ಸುದ್ದಿ 

ಹೆಚ್‌ಎಸ್‌ಆರ್ ಲೇಔಟ್‌ ನಲ್ಲಿ ಪಿಜಿ ದೊರೆಯುತ್ತದೆ ಎಂದು ನಂಬಿಸಿ, ಯುವಕನಿಂದ ₹1.17 ಲಕ್ಷ ವಂಚನೆ

Taluknewsmedia.com

ಬೆಂಗಳೂರು, ಜೂನ್ 19 – ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ಪಿಜಿ (ಪೇಯಿಂಗ್ ಗೆಸ್ಟ್‌) ಬೇಕೆಂದು ಹುಡುಕುತ್ತಿದ್ದ ಒಬ್ಬ ಸಾಫ್ಟ್‌ವೇರ್ ಉದ್ಯೋಗಿಯು ಆನ್‌ಲೈನ್ ವಂಚನೆಗೆ ಬಲಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಅರ್ಜಿದಾರರಾದ ಪ್ರಶಾಂತ್ ಕುಮಾರ್ ಪ್ರಜಾಪತಿ ಅವರು ಈ ಸಂಬಂಧ ದೂರು ದಾಖಲಿಸಿದ್ದಾರೆ.ಪ್ರಶಾಂತ್ ರವರು #72, ಫಸ್ಟ್ ಫ್ಲೋರ್, 14ನೇ ಮೇನ್, 16ನೇ ಕ್ರಾಸ್‌ ರೋಡ್, ಐಪಿಎಸ್ ಕಾಲೋನಿ, ಸೆಕ್ಟರ್ 4, ಎಚ್‌ಎಸ್‌ಆರ್ ಲೇಔಟ್‌ನಲ್ಲಿ ವಾಸವಾಗಿದ್ದು, BUYSTARS ARKRMY TECHNOLOGY PVT LTD ಎಂಬ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು MagicBricks ಎಂಬ ಹೌಸಿಂಗ್ ವೆಬ್‌ಸೈಟ್‌ ಮೂಲಕ ಪಿಜಿ ಹುಡುಕುತ್ತಿದ್ದ ಸಂದರ್ಭದಲ್ಲಿ ‘ಸ್ವಸ್ತಿಕ್’ ಎಂಬ ವ್ಯಕ್ತಿ (ಮೊಬೈಲ್: 7879588250) ಪಿಜಿ ಮ್ಯಾನೇಜರ್ ಎಂದು ಪರಿಚಯಿಸಿಕೊಂಡು, ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಪಿಜಿ ಇರುವುದಾಗಿ ತಿಳಿಸಿದರು.ಇದನ್ನು ನಂಬಿದ ಪ್ರಶಾಂತ್ ಮೊದಲು ₹2,000 ಟೋಕನ್ ಅಮೌಂಟ್ ಅನ್ನು 2025ರ ಜೂನ್ 8 ರಂದು QR ಕೋಡ್ ಮೂಲಕ ಪಾವತಿಸಿದರು. ಬಳಿಕ “ವಿಸಿಟರ್ ಕಾರ್ಡ್ ವೆರಿಫಿಕೇಶನ್” ಹೆಸರಿನಲ್ಲಿ ₹10,010 ಹಾಗೂ ನಂತರ ₹20,020 ಹಣವನ್ನು ಬೇಡಿಕೊಳ್ಳಲಾಯಿತು. ಇದಾದ ನಂತರವೂ ಅನೇಕ ಹಂತಗಳಲ್ಲಿ ಹಣ ಕೇಳುತ್ತಾ, ಒಟ್ಟು ₹1,17,059.95 ಹಣವನ್ನು ದೂರುದಾರರಿಂದ ಪಡೆದುಕೊಳ್ಳಲಾಗಿದೆ.ಹಣವನ್ನು ರೀಫಂಡ್ ಮಾಡುವುದಾಗಿ ಭರವಸೆ ನೀಡಿದ್ದರೂ, ನಂತರ ಕರೆಗಳನ್ನು ಸ್ವೀಕರಿಸದೆ ನಾಪತ್ತೆಯಾದರೆಂದು ದೂರಿನಲ್ಲಿ ತಿಳಿಸಿದ್ದಾರೆ. ನಂಬಿಸಿ ಹಣ ಪಡೆದುಕೊಂಡಿರುವ ಈ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರಶಾಂತ್ ಹೆಚ್.ಎಸ್.ಆರ್ ಲೇಔಟ್‌ನ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ನಾಗರಿಕರು ಇಂತಹ ಆನ್‌ಲೈನ್ ವಂಚನೆಗಳಿಂದ ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರು ತಿಳಿಸಿದ್ದಾರೆ.

Related posts