ಟಿಕ್‌ಟಾಕ್ ಮಾಲ ಟ್ರೇಡಿಂಗ್ ಹೂಡಿಕೆ ವಂಚನೆ: ಮಹಿಳೆಯಿಂದ ಲಕ್ಷಾಂತರ ರೂಪಾಯಿ ವಂಚನೆ
ಬೆಂಗಳೂರು, ಜೂನ್ 20: ಸಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಆರಂಭವಾದ ಆಫರ್ ಒಂದು ಮಹಿಳೆಯ ಜೀವನದಲ್ಲಿ ತೊಂದರೆ ತಂದಿದ್ದು, ಸುಮಾರು ಲಕ್ಷಕ್ಕೂ ಹೆಚ್ಚು ಮೊತ್ತದ ಹಣವನ್ನು ಸೈಬರ್ ವಂಚಕರು ಮೋಸದಿಂದ ವಶಪಡಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಗಿರಿ ಯವರಿಗೆ ಫೇಸ್‌ಬುಕ್‌ನಲ್ಲಿ ಇಮ್ಮಾ ವಿಲ್ಸನ್ ಎಂಬ ಮಹಿಳೆ ದಿನಾಂಕ 31.10.2024 ರಂದು ಸಂಪರ್ಕಿಸಿ, ಟಿಕ್‌ಟಾಕ್ ಮಾಲ್ ಟ್ರೇಡಿಂಗ್ ಕುರಿತು ಮಾಹಿತಿ ನೀಡಿ, ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ದೊರೆಯುತ್ತದೆ ಎಂದು ನಂಬಿಸಿದ್ದಳು. ಹಣವಿಲ್ಲದ ಕಾರಣದಿಂದ ಗಿರಿ ಯವರು ಹೂಡಿಕೆಗೆ ನಿರಾಕರಣೆ ನೀಡಿದಾಗ, ಇಮ್ಮಾ ವಿಲ್ಸನ್ ತಾವೇ ಗಿರಿಯವರ ಹೆಸರಿನಲ್ಲಿ USD 5,000 (ಅಂದರೆ ₹4.15 ಲಕ್ಷದಿಂದ ಅಧಿಕ) ಹೂಡಿಕೆ ಮಾಡಿರುವಂತೆ ತೋರಿಸಿ, ಅದರಿಂದ USD 25,000 ಲಾಭವಾಯಿತೆಂದು ಸುಳ್ಳು ಭರವಸೆ ನೀಡಿದ್ದಾಳೆ.ಈ ಲಾಭದ ಪ್ರಭಾವದಿಂದ ಪ್ರಭಾವಿತರಾದ ಗಿರಿ, ತಮ್ಮ ಐಸಿಐಸಿಐ ಬ್ಯಾಂಕ್ ಖಾತೆ ಹಾಗೂ ಯುಕೋ ಬ್ಯಾಂಕ್ ಖಾತೆ ಗಳಿಗೆ ₹41,000 ಹಾಗೂ ₹30,000 ಹೂಡಿಕೆ ಮಾಡಿದ್ದಾರೆ.ಆದರೆ ನಂತರ, ಹಣ ಹಿಂದಿರುಗಿಸಬೇಕೆಂದು ಕೇಳಿದಾಗ, ₹4,167 TDS ಪಾವತಿಸಿದರೆ ಮಾತ್ರ ಹಣ ನೀಡಲಾಗುತ್ತದೆ ಎಂದು ಹೇಳಿ, ಗಿರಿ ಯವರ TikTok Mall Store ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಇದರ ನಂತರ ಗಿರಿಯವರು ಸೈಬರ್ ಕ್ರೈಂ ಮೋಸದ ನೆಪದಲ್ಲಿ ವಂಚಿತರಾಗಿರುವುದಾಗಿ ಅರಿತು, ಸಂಬಂಧಿಸಿದ ಮಹಿಳೆಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಹುಲಿಮಾವು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.ಸೈಬರ್ ಕ್ರೈಂ ಇಲಾಖೆಯು ಈ ಕುರಿತು ತನಿಖೆ ಕೈಗೊಂಡಿದ್ದು, ಈ ರೀತಿಯ ವಂಚನೆಗಳಿಗೆ ಎಚ್ಚರಿಕೆಯಿಂದಿರುವಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.

