ನಾಗಮಂಗಲಿಗರು ಶುದ್ಧ ಕನ್ನಡ ಮಾತನಾಡುವ ಜನ : ವ.ನಂ.ಶಿವರಾಮು
Taluknewsmedia.comನಾಗಮಂಗಲಿಗರು ಶುದ್ಧ ಕನ್ನಡ ಮಾತನಾಡುವ ಜನ : ವ.ನಂ.ಶಿವರಾಮು ನಾಗಮಂಗಲ : ಪ್ರಪಂಚದಲ್ಲಿ ಎಲ್ಲಾದರು ಕನ್ನಡ ಕೇಳಿದರೆ ಅದು ನಾಗಮಂಗಲದ ಜನರ ಧ್ವನಿ. ಶುದ್ಧ ಕನ್ನಡ ನಾಗಮಂಗಲ ಜನರಿಂದ ಮಾತ್ರ ಸಾಧ್ಯ ಎಂದು ಮೈಸೂರು ಇಪ್ರೊ ಜಾನಪದ ಮಹಾ ವಿದ್ಯಾಲಯದ ಶೈಕ್ಷಣಿಕ ನಿರ್ದೇಶಕ ಪ್ರೊ.ವ.ನಂ.ಶಿವರಾಮು ಅಭಿಪ್ರಾಯ ಪಟ್ಟರು. ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಾಲಯದ ಆವರಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ೭೦ ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದಿನದ ಮಹತ್ವ ಕುರಿತು ಪ್ರಧಾನ ಉಪನ್ಯಾಸ ನೀಡಿ ಮಾತನಾಡಿದರು. ಕನ್ನಡ ಭಾಷೆ ಒಂದು ಸಂಸ್ಕೃತಿ. ಕನ್ನಡತನದ ಸೊಗಡು ಸಮಾಜದಲ್ಲಿ ಆವರಿಸಿದ್ದಾಗ ಸಂಬಂಧಗಳಲ್ಲಿ ಗಟ್ಟಿತನ ಇತ್ತು. ಆಂಟಿ ಅಂಕಲ್ ಸಂಸ್ಕೃತಿ ಬಂದಮೇಲೆ ಕನ್ನಡ ಸೊರಗಿ ಅನೈತಿಕ ಸಂಬಂಧ ಅನಾಚಾರ ಅತ್ಯಾಚಾರ ಹೆಚ್ಚಾಗಲು ಕಾರಣವಾಯಿತು ಎಂದು ಬೇಸರ ವ್ಯಕ್ತಪಡಿಸಿದರು. ಮಹಿಳೆಯರು ಮನಸ್ಸು ಮಾಡಿದರೆ ಮನೆ ಪೂರಾ ಕನ್ನಡವಾಗುತ್ತದೆ, ಕನ್ನಡ ಉಳಿಯುತ್ತದೆ. ಕನ್ನಡ…
ಮುಂದೆ ಓದಿ..
