ಸುದ್ದಿ 

ಆನ್‌ಲೈನ್ ಸಿಮೆಂಟ್ ಖರೀದಿಯಲ್ಲಿ ₹1.24 ಲಕ್ಷ ಮೋಸ

Taluknewsmedia.com

ನಗರದ ಮುರುಳಿ.ಜಿ ಎಂಬುವವರು ಆನ್‌ಲೈನ್ ಮೂಲಕ ಸಿಮೆಂಟ್ ಖರೀದಿಸಲು ಯತ್ನಿಸುತ್ತಿದ್ದ ವೇಳೆ ಉದ್ದೇಶಿತ ಮೋಸದ ಬಲಿಯಾದ ಘಟನೆ ವರದಿಯಾಗಿದೆ. ಕೇವಲ ಸಿಮೆಂಟ್ ಖರೀದಿಸೋಣ ಎಂಬ ಉದ್ದೇಶದಿಂದ ಆರಂಭವಾದ ಹುಡುಕಾಟ, ಲಕ್ಷಾಂತರ ರೂಪಾಯಿ ನಷ್ಟಕ್ಕೆ ಕಾರಣವಾಯಿತು. ಮರುಳಿ.ಜಿ ಅವರು ತಮ್ಮ ಕೆನರಾ ಬ್ಯಾಂಕ್ ಖಾತೆ ಮೂಲಕ ವ್ಯವಹಾರ ಮಾಡುತ್ತಿದ್ದು, ದಿನಾಂಕ 01 ಜೂನ್ 2025 ರಂದು ಇಂಟರ್ನೆಟ್‌ನಲ್ಲಿ “53 ಗ್ರೇಡ್ ಸಿಮೆಂಟ್” ಕುರಿತು ಹುಡುಕುತ್ತಿದ್ದಾಗ, ಚೆಟ್ಟಿನಾಡ್ ಸಿಮೆಂಟ್ ಕಂಪನಿಯ ಪ್ರತಿನಿಧಿಗಳೆಂದು ಪರಿಚಯಿಸಿಕೊಂಡ ಅಭಿಷೇಕ್ ಕುಮಾರ್ ಮಂಡಲ್ ಎಂಬಾತನಿಂದ ಕರೆ ಬಂದಿದೆ. ಆತನು 7739604213, 7739628217, 7294003028 ನಂಬರ್‌ಗಳಿಂದ ಸಂಪರ್ಕಿಸಿ, ಸಿಮೆಂಟ್ ಸರಬರಾಜು ಮಾಡುವ ಭರವಸೆ ನೀಡಿದನು.ಮಹತ್ವದ ವಿವರವೆಂದರೆ, ವಂಚಕರು ಮುರುಳಿಗೆ ಬಿಲ್ (Invoice) ಪ್ರತಿಯನ್ನು ಕಳುಹಿಸಿ ವಿಶ್ವಾಸ ಮೂಡಿಸಿದರು. ಇದನ್ನು ನಂಬಿದ ಮುರುಳಿ ಅವರು ದಿನಾಂಕ 13 ಜೂನ್ 2025 ರಂದು ₹1,24,800 ಮೊತ್ತವನ್ನು Utkarsha Small Finance Bank ಖಾತೆ ಸಂಖ್ಯೆ: 1687019229046417 ಗೆ ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿದರು.ಹಣ ವರ್ಗಾವಣೆಯಾದ ಬಳಿಕ ಯಾವುದೇ ಸರಕು ದೊರಕದೆ, ಕರೆಗಳನ್ನು ಸ್ವೀಕರಿಸದ ಹಿನ್ನಲೆಯಲ್ಲಿ ದೂರುದಾರರು ತಕ್ಷಣವೇ ಸೈಬರ್ ಕ್ರೈಂ ಸಹಾಯವಾಣಿ 1930 ಗೆ ಕರೆ ಮಾಡಿ ದೂರು ನೀಡಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಸಂಖ್ಯೆ: MHA & NCRP-31606250071291 ನ್ನು ಆನ್‌ಲೈನ್‌ನಲ್ಲಿ ದಾಖಲಿಸಲಾಗಿದೆ.ಸೈಬರ್ ಕ್ರೈಂ ಅಧಿಕಾರಿಗಳು ಪ್ರಕರಣದ ತನಿಖೆ ಮುಂದುವರಿಸಿದ್ದು, ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Related posts