ಸುದ್ದಿ 

ಜನಾರ್ದನ ರೆಡ್ಡಿ ಪುತ್ರನ ವಿರುದ್ಧ ₹100 ಕೋಟಿಯ ಆಸ್ತಿ ಕಬಳಿಕೆ ಆರೋಪ – ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

Taluknewsmedia.com

ಜನಾರ್ದನ ರೆಡ್ಡಿ ಪುತ್ರನ ವಿರುದ್ಧ ₹100 ಕೋಟಿಯ ಆಸ್ತಿ ಕಬಳಿಕೆ ಆರೋಪ – ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಬಳ್ಳಾರಿ ನಗರದ ಹೃದಯಭಾಗದಲ್ಲಿರುವ ₹100 ಕೋಟಿ ಮೌಲ್ಯದ ಜಾಗ ಕಬಳಿಕೆಗೆ ಯತ್ನಿಸಿದ ಆರೋಪ ಎದುರಿಸುತ್ತಿರುವ ಶಾಸಕ ಗಾಲಿ ಜನಾರ್ದನ ರೆಡ್ಡಿಯ ಪುತ್ರ ಜಿ. ಕಿರೀಟಿ ರೆಡ್ಡಿ ಹಾಗೂ ಅವರ ಸಹವರ್ತಿಗಳ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಪರಿಶೀಲಿಸಿದ ಹೈಕೋರ್ಟ್, ಈ ಕುರಿತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಅಸ್ತಿಯ ಮೂಲ ಮಾಲೀಕರಾದ ಎಂ. ಗೋವರ್ಧನ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠದಲ್ಲಿ ಧಾರವಾಡದಲ್ಲಿ ನಡೆಯಿತು. ವಾದವನ್ನು ಆಲಿಸಿದ ನ್ಯಾಯಾಲಯ, ಅರ್ಜಿದಾರರ ಮೇಲೆ ಜೀವಭೀತಿ ಇರುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸ್ ರಕ್ಷಣೆಯನ್ನು ಒದಗಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿತು. ವಿಚಾರಣೆಯನ್ನು ಮುಂದಿನ 15ರ ತನಕ ಮುಂದೂಡಲಾಗಿದೆ.

ಹೈಕೋರ್ಟ್ ವಕೀಲ ಪಿ. ಪ್ರಸನ್ನಕುಮಾರ್ ತಿಳಿಸಿದಂತೆ,
2005ರಲ್ಲಿ ಜಿಪಿಎ ಹಾಗೂ ಕರಾರು ಪತ್ರಗಳನ್ನು ತಿರುಚಿ, ಕಿರೀಟಿ ರೆಡ್ಡಿಯ ಸಹವರ್ತಿಗಳು ಜಾಗವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ.
2008ರಲ್ಲಿ ಜಾಗವನ್ನು ಕೃತಕ ದಾಖಲೆಗಳ ಆಧಾರದ ಮೇಲೆ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಆರೋಪ. ಹೆಚ್ಚುವರಿಯಾಗಿ, ಸುಳ್ಳು ಹಕ್ಕು ದಾವೆ ಹಾಕಿ ಪ್ರತಿಬಂಧಕ ಆದೇಶ ಪಡೆದು, ಅರ್ಜಿದಾರರನ್ನು ಕಾನೂನು ಬಲೆಗೆ ಸಿಲುಕಿಸಿ ಆಸ್ತಿ ಪಡೆಯುವ ಕಾರ್ಯಾಚರಣೆ ನಡೆಸಿದ್ದಾರೆ ಎಂದು ದೂರಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೌಲ್‌ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ, ಆದರೆ ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣದ ಕಾರಣ, ಪ್ರಕರಣವನ್ನು ಉನ್ನತ ತನಿಖಾ ಸಂಸ್ಥೆಗೆ ವರ್ಗಾಯಿಸಲು ಅರ್ಜಿದಾರರು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

Related posts