ಆಮರಗೋಳ ಮೆಟ್ರೋ ಹಿಂದುಗಡೆ ಗಾಂಜಾ ಸೇವಿಸುತ್ತಿದ್ದ ಆರೋಪಿತನ ಬಂಧನ
ಹುಬ್ಬಳ್ಳಿ, 17 ಜೂನ್ 2025: ಈ ದಿನದ ಮುಂಜಾನೆ ಸುಮಾರು 10:30ರ ಸುಮಾರಿಗೆ ಹುಬ್ಬಳ್ಳಿ ನಗರದ ಆಮರಗೋಳ ಮೆಟ್ರೋ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದ ಮೇಲೆ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತನನ್ನು ಅಮೀನ್ (ವಯಸ್ಸು: 29), ತಂದೆ: ಶಹಜಾನ್ ನಾಲಬಂದ, ಜಾತಿ: ಮುಸ್ಲಿಂ, ಉದ್ಯೋಗ: ಖಾಸಗಿ ಕೆಲಸ, ವಿಳಾಸ: ಮನೆ ಸಂಖ್ಯೆ 105, 3ನೇ ಕ್ರಾಸ್, ನಂದೀಶ್ವರ ನಗರ, ನವನಗರ, ಹುಬ್ಬಳ್ಳಿ ಎಂದು ಗುರುತಿಸಲಾಗಿದೆ.ಪೊಲೀಸರ ಪ್ರಾಥಮಿಕ ತನಿಖೆಯಂತೆ, ಆರೋಪಿತನು ನಿಷೇಧಿತ ಮಾಧಕ ಪದಾರ್ಥವಾದ ಗಾಂಜಾ ಸೇವಿಸುತ್ತಿದ್ದ ವೇಳೆ ಸಾರ್ವಜನಿಕ ಸ್ಥಳದಲ್ಲಿ ಸಿಕ್ಕಿಬಿದ್ದಿದ್ದು, ಮದ್ಯನಿಯಂತ್ರಣ ಮತ್ತು ಮಾದಕ ಪದಾರ್ಥಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಪೋಲಿಸ ಠಾಣೆಯಲ್ಲಿ ಸೂಕ್ತ ಕಲಂರಡಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
ವರದಿ : ವಿಜಯಕುಮಾರ ಪ್ರಹ್ಲಾದ ಈಳಗೇರ ಗಾಮನಗಟ್ಟಿ, ಹುಬ್ಬಳ್ಳಿ ತಾಲೂಕ್ ನ್ಯೂಸ್9886063123

