Taluknewsmedia.com

Taluknewsmedia.comಆನೇಕಲ್ ಮಾ.08 :- ಆಜಾದ್ ಸ್ವಯಂ ಸೇವಾ ಫೌಂಡೇಶನ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಪೊಲೀಸ್ ಮಹಿಳಾ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ ಮತ್ತು ಮಹಿಳಾ ಅಂಚೆ ನೌಕರರಿಗೆ ಮಹಿಳಾ ದಿನಾಚರಣೆಯಂದು ಸನ್ಮಾನ ಮಾಡಲಾಯಿತು. ಇಂದು ಮಹಿಳೆ ಅತ್ಯಂತ ಸದೃಢವಾಗಿ, ಸಮರ್ಥವಾಗಿ, ಪುರುಷನಿಗೆ ಸರಿಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲೂ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಅವರ ಸೇವೆ ಗಣನೀಯ. ಒಂದು ದೇಶ ಅತ್ಯಂತ ಶಿಸ್ತುಬದ್ಧವಾಗಿ, ಒಂದು ವ್ಯವಸ್ಥಿತ ಚೌಕಟ್ಟಿನಲ್ಲಿ ನಡೆಯಲು ಆ ದೇಶದ ಸಂವಿಧಾನ ತುಂಬಾ ಮುಖ್ಯ ಪಾತ್ರ ವಹಿಸುತ್ತದೆ. ಹಾಗೆಯೇ ಒಂದು ಕುಟುಂಬ, ಒಂದು ಸಂಸಾರ ಶಿಸ್ತಿನಿಂದ, ವ್ಯವಸ್ಥಿತವಾಗಿ ಸಾಗಲು ಮಹಿಳೆಯರ ಪಾತ್ರ ತುಂಬಾ ಮುಖ್ಯವಾಗುತ್ತದೆ. ಹೆಣ್ಣು ಸಹನೆಯ ಸಾಕಾರ ಮೂರ್ತಿ. ಹಾಗಾಗಿ ಒಂದು ಕುಟುಂಬದ ಸಮತೋಲನ ಕಾಪಾಡುವ ಶಕ್ತಿ, ಚತುರತೆ ಆಕೆಗಿದೆ. ಎಲ್ಲ ಕ್ಷೇತ್ರಗಳಲ್ಲೂ ಆಕೆ ನಿಪುಣೆ, ಹೆಣ್ಣನ್ನು ಪ್ರಕೃತಿಗೆ ಹೋಲಿಸಲಾಗುತ್ತದೆ…

ಮುಂದೆ ಓದಿ..
ವಿಶೇಷ ಸುದ್ದಿ 

ಅಜಾದ್ ಸ್ವಯಂ ಸೇವಾ ಫೌಂಡೇಶನ್ ವತಿಯಿಂದ ಅಸಂಘಟಿತ ಕಾರ್ಮಿಕರಿಗೆ ಇ-ಶ್ರಮ ಕಾರ್ಡ ಹಾಗೂ ಹೆಲ್ತ್ ಕಾರ್ಡ್ ಅಭಿಯಾನ

Taluknewsmedia.com

Taluknewsmedia.comಆನೇಕಲ್ ಫೆ 06:– ಗೆದ್ದ ಕಾರ್ಪೋರೇಟರ್ ಗಳು ಸಮಯ ವ್ಯರ್ಥ ಮಾಡುತ್ತಿದ್ದರೆ, ನಮ್ಮ್ ಆನೇಕಲ್ ಅಜಾದ್ ಸ್ವಯಂ ಸೇವಾ ಫೌಂಡೇಶನ್ ತಂಡ ಜನರ ಸೇವೆ ಮಾಡಲು ಶ್ರಮವಹಿಸುತ್ತಿದ್ದಾರೆ ಎಂದು ಬೆಜೆಪಿ ಮಂಡಲ ಅಧ್ಯಕ್ಷ ಮುನಿರಾಜು ಗೌಡ ಹೇಳಿದರು. ಮುನೇಶ್ವರ ಸ್ವಾಮಿ ದೇವಸ್ಥಾನ, ಬಹದ್ದೂರ್ ಪುರ ಆಲಯದ ಮುಂಭಾಗದಲ್ಲಿ ಅಜಾದ್ ಸ್ವಯಂ ಸೇವಾ ಫೌಂಡೇಶನ್ ರವರು ಆಯೋಜಿಸಿದ್ದ ಅಸಂಘಟಿತ ಕಾರ್ಮಿಕರಿಗೆ ಇ ಶ್ರಮ್ ಕಾರ್ಡ್ ಹಾಗೂ ಹೆಲ್ತ್ ಕಾರ್ಡ್ ವಿತರಣೆ ಕಾರ್ಯಕ್ರಮಕ್ಕೆ ಭಾನುವಾರ ಬಿಜೆಪಿ ಮಂಡಲ ಅಧ್ಯಕ್ಷ ಮುನಿರಾಜು ಗೌಡ ಮತ್ತು ಜಿಗಣಿ ಪುರಸಭೆ ಸದಸ್ಯರಾದ ವಿನೋದ್ ರವರು ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು. ಈ ವೇಳೆ 200ಕ್ಕೂ ಹೆಚ್ಚಿನ ಅಸಂಘಟಿತ ಕಾರ್ಮಿಕರಿಗೆ ಇ-ಶ್ರಮ್ ಕಾರ್ಡ್ ವಿತರಣೆ ಮಾಡಲಾಯಿತು. ನಂತರ ಮಾತನಾಡಿದ ಬಿಜೆಪಿ ಮಂಡಲ ಅಧ್ಯಕ್ಷ ಮುನಿರಾಜು ಗೌಡರು ಅಜಾದ್ ಸ್ವಯಂ ಸೇವಾ ಫೌಂಡೇಶನ್ ಎಲ್ಲಾ ಯುವಕರು…

ಮುಂದೆ ಓದಿ..
ವಿಶೇಷ ಸುದ್ದಿ 

ಪರಿಸರ ಸ್ವಚ್ಛತೆಗೆ ಪೌರಕಾರ್ಮಿಕರ ಕೊಡುಗೆ ಅನನ್ಯ: ಅಜಾದ್ ಸ್ವಯಂ ಸೇವಾ ಫೌಂಡೇಶನ್

Taluknewsmedia.com

Taluknewsmedia.comಆನೇಕಲ್ : ನಗರದ ಸ್ವಚ್ಛತೆ ಕಾಪಾಡುವಲ್ಲಿ ಪೌರ ಕಾರ್ಮಿಕರ ಸೇವೆ ಅನನ್ಯ. ಅವರ ಅವಿರತ ಶ್ರಮದ ಸೇವೆಗೆ ಪ್ರೋತ್ಸಾಹ ನೀಡುವ ಮೂಲಕ ಅವರ ಕೆಲಸವನ್ನು ಶ್ಲಾಘಿಸಬೇಕು ಎಂದು ಅಜಾದ್ ಸ್ವಯಂ ಸೇವಾ ಫೌಂಡೇಶನ್ ಪದಾಧಿಕಾರಿಗಳಾದ ಆನೇಕಲ್ ರವಿ ರವರು ಅಭಿಪ್ರಾಯಪಟ್ಟರು. ಅಜಾದ್ ಸ್ವಯಂ ಸೇವಾ ಫೌಂಡೇಶನ್ ನ ವತಿಯಿಂದ ಜನವರಿ 26ರ ಬುಧವಾರ ಆನೇಕಲ್ ಪಟ್ಟಣದ ಶ್ರೀ ತಿಮ್ಮರಾಯಸ್ವಾಮಿ ಪ್ರೌಢಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ 73ನೇ ಗಣರಾಜ್ಯೋತ್ಸವದ ಹಿನ್ನಲೆಯಲ್ಲಿ ಪೌರಕಾರ್ಮಿಕರಿಗೆ ಸನ್ಮಾನ ಮಾಡುವ ಮೂಲಕ ವಿಭಿನ್ನವಾಗಿ ಬುಧವಾರ ಆಚರಣೆ ಮಾಡಲಾಯಿತು. ನಿತ್ಯ ನಗರ ಸ್ವಚ್ಚವಾಗಿರಬೇಕೆಂದರೇ ಪೌರ ಕಾರ್ಮಿಕರ ಮನಸ್ಸು ಕೂಡ ಸಂತೋಷವಾಗಿರಬೇಕಾಗುತ್ತದೆ. ಅಂತಹ ವಾತಾವರಣ ಕಲ್ಪಿಸುವ ಜವಬ್ದಾರಿ ನಮಗೂ ಕೂಡ ಇದೆ. ಒಂದೊಮ್ಮೆ ಸ್ವಚ್ಚತೆಯೇ ನಡೆಯದಿದ್ದಲ್ಲಿ ನಗರ ಹೇಗಿರಬಹುದು ಎಂದು ಕಲ್ಪನೆಯೂ ಮಾಡಲು ಸಾಧ್ಯವಿಲ್ಲ ಎಂದು ಆನೇಕಲ್ ನರೇಶ್ ರವರು ಹೇಳಿದರು. ಸ್ವಚ್ಚತೆ ಇರುವ ಕಡೆ ದೇವರು ಇರುತ್ತಾನೆ.…

ಮುಂದೆ ಓದಿ..
ಆಧ್ಯಾತ್ಮ ವಿಶೇಷ ಸುದ್ದಿ 

ಹಬ್ಬ ಒಂದು, ಆಚರಣೆ ಹಲವು; ಮಕರ ಸಂಕ್ರಾಂತಿಯ ವಿಶೇಷತೆ ಹಾಗೂ ಸಂಕ್ರಾಂತಿ ಹಬ್ಬದ ಹಿನ್ನೆಲೆ!

Taluknewsmedia.com

Taluknewsmedia.comಭಾರತೀಯ ಸಮಾಜದಲ್ಲಿ ಪ್ರತಿ ದಿನವೂ ಹಬ್ಬವೇ ! ಪ್ರತಿಯೊಂದು ಹಬ್ಬಕ್ಕೂ ವಿಶೇಷ ಅರ್ಥವಿದೆ ಮತ್ತು ಪ್ರತೀ ಹಬ್ಬವೂ ಪ್ರಕೃತಿಗೆ ಜೋಡಿಕೊಂಡಿದೆ. ಉದಾಹರಣೆಗೆ ಹಿಂದುಗಳಿಗೆ ಹೊಸ ವರುಷ ಜನವರಿ 1 ಅಲ್ಲ- ಬದಲಾಗಿ ನಮ್ಮ ಪ್ರಕೃತಿಯಲ್ಲಿ ಹೊಸ ಚೈತನ್ಯ-ಚಿಗುರು ತರುವ ಯುಗಾದಿ ಹಬ್ಬ. ನಮ್ಮ ಹೊಸ ವರುಷ ಬರಿಯ ಕ್ಯಾಲೆಂಡರ್ ಬದಲಾಯಿಸುವ ದಿನವಲ್ಲ- ಅದು ಯಗದ ಆದಿ. ಹಿರಿಯರು ನಮ್ಮ ಹಬ್ಬಗಳಿಗೆ ಎಂಥಹಾ ಅರ್ಥಪೂರ್ಣ ಹೆಸರು ಇಟ್ಟಿದ್ದಾರೆ. ಹಾಗೆಯೇ ಸಂಕ್ರಾಂತಿ (ಸಂಕ್ರಮಣ) = ಸಮ್ಯಕ್ ಕ್ರಾಂತಿ = ಸರಿಯಾದ ದಿಕ್ಕಿನಲ್ಲಿ ಕ್ರಮಣ, ಚಲಿಸುವಿಕೆ ಮಕರ ಸಂಕ್ರಮಣ ಸೂರ್ಯ ಮಕರ ರಾಶಿ ಪ್ರವೇಶಿಸುವ ವಿಶಿಷ್ಟ ದಿನ. ಸಂಕ್ರಾಂತಿ ಸೂರ್ಯನ ಪಥದ ಬದಲಾವಣೆಯ ಕಾಲ. 12 ರಾಶಿಗಳ ಕಾರಣದಿಂದ ಒಂದು ಸೌರವರ್ಷದಲ್ಲಿ 12 ಸೌರಮಾಸಗಳು. ಅವಕ್ಕೆ ಆಯಾ ರಾಶಿಗಳದ್ದೇ ಹೆಸರು. ಈ ರೀತಿ ಸೂರ್ಯನು ಒಂದು ರಾಶಿಯ ವ್ಯಾಪ್ತಿಯಿಂದ ಮತ್ತೊಂದು ರಾಶಿಗೆ…

ಮುಂದೆ ಓದಿ..
ಆಧ್ಯಾತ್ಮ ವಿಶೇಷ ಸುದ್ದಿ 

ಏಕಾದಶಿಗಳಲ್ಲೇ ವಿಶೇಷ ಈ ವೈಕುಂಠ ಏಕಾದಶಿ

Taluknewsmedia.com

Taluknewsmedia.comಆನೇಕಲ್, ಜ:13:- ‘ಸಂಕಟ ಬಂದಾಗ ವೆಂಕಟರಮಣ’ ಎನ್ನುವ ಗಾದೆ ಕನ್ನಡಬಲ್ಲವರಿಗೆ ಚಿರಪರಿಚಿತವಾಗಿಯೇ ಇದೆ. ಈ ಬಾರಿ ವೈಕುಂಠ ಏಕಾದಶಿ ಹೊಸ ವರ್ಷದ ಆರಂಭವೇ ಬಂದಿದೆ. ವರ್ಷವಿಡೀ ಸುಭೀಕ್ಷವಾಗಿರಲಿ, ಆರೋಗ್ಯ, ಐಶ್ವರ್ಯ ಎಲ್ಲವನ್ನೂ ಕೊಟ್ಟು ಕರುಣಿಸು ದೇವಾ ಎಂದು ಜನ ಬೇಡಿಕೊಳ್ಳುವುದು ವೈಕುಂಠ ಏಕಾದಶಿ ವಿಶೇಷ. ವೈಕುಂಠ ಏಕಾದಶಿಯ ಪ್ರಯುಕ್ತ ಶ್ರೀ ಚನ್ನಕೇಶ್ವರ ಸ್ವಾಮಿಯ ವೈಕುಂಠ ವೈಭವವನ್ನು ಆನೇಕಲ್ ನಗರದ ತಾಲ್ಲೂಕ್ ಕಚೇರಿಯ ಹತ್ತಿರ ವಿರುವ ಶ್ರೀ ಚನ್ನಕೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯು ಸರಳವಾಗಿ ಆಚರಿಸಲಾಯಿತು.ಇಂದಿನ ಎಲ್ಲೆಡೆ ವೆಂಕಟೇಶ್ವರ ಹಾಗೂ ವಿವಿಧ ದೇವಾಲಯಗಳಲ್ಲಿ ಅದ್ದೂರಿ ಪೂಜೆ ಪುನಸ್ಕಾರಗಳನ್ನು ನಡೆಯುತ್ತಿರುವುದು. ಆನೇಕಲ್ ಪಟ್ಟಣದ ಶ್ರೀ ಚನ್ನಕೇಶ್ವರ ದೇವಾಲಯದಲ್ಲಿ ಕೂಡ ನೋಡುಲು ರಂಗನಾಥ ಅವತಾರ ಮೂರ್ತಿಯನ್ನು ನಿರ್ಮಾಣ ಮಾಡುವ ಮೂಲಕ ದೇವಾಲಯದಲ್ಲಿ ಆಗಮಿಸುವಂತಹ ಭಕ್ತರಿಗೆ ಬೆಳಿಗ್ಗೆ ಯಿಂದ ಕೂಡ ಪೂಜಾ ಪುನಸ್ಕಾರಗಳ ಜೊತೆಗೆ ವಿಶೇಷವಾಗಿ ಈ ಒಂದು ರಂಗನಾಥ ಅವತಾರ…

ಮುಂದೆ ಓದಿ..
ವಿಡಿಯೋ ವಿಶೇಷ ಸುದ್ದಿ 

ಮಕ್ಕಳ ಸಾಹಿತ್ಯ ಕುರಿತಂತೆ ಶಿವಣ್ಣ ಬೆಳವಾಡಿ ಅವರ “ಅರಳುವ ಮೊಗ್ಗುಗಳು” ಕಥಾಸಂಕಲನದ ಕುರಿತಂತೆ ಮಾತು ಕಥೆ… ಡಾ. ಶಿವಣ್ಣ ಬೆಳವಾಡಿ ಅವರೊಂದಿಗೆ …

Taluknewsmedia.com

Taluknewsmedia.com ಸಾಹಿತ್ಯ ಸಂಜೆ … ಡಾ. ಶಿವಣ್ಣ ಬೆಳವಾಡಿ ಅವರೊಂದಿಗೆ … ಇದೇ ಭಾನುವಾರ ಸಂಜೆ 7 ಗಂಟೆಗೆ … ಮಕ್ಕಳ ಸಾಹಿತ್ಯ ಕುರಿತಂತೆ ಶಿವಣ್ಣ ಬೆಳವಾಡಿ ಅವರ “ಅರಳುವ ಮೊಗ್ಗುಗಳು” ಕಥಾಸಂಕಲನದ ಕುರಿತಂತೆ ಮಾತು ಕಥೆ… ಗೂಗಲ್ ಮೀಟ್ ಲಿಂಕ್ http://meet.google.com/gzt-jqkx-efz taluknews.com ವೆಬ್ಸೈಟ್ ನಲ್ಲಿ ನೇರ ಪ್ರಸಾರ… ಮಕ್ಕಳ ಮನಸ್ಸಿನ ಎಲ್ಲರಿಗೂ ಸ್ವಾಗತ… LOCAL ONLINE- PRINT- BROADCAST – TVNEWStaluknewsmedia.comtaluknews.comtalukpathrike.comhttp://taluknews.tvhttp://ivoter.tvtalukinformation.comcampaignkarnataka.com taluknewsmedia.com : Tumkur : Reporter Varun G J 9663967207 bit.ly/tumkurtaluknews bit.ly/Tumkur bit.ly/Yournumber problem.talukpathrike.com taluknews.com taluknewsmedia.com : Tumkur : Reporter Praveenkumar N 9480750771 bit.ly/tumkurtaluknews bit.ly/Tumkur bit.ly/Yournumber problem.talukpathrike.com taluknews.com

ಮುಂದೆ ಓದಿ..
ವಿಶೇಷ 

ಬ್ರಾಕಿಸ್ಟೆಲ್ಮಾ ತುಮಕೂರೆನ್ಸ್ ಎಂಬ ಹೊಸ ಸಸ್ಯ ಪ್ರಭೇದ ದೇವರಾಯನದುರ್ಗ ಅರಣ್ಯದಲ್ಲಿ ಪತ್ತೆ

Taluknewsmedia.com

Taluknewsmedia.comತುಮಕೂರು : ತಾಲ್ಲೂಕಿನ ದೇವರಾಯನದುರ್ಗ ಸಂರಕ್ಷಿತ ಅರಣ್ಯದಲ್ಲಿ ಪ್ರಥಮ ಬಾರಿಗೆ ಬೆಟ್ಟಗಳ ಇಳಿಜಾರಿನ ಒಣ ನೆಲದಲ್ಲಿ ಬೆಳೆಯುವ ಹೊಸ ಪ್ರಭೇದ ಸಸ್ಯವೊಂದು ಪತ್ತೆಯಾಗಿದೆ. ಈ ಸಸ್ಯಕ್ಕೆ ತುಮಕೂರು ಜಿಲ್ಲೆಯ ಸ್ಮರಣಾರ್ಥವಾಗಿ ಬ್ರಾಕಿಸ್ಟೆಲ್ಮಾ ತುಮಕೂರೆನ್ಸ್ (Brachystelma tumakurense) ಎಂದು ನಾಮಕರಣ ಮಾಡಲಾಗಿದೆ ಎಂದು ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಅಧ್ಯಕ್ಷ ಬಿ.ವಿ.ಗುಂಡಪ್ಪ ತಿಳಿಸಿದ್ದಾರೆ. ದೇವರಾಯನದುರ್ಗದ ಎಲೆ ಉದುರುವ ಕಾಡಿನಲ್ಲಿ ಕೆಲವೇ ಸಂಖ್ಯೆಯ ಸಸ್ಯಗಳನ್ನು 2017ರ ಜುಲೈ 30 ರಂದು ಕ್ಷೇತ್ರ ಅಧ್ಯಯನದ ಸಂದರ್ಭದಲ್ಲಿ ಪತ್ತೆ ಹಚ್ಚಲಾಯಿತು. ಈ ಸಸ್ಯವು ಬಾಧೆ ಹುಲ್ಲಿನ (ಸಿಂಬೋಪೊಗಾನ್) ಮಧ್ಯೆ ಬೆಳೆಯುವ ಹುಲ್ಲಿನ ಜಾತಿಯ ಸಣ್ಣ ಸಸ್ಯವಾಗಿದ್ದು, ಸುಮಾರು ಒಂದು ಮೀಟರ್ ಉದ್ದ ಬೆಳೆಯುತ್ತದೆ. ಕಾಂಡವು ದುಂಡಾಗಿದ್ದು ದುರ್ಬಲವಾಗಿರುತ್ತದೆ, ನೇರ ಬೆಳೆಯುವ ಈ ಸಸ್ಯವು ಕೆಲವೊಮ್ಮೆ ಕವಲೊಡೆಯುತ್ತದೆ, ಎಲೆಗಳು ಮೊನಚಾಗಿದ್ದು ಜೋತಾಡುತ್ತವೆ. ಮಾರ್ಪಾಡಾದ ಬೇರು ಗೆಡ್ಡೆಯ ರೂಪದಲ್ಲಿ ಭೂಮಿಯೊಳಗಿದ್ದು ಜೂನ್-ಜುಲೈ ತಿಂಗಳಿನಲ್ಲಿ ಮುಂಗಾರು ಮಳೆ…

ಮುಂದೆ ಓದಿ..
ವಿಶೇಷ 

ಬೀದರ್ ನ ಬೆಡಗಿ ಅರುಣಾ ಪಾಟೀಲ ಮಿಸಸ್ ಕ್ವೀನ್ ಆಫ್ ಇಂಡಿಯಾ

Taluknewsmedia.com

Taluknewsmedia.comಬೀದರ : ಮಿಸಸ್ ಕ್ವೀನ್ ಆಫ್ ಇಂಡಿಯಾ ಪ್ರಶಸ್ತಿ ಗೆದ್ದ ಬೀದರ್‍ನ ಬೆಡಗಿ ಅರುಣಾ ಪಾಟೀಲ ಅವರಿಗೆ ಗ್ಲೊಬಲ್ ಪ್ಲೆಜೆಂಟ್ಸ್ ಸಿಇಒ ಶ್ವೇತಾ ಅವರು ಕಿರೀಟ ತೊಡಿಸಿ ಪ್ರಶಸ್ತಿ ಪ್ರದಾನ ಮಾಡಿದರು. ಬೀದರ್ ಬೆಡಗಿ ‘ಮಿಸಸ್ ಕ್ವೀನ್ ಆಫ್ ಇಂಡಿಯಾ’ ಪ್ರಶಸ್ತಿ ಮುಡಿಗೇರಿಸಿಕೋಂಡ ಬೆಡಗಿಯಾಗಿದ್ದಾರೆ.ಗ್ಲೊಬಲ್ ಪ್ಲೆಜೆಂಟ್ಸ್ ನವದೆಹಲಿಯಲ್ಲಿ ಸಂಘಟಿಸಿದ್ದ ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳ 29 ಸುಂದರಿಯರನ್ನು ಹಿಂದಿಕ್ಕಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.ಮಿಸಸ್ ಕ್ವೀನ್ ಆಫ್ ಇಂಡಿಯಾ ಸ್ಪರ್ಧೆಯು ಸಾಂಪ್ರದಾಯಿಕ ಸೌಂದರ್ಯ, ಬುದ್ಧವಂತಿಕೆ ಹಾಗೂ ಸೂಕ್ಷ್ಮತೆ ಆಧಾರಿತ ಸ್ಪರ್ಧೆಯಾಗಿದೆ. ಮಹಿಳೆ ಸಮುದಾಯ, ದೇಶ ಹಾಗೂ ಸಮಕಾಲೀನ ಜೀವನಕ್ಕೆ ನೀಡಿದ ಕೊಡುಗೆಯನ್ನೂ ಪರಿಗಣಿಸಲಾಗುತ್ತದೆ.ಜಗತ್ತಿಗೆ ಪ್ರೇರಣೆ ನೀಡುವ ಪರಿಪೂರ್ಣ ಮಹಿಳೆಯನ್ನು ಗುರುತಿಸುವುದು ಸ್ಪರ್ಧೆಯ ಉದ್ದೇಶವಾಗಿದೆ. ಸ್ಪರ್ಧೆಯ ವಿಜೇತರು ದೇಶ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಅರ್ಹತೆ ಪಡೆಯುತ್ತಾರೆ.ನವದೆಹಲಿಯ ದಿ ಸೂರ್ಯಾ ಹೊಟೇಲ್‍ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಅರುಣಾ ಅವರಿಗೆ…

ಮುಂದೆ ಓದಿ..
ವಿಶೇಷ 

ಸುದ್ದಿಯ ಮೂಲಗಳು,……

Taluknewsmedia.com

Taluknewsmedia.comಸುದ್ದಿಯ ಮೂಲಗಳು,…… ಜನರನ್ನು ರಂಜಿಸಲು ಆ ಮೂಲಗಳ ಮೂಲಕವೇ ವಂಚಿಸುತ್ತಿರುವ ಮಾಧ್ಯಮಗಳು,ಜನರ ಚಿಂತನಾ ಶೈಲಿಯ ಮೇಲೆ ದುಷ್ಪರಿಣಾಮ ಬೀರುತ್ತಿರುವ ಕೆಟ್ಟ ಸುದ್ದಿಗಳ ಪ್ರಾಮುಖ್ಯತೆ……. ನಿನ್ನೆ ನಡೆದ ಒಂದು ಘಟನೆಯನ್ನು ಇದಕ್ಕೆ ಉದಾಹರಣೆ ನೀಡುತ್ತಿದ್ದೇನೆ. ಎಂದಿನಂತೆ ನಿನ್ನೆ ಬೆಳಗಿನ ದಿನ ಪತ್ರಿಕೆಯನ್ನು ಸುಮಾರು 6/30 ರಲ್ಲಿ ಓದಿದೆ. ಕೊಲೆ ಆರೋಪದಲ್ಲಿ ಸಿಬಿಐ ಬಂಧನದ ಭೀತಿ ಎದುರಿಸುತ್ತಿರುವ ಮಾಜಿ ಸಚಿವ ಕಾಂಗ್ರೆಸ್ ನ ವಿನಯ್ ಕುಲಕರ್ಣಿ, ಮೈಸೂರು ಭಾಗದ ಒಬ್ಬ ಪ್ರಭಾವಿ ವ್ಯಕ್ತಿಯ ಮೂಲಕ ದೆಹಲಿಯಲ್ಲಿ ಬೀಡು ಬಿಟ್ಟು ಬಿಜೆಪಿ ಸೇರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಬೆಳಗಿನ 9 ಗಂಟೆಯ ಸಮಯದಲ್ಲಿ ಒಂದು ಖಾಸಗಿ ಟಿವಿ ವಾಹಿನಿ ಇಡೀ ರಾಜ್ಯವೇ ಆಶ್ಚರ್ಯ ಪಡುವ ಬಹುದೊಡ್ಡ ಬ್ರೇಕಿಂಗ್ ಸುದ್ದಿ ನಮ್ಮ ಚಾನಲ್ ನೀಡುತ್ತಿದೆ. ಯಾರೂ ಊಹಿಸದ ಬೆಳವಣಿಗೆ ಎಂದು ಸ್ವಲ್ಪ ಸಮಯ ಸಂಗೀತದ ‌ಬಿಲ್ಡಪ್ ಕೊಟ್ಟು ಕೊನೆಗೆ ಪತ್ರಿಕೆಯಲ್ಲಿ…

ಮುಂದೆ ಓದಿ..